ಪೌರತ್ವ ಪ್ರಕರಣ ಹಿಂದೂ-ಮುಸ್ಲಿಂರಲ್ಲಿ ಕಾಂಗ್ರೆಸ್ ಭಿನ್ನಮತ ಮೂಡಿಸುತ್ತಿದೆ

ಲೋಕದರ್ಶನವರದಿ

ರಾಣೇಬೆನ್ನೂರು: ಕೇಂದ್ರ ಸಕರ್ಾರವು ಜಾರಿಗೆ ತಂದಿರುವ ಪೌರತ್ವವನ್ನು ಕಾಂಗ್ರೇಸ್ನವರು ವಿರೋಧಿಸುವ ಮೂಲಕ ಹಿಂದೂ ಮತ್ತು ಮುಸ್ಲಿಂರಲ್ಲಿ ಭಿನ್ನಾಭಿಪ್ರಾಯ ಮೂಡಿಸಿ, ವೋಟಿಗಾಗಿ ಹುನ್ನಾರ ನಡೆಸುತ್ತಿರುವ ಕಾಂಗ್ರೇಸ್ನವರಿಗೆ ಮುಂದಿನದಿನಮಾನಗಳಲ್ಲಿ ತಕ್ಕ ಪಾಠ ಕಲಿಸಲಿದ್ದಾರೆ ಎಂದು ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ರಾಜ್ ಸಚಿವ ಕೆ.ಎಸ್.ಈಶ್ವರಪ್ಪ ಆರೋಪಿಸಿದರು.

ಅವರು ಸುದ್ದಿಗಾರರೊಂದಿಗೆ ಮಾತನಾಡಿದರು.  ಕಾಂಗ್ರೇಸ್ ಪಕ್ಷವು ರಾಜ್ಯ ಮತ್ತು ರಾಷ್ಟ್ರದಲ್ಲಿ ಅಧಿಕಾರ ಅನುಭವಿಸಿ ಇದೀಗ ಅಧಿಕಾರದಿಂದ ನಿರ್ಗಮಿಸಿದೆ.  ವೋಟಿಗಾಗಿ ಮುಸ್ಲಿಂರನ್ನು ಎತ್ತಿಕಟ್ಟುವ ಮೂಲಕ ತನ್ನ ಪಕ್ಷದ ಅದ:ಪತನಕ್ಕೆ ಕಾರಣವಾಗಿದೆ.  ಸಾರ್ವಜನಿಕರಲ್ಲಿ ಸುಳ್ಳು ಮತ್ತು ಅಪಪ್ರಚಾರಗಳನ್ನು ಹೇಳುತ್ತಾ ಸಮಾಜದಲ್ಲಿ ಗುಂಪುಗಾರಿಕೆ ಮಾಡುತ್ತಿದೆ.  ಇಂತಹ ಪಕ್ಷದಿಂದ ಜಾಗೃತರಾಗಿರಬೇಕೆಂದು ಹೇಳಿದರು. 

ಈ ಕ್ಷೇತ್ರದ ಮಾಜಿ ಶಾಸಕ, ವಿಧಾನಸಭಾ ಮಾಜಿ ಅಧ್ಯಕ್ಷ ಕೆ.ಬಿ.ಕೋಳಿವಾಡ ಅವರು ತಮ್ಮ ವಿಧಾನಸಭಾ ಚುನಾವಣೆಯಲ್ಲಿ ಸೋಲನ್ನು ಅನುಭವಿಸಲು ಇವಿಎಂ ಯಂತ್ರ ಹ್ಯಾಕ್ ಮಾಡಿದ್ದಾರೆ ಎಂದು ಅಪಾಧಿಸಿರುವುದು ಅವರ ವ್ಯಕ್ತಿತ್ವಕ್ಕೆ ಸಲ್ಲುವುದಲ್ಲ.  ಹ್ಯಾಕ್ ಮಾಡಿದ್ದರೆ, ಹುಣಸೂರು, ಶಿವಾಜಿನಗರ ಮತ್ತು ಹೊಸಕೋಟೆಯಲ್ಲಿ ಬಿಜೆಪಿಯೇತರ ಅಭ್ಯಥರ್ಿಗಳು ಏಕೆ ಗೆದ್ದುಬರುತ್ತಿದ್ದರೆಂದು? ಪ್ರಶ್ನಿಸಿದರು.

ಕೋಳಿವಾಡರವರ ಬಗ್ಗೆ ನನಗೆ ವ್ಯಯಕ್ತಿಕವಾಗಿ ಅಭಿಮಾನ ಮತ್ತು ಗೌರವಿವದೆ.  ಸೋಲಿಗೆ ಜನರ ತೀಪರ್ು ಕಾರಣವೆಂದು ಆತೀರ್ಪನ್ನು ಸ್ವಾಗತಿಸುವುದಾಗಿ ಹೇಳುವುದರ ಬದಲು ತಮ್ಮ ಸೋಲನ್ನು ಇವಿಎಂ ಯಂತ್ರದ ಮೇಲೆ ಹೋರಿಸಿರುವುದು ಸರಿಯಲ್ಲ. 

 ಹಾಗಿದ್ದರೆ, ಹಿಂದೆ ನಡೆದ ಜಾರ್ಖಂಡ ಚುನಾವಣೆಯಲ್ಲಿ ಕಾಂಗ್ರೇಸ್ಯುಕ್ತ ಸಕರ್ಾರ ಮತ್ತು ಮಹಾರಾಷ್ಟ್ರದಲ್ಲಿ ಅಧಿಕಾರ ಹೇಗೆ ಪಡೆದಿರೆಂದು? ಮರುಪ್ರಶ್ನಿಸಿದರು. 

ಕೇಂದ್ರದ ಮಹತ್ವದ ಯೋಜನೆಗಳಲ್ಲಿ ಒಂದಾಗಿರುವ ಪೌರತ್ವ ಯೋಜನೆಯಿಂದ ಈ ದೇಶದಲ್ಲಿಯ ಯಾವೊಬ್ಬ ಹಿಂದೂ-ಮುಸ್ಲಿಂರಿಗೂ ಸಹ ಧಕ್ಕೆ ಇಲ್ಲ.  ಸ್ವಾರ್ಥಕ್ಕೋಸ್ಕರ ರಾಜಕೀಯ ಪಕ್ಷಗಳು ವಿವಿಧ ಸಂಘಟನೆಗಳು ಒಗ್ಗೂಡಿ, ದೇಶದ ಅಭದ್ರತೆಗೆ ಹುನ್ನಾರ ನಡೆಸುತ್ತಿರುವುದು ಖಂಡನೀಯ.  ಪೌರತ್ವದ ಬಗ್ಗೆ ಸರಿಯಾದ ಮಾಹಿತಿ ಪಡೆದುಕೊಂಡು ಹೋರಾಡಲಿ ಎಂದರು.  ಶಾಸಕ ಅರುಣಕುಮಾರ ಪೂಜಾರ, ಚೋಳಪ್ಪ ಕಸವಾಳ,  ಬಸವರಾಜ ಹುಲ್ಲತ್ತಿ ಮತ್ತಿತರರಿದ್ದರು.