ಹಾವೇರಿ:ಎ. 12: ಸಮುದಾಯ ಜನರ ಆರೋಗ್ಯದ ಸ್ಥಿತಿಗತಿಗಳನ್ನು ವೈಜ್ಞಾನಿಕ ತಪಾಸಣೆಯ ಮೂಲಕ ಮಾಹಿತಿ ಸಂಗ್ರಹಿಸಲು ಇದೇ ಎಪ್ರಿಲ್ 15 ರಿಂದ ಜಿಲ್ಲೆಯಲ್ಲಿ ಮನೆ ಮನೆಗೆ ತೆರಳಿ ಆರೋಗ್ಯ ತಪಾಸಣೆ ಆರಂಭಿಸಲಾಗುವುದು ಎಂದು ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಹಣಾಧಿಕಾರಿ ರಮೇಶ ದೇಸಾಯಿ ಅವರು ಹೇಳಿದರು.
ಜಿಲ್ಲಾ ಪಂಚಾಯತ್ ಸಭಾಂಗಣದಲ್ಲಿ ಭಾನುವಾರ ಜಿಲ್ಲೆಯ ತಹಶೀಲ್ದಾರ, ತಾಲೂಕಾ ಪಂಚಾಯತ್ ಮುಖ್ಯ ಕಾರ್ಯನಿವರ್ಾಹಣಾಧಿಕಾರಿಗಳ, ಪ್ರಾಥಮಿಕ ಆರೋಗ್ಯ ಕೇಂದ್ರಗಳ ವೈದ್ಯಾಧಿಕಾರಿಗಳ ಸಭೆ ಜರುಗಿಸಿ ಕಮ್ಯೂನಿಟಿ ಹೆಲ್ತ್ ಚೆಕಪ್ ಕುರಿತಂತೆ ಚಚರ್ಿಸಿದರು.
ಜಿಲ್ಲೆಯಲ್ಲಿ ಕರೋನಾ ಪಾಸಿಟಿವ್ ಪ್ರಕರಣಗಳು ಪತ್ತೆಯಾಗಿಲ್ಲ. ಆದಾಗ್ಯೂ ತಳಮಟ್ಟದಲ್ಲಿ ಆರೋಗ್ಯದ ಸ್ಥಿತಿಗತಿಗಳ ಮಾಹಿತಿಗಾಗಿ ಸಮುದಾಯದ ಜನರ ಆರೋಗ್ಯ ತಪಾಸಣೆಗೊಳಪಡಿಸಿ ಹೆಲ್ತ್ ರಿಪೋಟ್ ಪಡೆಯಲು ಉದ್ದೇಶಿಸಲಾಗಿದೆ. ಸಾಮಾನ್ಯ ಅನಾರೋಗ್ಯ ವ್ಯಕ್ತಿಗಳಿಗೆ ಆಯಾ ಗ್ರಾಮದಲ್ಲೇ ಚಿಕಿತ್ಸೆ ನೀಡಲು ಹೆಲ್ತ್ ಶಿಬಿರಗಳನ್ನು ಆಯೋಜಿಸಲಾಗುವುದು. ತಪಾಸಣೆ ವೇಳೆ ಕರೋನಾ ಲಕ್ಷಣಗಳು ಯಾವುದಾದರೂ ವ್ಯಕ್ತಿಗಳಲ್ಲಿ ಪತ್ತೆಯಾದರೆ ಅವರಿಗೆ ಸೂಕ್ತ ಚಿಕಿತ್ಸೆ ನೀಡಿ ಸಮುದಾಯಕ್ಕೆ ಹರಡುವುದನ್ನು ತಪ್ಪಿಸುವ ಮುಂಜಾಗ್ರತಾ ಕ್ರಮವಾಗಿ ಕಮ್ಯೂನಿಟಿ ಹೆಲ್ತ್ಚೆಕಪ್ ಆರಂಭಿಸಲು ಉದ್ದೇಶಿಸಲಾಗಿದೆ ಎಂದು ತಿಳಿಸಿದರು.
