ಮಕ್ಕಳ ಹಕ್ಕು ರಕ್ಷಣೆ ನಮ್ಮೆಲ್ಲರ ಜವಾಬ್ದಾರಿ: ಮಜೀದ್

ಲೋಕದರ್ಶನವರದಿ

ಹಾವೇರಿ : ಮಕ್ಕಳು ದೇಶದ ಸಂಪತ್ತು ಮಕ್ಕಳ ಹಕ್ಕುಗಳನ್ನು ರಕ್ಷಿಸಿ ಮಕ್ಕಳನ್ನು ಉತ್ತಮ ಪ್ರಜೆಗಳನ್ನಾಗಿ ಮಾಡುವ ಜವಾಬ್ದಾರಿ ನಮ್ಮೆಲ್ಲದರದ್ದಾಗಿದೆ ಎಂದು ಜಿಲ್ಲಾ ಮಕ್ಕಳ ಕಲ್ಯಾಣ ಸಮಿತಿ ಅದ್ಯಕ್ಷರಾದ ಎಸ್.ಹೆಚ್ ಮಜೀದ್ ಹೇಳಿದರು.

   ಕೈಲಾಸ್ ಸತ್ಯಾಥರ್ಿ ಚಿಲ್ಡ್ರನ್ ಪೌಂಡೇಶನ್, ನವದೆಹಲಿ , ಚೈತನ್ಯ ಮಕ್ಕಳ ಸಹಾಯವಾಣಿ ಹಾವೇರಿ, ಹಾಗೂ ಸ್ಪಂದನ ಸಂಸ್ಥೆ ಬೆಳಗಾವಿ ಇವರ ಸಂಯುಕ್ತಾಶ್ರಯದಲ್ಲಿ ಎಸ್.ಎಮ.ಎಸ್ ಕಾಲೇಜಿನಲ್ಲಿ ಏರ್ಪಡಿಸಿದ ಮಾನವ ಹಕ್ಕುಗಳ ದಿನಾಚರಣೆ ಹಾಗೂ ಮಕ್ಕಳ ಹಕ್ಕುಗಳ ಬಗ್ಗೆ ಚಿತ್ರ ಪ್ರದರ್ಶನವನ್ನು ಉದ್ಘಾಟಿಸಿ ಮಾತನಾಡಿದರು.

  ಪ್ರತಿ ಮಗು ಮತ್ತು ಯುವಕರು ತಮ್ಮ ಬಾಲ್ಯವನ್ನು ಆನಂದಿಸಲು, ಅವರು ಸ್ವಾತಂತ್ರ್ಯ,ಸುರಕ್ಷತೆ ಮತ್ತು ಶಿಕ್ಷಣದ ಹಕ್ಕುಗಳನ್ನು ಅರಿತುಕೊಳ್ಳಲು ಸಶಕ್ತರಾಗ ಬೇಕೆಂದರು, ಇಂದು ಮಕ್ಕಳಿಗೆ ಶಿಕ್ಷಣ ಅಂಕಗಳಿಗೆ ಸೀಮಿತವಾಗಿರದೆ ಮಾನವೀಯ ಮೌಲ್ಯಗಳನ್ನು ಹಾಗೂ ಬದುಕು ರೂಪಿಸುವ ಶಿಕ್ಷಣದ ಅವಶ್ಯಕತೆ ಇದೆ. ಪ್ರತಿಯೊಂದು ದೇಶ, ರಾಜ್ಯದಲಿ ್ಲಅಲ್ಲಿನ ಮಕ್ಕಳ ಅವರ ಸಂಪತ್ತು. ಒಂದು ವೇಳೆ ಮಕ್ಕಳ ಕ್ಷೇತ್ರವನ್ನು ನಿರ್ಲಕ್ಷ ಮಾಡಿದರೆ, ದೇಶ, ರಾಜ್ಯಗಳು ವಿನಾಶವಾಗವುದು ಖಚಿತ, ಆದ್ದರಿಂದ ಮಕ್ಕಳ ಹಕ್ಕುಗಳ ರಕ್ಷಣೆಯನ್ನು ಮಾಡದಿದ್ದರೆ ಅದು ನಮ್ಮ ಮೂಲಭೂತ ಕರ್ತವ್ಯಗಳ ಉಲ್ಲಂಘನೆಯಾಗತ್ತದೆ. ಅವರಿಗೆ ಉತ್ತಮ ಆರೋಗ್ಯ ಶಿಕ್ಷಣ ನೀಡುವುದರ ಜೊತೆಗೆ ಮಕ್ಕಳ ಹಕ್ಕುಗಳ ಉಲ್ಲಂಘನೆಯಾಗದ ರೀತಿಯಲ್ಲಿ ಸರಕಾರ ಹಾಗೂ ಎಲ್ಲ ಸಂಘ ಸಂಸ್ಥೆಗಳು ಸಾರ್ವಜನಿಕರು ಕಾಳಜಿವಹಿಸಬೇಕಿದೆ ಎಂದು ಎಸ್.ಹೆಚ್ ಮಜೀದ ಮಾತನಾಡಿದರು.

