ಮಕ್ಕಳು ಪಠ್ಯೇತರ ಚಟುವಟಿಕೆ ಅಳವಡಿಸಿಕೊಳ್ಳಿ: ಪ್ರಕಾಶ್

ರಾಣೇಬೆನ್ನೂರು: ಮಕ್ಕಳ ಸವರ್ಾಂಗೀಣ ಅಭಿವೃದ್ಧಿ ಮತ್ತು ವ್ಯಕ್ತಿತ್ವ ನಿಮರ್ಾಣಕ್ಕಾಗಿ ತಮ್ಮ ನಿತ್ಯದ ಶಿಕ್ಷಣದ ಜೊತೆಗೆ ಪಠ್ಯೇತರ ಚಟುವಟಿಕೆಗಳಾದ ಕಲೆ-ಸಾಹಿತ್ಯ-ಸಂಗೀತ ಮತ್ತು ಜನಪದ ಸಂಸ್ಕೃತಿಯ ಕಲೆಗಳನ್ನು ಅಳವಡಿಸಿಕೊಳ್ಳುವ ಮೂಲಕ ಭವಿಷ್ಯವನ್ನು ರೂಪಿಸಿಕೊಳ್ಳಲು ಮುಂದಾಗಬೇಕು ಎಂದು ಜೆಸಿಐ ಸಂಸ್ಥೆ ಪೂವರ್ಾಧ್ಯಕ್ಷ ಪ್ರಕಾಶ ಗಚ್ಚಿನಮಠ ಹೇಳಿದರು. 

ಅವರು ಇಲ್ಲಿನ ಶ್ರೀಗುರು ಸಂಗೀತ ಪಾಠಶಾಲೆಯಲ್ಲಿ ಜೆಸಿಐ ಸಂಸ್ಥೆ ಆಯೋಜಿಸಿದ್ದ, ವ್ಯಕ್ತಿತ್ವ ವಿಕಸನ ತರಬೇತಿ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.  ಉತ್ತಮ ಬೆಳವಣಿಗೆ ಭವಿಷ್ಯದ ನಾಗರೀಕರಾಗುವ ಲಕ್ಷಣ.  ಬಾಲ್ಯದ ಬದುಕು ಸಾಂಸ್ಕೃತಿಕವಾಗಿದ್ದರೆ, ಅವರ ಎಲ್ಲ ಹಂತದ ಬದುಕು ಅತ್ಯಂತ ಸಂತೋಷ ಮತ್ತು ಸಮೃದ್ಧಿಯಿಂದ ಕೂಡಿರುವಂತಾಗುತ್ತದೆ ಎಂದು ಮಕ್ಕಳಿಗೆ ಕರೆ ನೀಡಿದರು. 

ಕಲಾವಿದ ಇಸ್ಮಾಯಿಲ್ ಐರಣಿ ಅವರು ವ್ಯಕ್ತತ್ವ ವಿಕಸನ ಮತ್ತು ಮಕ್ಕಳು ವಿಷಯ ಕುರಿತಂತೆ ವಿಶೇಷ ಉಪನ್ಯಾಸ ನೀಡಿದರು.  ವೇದಿಕೆಯಲ್ಲಿ ನಾಮದೇವ ಸಿಂಪಿ ಸಮಾಜದ ಅಧ್ಯಕ್ಷ ಜಿ.ಡಿ.ಬಗಾಡೆ, ಇಮಾಮಸಾಬ ಉಕ್ಕುಂದ, ತಿಪ್ಪೇಶ ಚನ್ನಪ್ಪನವರ, ಇಮಾಂಬಿ ಐರಣಿ, ಶಿವರುದ್ರಪ್ಪ, ಲಕ್ಷ್ಮಣ ಕನಕಿ, ಪ್ರಕಾಶ ಬನ್ನಿಕೋಡ, ಆರ್.ವಿ.ಪಾಟೀಲ ಸೇರಿದಂತೆ ಮತ್ತಿತರ ಗಣ್ಯರು, ಮಕ್ಕಳು ಉಪಸ್ಥಿತರಿದ್ದರು.