ಸಾಮಾನ್ಯ ಆರೋಗ್ಯ ತಪಾಸಣೆ ವೇಳೆಯಲ್ಲಿ ಜನರಿಗೆ ಇತರ ಆರೋಗ್ಯ ಸಮಸ್ಯೆಗಳು ಕಂಡುಬಂದರೆ ಆಯಾ ಗ್ರಾಮದಲ್ಲೇ ಹೆಲ್ತ್ಕ್ಯಾಂಪ್ ನಡೆಸಿ ಚಿಕಿತ್ಸೆ ನೀಡಬೇಕು. ಸಕರ್ಾರಿ ವೈದ್ಯರ ಜೊತೆಗೆ ಭಾರತೀಯ ವೈದ್ಯಕೀಯ ಸಂಘ ಹಾಗೂ ಖಾಸಗಿ ವೈದ್ಯರ ನೆರವನ್ನು ಪಡೆದುಕೊಳ್ಳುವಂತೆ ಆರೋಗ್ಯ ಇಲಾಖಾ ಅಧಿಕಾರಿಗಳಿಗೆ ಸಲಹೆ ನೀಡಿದರು.
ಜಿಲ್ಲೆಯಲ್ಲಿ 17 ಲಕ್ಷ ಜನಸಂಖ್ಯೆ ಇದೆ, 708 ಗ್ರಾಮಗಳಿವೆ, 67 ಪ್ರಾಥಮಿಕ ಆರೋಗ್ಯ ಕೇಂದ್ರಗಳಿವೆ. ಈ ಆರೋಗ್ಯ ಕೇಂದ್ರಗಳ ಪೈಕಿ 47 ಕೇಂದ್ರಗಳಲ್ಲಿ ಎಂ.ಬಿ.ಬಿ.ಎಸ್. ವೈದ್ಯರು, 20 ಕೇಂದ್ರದಲ್ಲಿ ಆಯುಷ್ ವೈದ್ಯರು ಕಾರ್ಯನಿರ್ವಹಿಸುತ್ತಿದ್ದಾರೆ. ಜಿಲ್ಲೆಯ ಪ್ರತಿ ಪ್ರಾಥಮಿಕ ಆರೋಗ್ಯ ಕೇಂದ್ರದ ವ್ಯಾಪ್ತಿಯ ಗ್ರಾಮಗಳಲ್ಲಿ 10 ರಿಂದ 15 ಹಳ್ಳಿಗಳು ಬರುತ್ತವೆ. ಈ ಕೇಂದ್ರದ ವೈದ್ಯಾಧಿಕಾರಿಗಳು ತಮ್ಮ ವ್ಯಾಪ್ತಿಯಲ್ಲಿ ಪ್ರತಿದಿನ ಒಂದೊಂದು ಗ್ರಾಮ ಆಯ್ಕೆಮಾಡಿ ತಪಾಸಣೆ ಆರಂಭಿಸಬೇಕು. ಇದರಿಂದ ಪ್ರತಿ ದಿನ ಜಿಲ್ಲೆಯ 67 ಹಳ್ಳಿಗಳ ಸವರ್ೇ ಕಾರ್ಯ ಪೂರ್ಣಗೊಳ್ಳುತ್ತದೆ. 15 ದಿನದೊಳಗಾಗಿ ಎಲ್ಲ ಗ್ರಾಮಗಳ ಸವರ್ೇ ಪೂರ್ಣಗೊಳಿಸಬಹಹುದು ಎಂದು ಸಲಹೆ ನೀಡಿದರು.
