5 ದಶಕಗಳ ನಂತರ ಒಂದಾದ ವರ್ಗ ಸ್ನೇಹಿತರು
ಕಾಗವಾಡ 15: ಒಂದೇ ಶಾಲೆಯಲ್ಲಿ ಆಟ-ಪಾಠ ಮಾಡಿದ ಸಹಪಾಠಿಗಳು ಬರೋಬ್ಬರಿ 51 ವರ್ಷಗಳ ನಂತರ ಒಂದಾಗಿ, ಹಳೆ ನೆನಪುಗಳನ್ನು ಮೆಲುಕು ಹಾಕಿ, ಭಾವುಕರಾದ ಘಟನೆಗೆ ಕಾಗವಾಡ ತಾಲೂಕಿನ ಶೇಡಬಾಳ ಪಟ್ಟಣದ ಸನ್ಮತಿ ವಿದ್ಯಾಲಯ ಸಾಕ್ಷಿಯಾಗಿದೆ. ಹೌದು 1973-74 ನೇ ಸಾಲಿನಲ್ಲಿ ಶೇಡಬಾಳ ಪಟ್ಟಣದ ಎಸ್‌ಎಸ್‌ಎಸ್ ಸಮಿತಿಯ ಸನ್ಮತಿ ವಿದ್ಯಾಲಯದಲ್ಲಿ ಎಸ್‌ಎಸ್‌ಎಲ್‌ಸಿ ಓದಿದ ವಿದ್ಯಾರ್ಥಿಗಳು ಈಗ ಹಿರಿಯ ಜೀವಿಗಳಾಗಿ ಸುಮಾರು 51 ವರ್ಷಗಳ ಬಳಿಕ ರವಿವಾರ ದಿ. 13 ರಂದು ಅದೇ ಶಾಲೆಯಲ್ಲಿ ಒಂದಾಗಿ ತಮ್ಮ ಬಾಲ್ಯದ ಜೀವನವನ್ನು ನೆನೆದು, ಭಾವುಕರಾದರು. ತಾವು ಕಲಿತ ವರ್ಗ ಕೋಣೆಗಳು, ಆಟವಾಡಿದ ಆಟದ ಮೈದಾನ ಕಂಡು, ಹಿರಿಹಿರಿ ಹಿಗ್ಗಿದರು. ತಮಗೆ ಪಾಠ ಬೋಧನೆ ಮಾಡಿದ ಶಿಕ್ಷಕರನ್ನು ಸನ್ಮಾನಿಸಿ, ಗುರವಂದನೆ ಅರ್ಿಸಿ, ಖುಷಿಪಟ್ಟರು. ತಮ್ಮ ಹಳೆ ನೆನಪುಗಳನ್ನು ವೇದಿಕೆಯ ಮುಖಾಂತರ ಅನೇಕರು ಹಂಚಿಕೊಂಡರು. ನಿವೃತ್ತ ಶಿಕ್ಷಕ ಬಿ.ಎ. ಸವದತ್ತಿ, ಎಂ.ಎ. ಗಣೆ, ಎಂ.ಡಿ. ಅಲಾಸೆ ಸೇರಿದಂತೆ ಶಿಕ್ಷಕರು ಮತ್ತು ಹಳೇ ವಿದ್ಯಾರ್ಥಿ ಎಸ್.ಬಿ. ಉಗಾರೆ ಸ್ವಾಗತಿಸಿ, ಪರಿಚಯಿಸಿದರು. ಡಿ.ಟಿ. ಚೌಗುಲೆ, ಬಿ.ಕೆ. ಚಿಂಚಲೆ ತಮ್ಮ ವೃತ್ತಿ ಜೀವನದ ಕುರಿತು ತಿಳಿಸಿದರು. ಡಿ.ಜಿ. ಹೊನಕಾಂಬಳೆ, ಎಂ.ಎ ನಾಂದ್ರೆ, ಅಭಯಕುಮಾರ ನಾಂದ್ರೆ, ಸಿ.ಎಂ. ರತ್ನಪ್ಪಗೋಳ, ಎಂ.ಎ ಮುಜಾವರ, ಆರ್.ಕೆ. ಕೋಥಳಿ, ಆರ್.ಎನ್. ನರಸಗೌಡರ, ಆರ್.ಸಿ. ಕದಮ್, ವ್ಹಿ.ಎ. ಕುಡಚೆ, ಆರ್.ಬಿ. ಗಣೆ, ಆರ್.ಎಸ್. ಗಿರಿಗೌಡರ, ಎಸ್.ಬಿ. ಅವಟೆ ಸೇರಿದಂತೆ ಅನೇಕರು ಉಪಸ್ಥಿತರಿದ್ದರು.