ನೀರಿನ ತೊಟ್ಟಿಯಲ್ಲಿ ಬಿದ್ದು ಮಗು ಸಾವು

Child dies after falling into water tank

ಮುಂಡಗೋಡ 18: ತಾಲೂಕಿನ  ಗುಂಜಾವತಿ ಗ್ರಾಮದಲ್ಲಿ ಮಗುವೊಂದು ಮನೆಯ ಮುಂದಿನ ನೀರಿನ ತೊಟ್ಟಿಯಲ್ಲಿ ಬಿದ್ದು ಸಾವನ್ನಪ್ಪಿದ ಘಟನೆ ಗುರುವಾರ ನಡೆದಿದೆ.   

 ಮೃತಪಟ್ಟ ಸಾವು ವಿನಯ ಕುಂಬಾರ 2ವರ್ಷ್‌ ಎಂದು ಗುರುತಿಸಲಾಗಿದೆ. ಮನೆಯ ಮುಂದೆ ಬಾಲಕ ಆಟ ಆಡುತ್ತಾ ಮನೆಯ ಮುಂದಿನ ನೀರಿನ ತೊಟ್ಟಿ ಯಲ್ಲಿ ಆಯತಪ್ಪಿ ಬಿದ್ದು ಉಸಿರು ಗಟ್ಟಿ ಸಾವನ್ನಪ್ಪಿದೆ ಎನ್ನಲಾಗಿದೆ. ತಾಲೂಕಾ ಆಸ್ಪತ್ರೆ ದಾಖಲಿಸಿದಾದರೂ ಅದಾಗಲೇ ಬಾಲಕ ಪ್ರಾಣ ಬಿಟ್ಟಿತ್ತು. ತಾಲೂಕು ಆಸ್ಪತ್ರೆಗೆ ಇಲ್ಲಿಯ ಪೊಲೀಸರು ಭೇಟಿ ನೀಡಿ ಪೋಷಕರಿಂದ ಮಾಹಿತಿ ಪಡೆದರು.