ಆಶಾ, ಅಂಗನವಾಡಿ, ಕಿರಿಯ ಆರೋಗ್ಯ ಸಹಾಯಕರು ಒಳಗೊಂಡ ಮೂರುಜನರ ತಂಡ ರಚಿಸಿ ಪ್ರತಿ ತಂಡಕ್ಕೆ 50 ಮನೆಗಳಂತೆ ಹಂಚಿಕೆಮಾಡಿ ತಪಾಸಣೆ ಆರಂಭಿಸಬೇಕು. ಅಕ್ಕಪಕ್ಕ ಗ್ರಾಮದ ಆಶಾ, ಅಂಗನವಾಡಿ ಹಾಗೂ ಕಿರಿಯ ಆರೋಗ್ಯ ಸಹಾಯಕರನ್ನು ನಿಯೋಜಿಸಿ ಗ್ರಾಮದ ಮನೆಗಳ ಸಂಖ್ಯೆಗನುಸಾರ ಹೆಚ್ಚುವರಿ ತಂಡ ರಚಿಸಿ ಪ್ರತಿ ಮನೆಯ ಪ್ರತಿ ವ್ಯಕ್ತಿಯ ಮಾಹಿತಿಯನ್ನು ಪಡೆಯಬೇಕು. ದೊಡ್ಡ ಗ್ರಾಮಗಳಾದ ಎರಡು ದಿನ ತಪಾಸಣೆ ನಡೆಸಿ. ಈ ತಂಡಗಳು ಬೆಳಿಗ್ಗೆ ಸಂಗ್ರಹಿಸಿದ ಮಾಹಿತಿ ಅನುಸಾರ ಮಧ್ಯಾಹ್ನ ಆಯಾ ಗ್ರಾಮದಲ್ಲೇ ಸಕರ್ಾರಿ ಶಾಲೆ ಅಥವಾ ಕಟ್ಟಡಗಳಲ್ಲಿ ಹೆಲ್ತ್ಕ್ಯಾಂಪ್ ನಡೆಸಿ ಅಗತ್ಯವಿರುವ ಜನರಿಗೆ ಚಿಕಿತ್ಸೆ ನೀಡಿ. ಕೋವಿಡ್ ಲಕ್ಷಣಗಳು ಕಂಡುಬಂದರೆ ಮಾದರಿ ಸಂಗ್ರಹಕ್ಕೆ ತಾಲೂಕಾ ಆರೋಗ್ಯ ಕೇಂದ್ರಗಳಿಗೆ ವಾಹನಗಳ ಮೂಲಕ ಕಳುಹಿಸಿಕೊಡಿ ಎಂದು ಪ್ರಾಥಮಿಕ ಆರೋಗ್ಯ ಕೇಂದ್ರಗಳ ವೈದ್ಯಾಧಿಕಾರಿಗಳಿಗೆ ಸೂಚನೆ ನೀಡಿದರು.
ಪ್ರಾಥಮಿಕ ಆರೋಗ್ಯ ಕೇಂದ್ರದ ವೈದ್ಯಾಧಿಕಾರಿಗಳು ಆಯಾ ಕೇಂದ್ರ ವ್ಯಾಪ್ತಿಯ ಸಮೀಕ್ಷೆಯ ಮುಖ್ಯಸ್ಥರಾಗಿರುತ್ತಾರೆ. ಪೋಲಿಯೋ ಲಸಿಕೆ ಮಾದರಿಯಲ್ಲಿ ಮನೆ ಮನೆಯ ಗುರುತು ಸಮೀಕ್ಷೆಗಳನ್ನು ಕೈಗೊಳ್ಳಬೇಕು.
ಬೆಳಿಗ್ಗೆಯಿಂದ ಮಧ್ಯಾಹ್ನ 12 ಗಂಟೆವರೆಗೆ ಆಸ್ಪತ್ರೆಯಲ್ಲಿ ಹೊರ ರೋಗಿಗಳಿಗೆ ಚಿಕಿತ್ಸೆ ನೀಡಿ ಮಧ್ಯಾಹ್ನದ ನಂತರ ಎಲ್ಲ ಆರೋಗ್ಯ ಸಿಬ್ಬಂದಿಗಳೊಂದಿಗೆ ಸಮೀಕ್ಷೆಗೆ ಆಯ್ಕೆಮಾಡಿಕೊಂಡ ಗ್ರಾಮಕ್ಕೆ ತೆರಳಬೇಕು. ಆಯಾ ಗ್ರಾಮದ ಸಕರ್ಾರಿ ಕಟ್ಟಡ ಅಥವಾ ಸಕರ್ಾರಿ ಶಾಲಾ ಕಟ್ಟಡಗಳಲ್ಲಿ ಚಿಕಿತ್ಸೆ ನೀಡಬೇಕು ಎಂದು ಸೂಚಿಸಿದರು.
ಮನೆ ಮನೆ ಸಮೀಕ್ಷೆ ನಡೆಸುವ ಕಾರ್ಯಕತರ್ೆಯರಿಗೆ ವಾಹನ ಸೌಕರ್ಯ, ಅಕ್ಷರ ದಾಸೋಹದಡಿ ಊಟದ ವ್ಯವಸ್ಥೆ, ಆಯಾ ಗ್ರಾಮಗಳಲ್ಲಿ ತಾತ್ಕಾಲಿಕ ಆರೋಗ್ಯ ಶಿಬಿರ ನಡೆಸಿ ತಪಾಸಣೆ ನಡೆಸಲು ಅಗತ್ಯವಾದ ಸಕರ್ಾರಿ ಕಟ್ಟಡ ಅಥವಾ ಶಾಲೆಗಳನ್ನು ಗುರುತಿಸಿ ಕುಡಿಯುವ ನೀರು ಸೇರಿದಂತೆ ಮೂಲ ಸೌಕರ್ಯ ಕಲ್ಪಿಸಲು ತಹಶೀಲ್ದಾರ, ತಾಲೂಕಾ ಪಂಚಾಯತಿ ಕಾರ್ಯನಿವರ್ಾಹಣಾಧಿಕಾರಿಗಳು ಉಸ್ತುವಾರಿ ವಹಿಸಲು ಸೂಚನೆ ನೀಡಿದರು.
