ಗ್ರಂಥರಾಜ್ ಜ್ಞಾನೇಶ್ವರಿ, ಅಖಂಡ ಹರಿನಾಮ ಸಪ್ತಾಹದ ಸಮುದಾಯ ಪಠಣ ಸಮಾರಂಭ

Community chanting ceremony for Grantha Raj Gyaneshwari, Akhand Harinama Saptah

ಸಂಬರಗಿ, 01 : ಜಂಬಗಿ ಗ್ರಾಮದಲ್ಲಿ ಬ್ರಹ್ಮ ಚೈತನ್ಯ ಶ್ರೀ ಸದ್ಗುರು ತಾತ್ಯಾಸಾಹೇಬ್ ವಾಸ್ಕರ್ ಮಹಾರಾಜರ ಆಶೀರ್ವಾದದೊಂದಿಗೆ, ವೈ ಬಾಬಾಜಿ ಬಂಡ್‌ಗರ್ ಮಹಾರಾಜರ ಇವರ ಕೈಪಾ ಅರ್ಶೀವಾದದಿಂದಾ ಶ್ರೀ ಗ್ರಂಥರಾಜ್ ಜ್ಞಾನೇಶ್ವರಿ ಮತ್ತು ಅಖಂಡ ಹರಿನಾಮ ಸಪ್ತಾಹದ ಸಮುದಾಯ ಪಠಣ ಸಮಾರಂಭವು ಏಪ್ರಿಲ್ 28 ರಿಂದ ಪ್ರಾರಂಭವಾಗಿ ಮೇ 5 ರಂದು ಕೊನೆಗೊಳ್ಳಲಿದೆ. ದೈನಂದಿನ ಧರ್ಮೋಪದೇಶಗಳು, ಕೀರ್ತನೆಗಳು, ಪಠಣಗಳು, ಓದುವ ಕಾರ್ಯಕ್ರಮಗಳು ಪ್ರತಿದಿನ ಪ್ರಾರಂಭವಾಗಿವೆ. ಭಕ್ತರು ಇದರ ಸದುಪಯೋಗ ಪಡೆದುಕೊಳ್ಳಬೇಕೆಂದು ವಿನಂತಿಸಲಾಗಿದೇ.  

ಪ್ರತಿದಿನ, ವಿವಿಧ ಗುಂಪುಗಳಿಂದ ಧರ್ಮೋಪದೇಶಗಳು ಮತ್ತು ಕೀರ್ತನೆಗಳನ್ನು ಆಯೋಜಿಸಲಾಗುತ್ತದೆ. ತುಕಾರಾಂ ಹಜಾರೆ ಮಹಾರಾಜ ಶಿರೂರು, ಬಸು ಹಳ್ಳುರ ಮಹಾರಾಜ ಹುನ್ನೂರ, ಅಪ್ಪಾಸಾಹೇಬ ಪಾಟೀಲ ಮಹಾರಾಜ ಶಿರೂರು, ರಾಜಾರಾಮ ಪಾಂಢರೆ ಮಹಾರಾಜ ಶಿಂಗ್ಣಾಪುರ, ಚೈತನ್ಯ ವಾಸ್ಕರ ಮಹಾರಾಜ ಪಂಢರಪುರ,ಇವರೀಂದ ಪ್ರವಚನ, ಕೀರ್ತನೆ ಕಾರ್ಯಕ್ರಮಗಳನ್ನು ಪ್ರತಿದಿನ ಆಯೋಜಿಸಲಾಗಿದೆ.  

ಬೆಳಿಗ್ಗೆ 4 ರಿಂದ 6 ರವರೆಗೆ ಕಾಕಡ ಆರತಿ, 7 ರಿಂದ 11 ರವರೆಗೆ ಜ್ಞಾನೇಶ್ವರಿ ಪಠಣ, 12 ರಿಂದ 3 ರವರೆಗೆ ಊಟ, ಮತ್ತು ರಾತ್ರಿ 9 ರಿಂದ 11 ರವರೆಗೆ ಕೀರ್ತನೆ ಸೇರಿದಂತೆ ದೈನಂದಿನ ಕಾರ್ಯಕ್ರಮವನ್ನು ಆಯೋಜಿಸಲಾಗಿದೆ. ಮೇ 5 ರಂದು, ಎಚ್ ಬಿ ಪಿ ಕೃಷ್ಣ ಪಾಟೀಲ್ ಮಹಾರಾಜ್ ಕರೋಲಿ ಟಿ ಅವರ ಸಂಜೆ ಕೀರ್ತನೆ ಮತ್ತು ದಿಂಡಿ ಸಮಾರಂಭ ನಡೆಯಲಿದೆ.