ಹೋರಾಟಗಾರ ಸಂಗೊಳ್ಳಿ ರಾಯಣ್ಣನವರ ಪುಣ್ಯಸ್ಮರಣೆ

Commemoration of fighter Sangolli Rayanna

ಹೋರಾಟಗಾರ ಸಂಗೊಳ್ಳಿ ರಾಯಣ್ಣನವರ ಪುಣ್ಯಸ್ಮರಣೆ  

ಗದಗ 24: ಬ್ರೀಟಿಷರ ಪಾಲಿಗೆ ಸಿಂಹಸ್ವಪ್ನವಾಗಿ, ತನ್ನ ಇಡೀ ಜೀವನವನ್ನು ಸ್ವಾತಂತ್ರ್ಯ ಹೋರಾಟಕ್ಕೆ ಮೀಸಲಿಟ್ಟು ಕೊನೆಗೆ ದೇಶಕ್ಕಾಗಿ ವೀರ ಮರಣ ಹೊಂದಿದ ಕ್ರಾಂತಿಕಾರಿ ಹೋರಾಟಗಾರ ಸಂಗೊಳ್ಳಿ ರಾಯಣ್ಣನವರ ಪುಣ್ಯಸ್ಮರಣೆ ಅಂಗವಾಗಿ ಜನವರಿ 26ರಂದು ಸಾಯಂಕಾಲ 6:30ಕ್ಕೆ ಪಂಜಿನ ಮೇರವಣಿಗೆ ನಡೆಯಲಿದೆ ಎಂದು ಕ್ರಾಂತಿಸೇನಾ ಸಂಘಟನೆಯ ಗೌರವಾಧ್ಯಕ್ಷ ಪ್ರವೀಣ ಹಬೀಬ ಹೇಳಿದರು.       ನಗರದ ಪತ್ರಿಕಾ ಭವನದಲ್ಲಿ  ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ಜಿಲ್ಲಾ ಕ್ರಾಂತಿಸೇನಾ ಸಂಘಟನೆ ಹಾಗೂ ಸಂಗೋಳ್ಳಿ ರಾಯಣ್ಣನ ಅಭಿಮಾನಿಗಳಿಂದ ಈ ಕಾರ್ಯಕ್ರಮ ಆಯೋಜನೆ ಮಾಡಿದ್ದು, ಮೇರವಣಿಗೆಯು ಕಿತ್ತೂರ ಚೆನ್ನಮ್ಮ ವೃತ್ತದಿಂದ  ಪ್ರಾರಂಭವಾಗಿ, ಪೋಷ್ಟ್‌ ಆಫೀಸ್ ಮುಂಬಾಗ, ಪಂಚರೌಂಡ್, ಬಸವೇಶ್ವರ ಸರ್ಕಲ್ ನಲ್ಲಿರುವ ಬಸವೇಶ್ವರ ಪುತ್ಥಳಿಗೆ ಮಾಲಾರೆ​‍್ಣ ನಡೆಯಲಿದೆ.      

   ಹುಯಿಲಗೋಳ ನಾರಾಯಣರಾವ್ ಸರ್ಕಲ್, ಮಹೇಂದ್ರಕರ್ ಸರ್ಕಲ್, ಶ್ರೀ ತೋಂಟದಾರ್ಯ ಆಟೋ ಸ್ಟ್ಯಾಂಡ್, ಗಾಂಧಿ ಸರ್ಕಲ್ ಮಾರ್ಗವಾಗಿ ಕ್ರಾಂತೀವೀರ ಸಂಗೋಳ್ಳಿ ರಾಯಣ್ಣ ಸರ್ಕಲ್ ನಲ್ಲಿ ಸಂಪನ್ನವಾಗಲಿದ್ದು, ಎಲ್ಲ ದೇಶಭಕ್ತರು ಈ ಕಾರ್ಯಕ್ರಮಕ್ಕೆ ಆಗಮಿಸಿ ಯಶಸ್ವಿಗೋಳಿಸಬೇಕು ಅಂತ ಮನವಿ ಮಾಡಿದರು.     ಈ ವೇಳೆ ಜಿಲ್ಲಾ ಶ್ರೀ ಮಹರ್ಷಿ ವಾಲ್ಮೀಕಿ ಮದಕರಿ ನಾಯಕರ ಗಜಪಡೆ ಟ್ರಷ್ಟ್‌ ಅಧ್ಯಕ್ಷ ಕಿರಣ್ ಯಲ್ಲಪ್ಪ ನಾಯ್ಕರ್, ಪ್ರದೀಪ್ ಸರ್ವದೆ,  ರಾಮು ಗಡಾದ, ಕುಮಾರ ಮಾರನಬಸರಿ, ಶ್ರೀಕಾಂತ ಹೊಸಮನಿ ಸೇರಿದಂತೆ ಇತರರು ಉಪಸ್ಥಿತರಿದ್ದರು.