ಸಮೀಕ್ಷೆ ಕಾರ್ಯಕರ್ತರಿಗೆ ಅಗತ್ಯವಾದ ವೈದ್ಯಕೀಯ ಸೌಲಭ್ಯಗಳು, ಮಾಸ್ಕ್, ಸ್ಯಾನಿಟೈಸರ್ ವ್ಯವಸ್ಥೆ ಹಾಗೂ ಗೂಗಲ್ ಆಧಾರಿತ ಸಮೀಕ್ಷಾ ಮಾಹಿತಿಯ ವರದಿಯನ್ನು ಕಳುಹಿಸುವ ಕೊಡುವ ವ್ಯವಸ್ಥೆ ಸೇರಿದಂತೆ ಅಗತ್ಯ ಕ್ರಮಗಳನ್ನು ಕೈಗೊಳ್ಳುವಂತೆ ಆರೋಗ್ಯ ಇಲಾಖಾ ಅಧಿಕಾರಿಗಳಿಗೆ ಸೂಚಿಸಿದರು.
ಗ್ರಾಮಗಳಲ್ಲಿ ನಡೆಯುವ ಹೆಲ್ತ್ ಕ್ಯಾಂಪ್ಗಳಲ್ಲಿ ಸಾಮಾಜಿಕ ಅಂತರ ಕಾಯ್ದುಕೊಳ್ಳಬೇಕು. ಸಮೀಕ್ಷಾ ತಂಡಕ್ಕೆ ಅಗತ್ಯವಾದ ತರಬೇತಿಗಳನ್ನು ನೀಡಬೇಕು. ಸೋಮವಾರ ಹಾಗೂ ಮಂಗಳವಾರದೊಳಗೆ ತಾಲೂಕಾವಾರು ಸಭೆ ನಡೆಸಬೇಕು.
ಪ್ರಾಥಮಿಕ ಆರೋಗ್ಯ ಕೇಂದ್ರವಾರು ತಪಾಸಣೆಯ ಯೋಜನೆಯನ್ನು ಸಿದ್ಧಪಡಿಸಿ ಎಪ್ರಿಲ್ 15 ರ ಬುಧವಾರದಿಂದ ಅಧಿಕೃತವಾಗಿ ಸಮೀಕ್ಷೆ ಕಾರ್ಯವನ್ನು ಕಡ್ಡಾಯವಾಗಿ ಆರಂಭಿಸುವಂತೆ ನಿದರ್ೆಶನ ನೀಡಿದರು.
ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ.ರಾಜೇಂದ್ರ ದೊಡ್ಡಮನಿ, ಆರ್.ಸಿ.ಎಚ್. ಅಧಿಕಾರಿ ಡಾ.ಜಯಾನಂದ, ಹಾವೇರಿ ಉಪವಿಭಾಗಾಧಿಕಾರಿ ಡಾ.ದಿಲೀಷ್ ಶಶಿ, ಸವಣೂರು ಉಪವಿಭಾಗಾಧಿಕಾರಿ ಶ್ರೀಮತಿ ಅನ್ನಪೂರ್ಣ ಮುದಕಮ್ಮನವರ, ಜಿಲ್ಲೆಯ ಎಲ್ಲ ತಾಲೂಕಿನ ತಹಶೀಲ್ದಾರಗಳು, ತಾಲೂಕು ಪಂಚಾಯತಿ ಕಾರ್ಯನಿವರ್ಾಹಣಾಧಿಕಾರಿಗಳು, ತಾಲೂಕಾ ಆರೋಗ್ಯಾಧಿಕಾರಿಗಳು, ಪ್ರಾಥಮಿಕ ಆರೋಗ್ಯ ಕೇಂದ್ರಗಳ ವೈದ್ಯಾಧಿಕಾರಿಗಳು ಭಾಗವಹಿಸಿದ್ದರು.