ಮುಖ್ಯ ಅತಿಥಿಗಳಾಗಿ ಜಿಲ್ಲಾ ಮಕ್ಕಳ ರಕ್ಷಣಾ ಘಟಕದ ಕಾನೂನು ಅಧಿಕಾರಿಯಾದ ಮಹಾಂತೇಶ ಬಸವನಾಯ್ಕರ್ ಮಾತನಾಡಿ ಪ್ರತಿಯೊಬ್ಬರಿಗೂ ಮಾನವ ಹಕ್ಕುಗಳನ್ನು ಒದಗಿಸಲಾಗಿದ್ದು, ಅವುಗಳನ್ನು ಸರಿಯಾಗಿ ಬಳಸಿಕೊಳ್ಳಬೇಕು. ಕಾನೂನಿನ ಮುಂದೆ ಎಲ್ಲರೂ ಸಮಾನರು ಕಾನೂನು ನಮ್ಮೆಲ್ಲರ ಹಕ್ಕುಗಳನ್ನು ರಕ್ಷಿಸುತ್ತದೆ. ರಾಷ್ಟ್ರೀಯತೆ, ಪ್ರಜಾಪ್ರಭುತ್ವ , ಆಹಾರ ಮತ್ತು ವಸತಿ ಪಡೆಯುವ ಹಕ್ಕು ಹೀಗೆ ಪ್ರತಿಯೊಬ್ಬರು ತಮ್ಮದೇ ಹಕ್ಕುಗಳನ್ನು ಹೊಂದಿದ್ದಾರೆ ಎಂದರು. ಮಕ್ಕಳ ಸಮಸ್ಯೆಗಳೆನಾದರೂ ಇದ್ದಲ್ಲಿ 1098 ಕ್ಕೆ ಉಚಿತ ಕರೆಮಾಡಿ ಎಂದರು.

ಅಧ್ಯಕ್ಷತೆಯನ್ನು  ಪ್ರಾಂಶುಪಾಲರಾದ ಎಸ್.ಹೆಚ್.ಕಬ್ಬಿಣಕಂತಿಮಠ ರವರು ವಹಿಸಿದ್ದರು. ಪ್ರಾಸ್ತಾವಿಕ ಹಾಗೂ ನಿರೂಪಣೆಯನ್ನು ಮಕ್ಕಳ ಸಹಾಯವಾಣಿ ತಂಡದ ಸದಸ್ಯರಾದ ಮಾರುತಿ ಹರಿಜನ ನಿರ್ವಹಿಸಿದರು. ಶಿವಾನಂದ್ ಗದೀಗೇರ. ಕವಿತಾ ಕೋರಿ ಮಾಡಿದರು. ಸುಮಾರು 150ಕ್ಕೂ ಹೆಚ್ಚು ವಿದ್ಯಾಥರ್ಿಗಳು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು. ಮಕ್ಕಳಿಗೆ ಮಾನವ ಹಕ್ಕುಗಳು ಹಾಗೂ ಮಕ್ಕಳ ಹಕ್ಕುಗಳ ಬಗ್ಗೆ ಉಪನ್ಯಾಸ ಏರ್ಪಡಿಸಲಾಗಿತ್ತು. ವೇದಿಕೆಯಲ್ಲಿ ಕೆ.ಎಚ್. ಸಿದ್ದಣ್ಣನವರ, ಎಮ್.ಎಸ್.ರಿತ್ತಿಮಠ, ಪರಶುರಾಮ ಗಚ್ಚಿಮನಿ ಇದ್ದರು.