ಮಹಾಲಿಂಗಪುರ 10: ಹಿಂದಿನ ಭಾಜಪ ಸರ್ಕಾರದ ಮೇಲೆ ಕಾಂಗ್ರೆಸ್ ಸುಳ್ಳು ಆಪಾದನೆಗಳನ್ನು ಮಾಡುತ್ತಾ ಅಧಿಕಾರಕ್ಕೆ ಬಂದು, ಸ್ವಜನ ಪಕ್ಷಪಾತ ಎಸಗಿ ಎಲ್ಲೆ ಮೀರಿದ ಬ್ರಷ್ಟಾಚಾರ ನಡೆಸಿ ಕಾಂಗ್ರೆಸ್ ಸರ್ಕಾರ ದೇಶದಲ್ಲಿಯೇ ಪ್ರಥಮ ಸ್ಥಾನ ಪಡೆದಿದೆ ಎಂದು ಕಾಂಗ್ರೆಸ್ ಪಕ್ಷದ ಆಡಳಿತದ ಕಾರ್ಯ ವೈಖರಿ ಬಗ್ಗೆ ಚಿತ್ರದುರ್ಗ ಸಂಸದ ಗೋವಿಂದ ಕಾರಜೋಳ ಲೇವಡಿ ಮಾಡಿದರು.
ಗುರುವಾರ ಮುಂಜಾನೆ ಮಹಾಲಿಂಗಪುರ ಪಟ್ಟಣದ ಹಿತೈಷಿಗಳ ಮನೆಗೆ ಸೌಹಾರ್ದ ಭೇಟಿ ನೀಡಿದ ಸಂದರ್ಭದಲ್ಲಿ ಪತ್ರಿಕಾಗೋಷ್ಠಿ ನಡೆಸಿ ಮಾತನಾಡಿದ ಅವರು, ಕಾಂಗ್ರೆಸ್ ಪಕ್ಷದ ಸಿದ್ಧರಾಮಯ್ಯ ಸರ್ಕಾರ ಎರಡು ವರ್ಷಗಳನ್ನು ಪೂರೈಸಿದನ್ನು ಬಿಟ್ಟರೆ ರಾಜ್ಯದಲ್ಲಿ ಅಭಿವೃದ್ಧಿ ಸಂಪೂರ್ಣ ಶೂನ್ಯವಾಗಿದೆ. ಹಿಂದಿನ ಭಾಜಪ ಪಕ್ಷದ ಅಭಿವೃದ್ಧಿ ಯೋಜನೆಗಳಿಗೆ ತಿಲಾಂಜಲಿ ಇಟ್ಟು, ಮುಂದುವರಿಕೆಗೆ ಲಂಚಕ್ಕೆ ಬೇಡಿಕೆ ಇಟ್ಟಿದ್ದಾರೆ.
ಇದರಿಂದ ಬೇಸತ್ತ 10 ಜನ ಗುತ್ತಿಗೆದಾರರು, 12 ಜನ ಅಧಿಕಾರಿಗಳು ಮತ್ತು ರೈತರಿಗೆ ಸರಿಯಾಗಿ ಸೌಲಭ್ಯಗಳನ್ನು ಒದಗಿಸದೆ ಅವರು ಸಾಲಸೋಲ ಮಾಡಿ 3400 ಜನ ಆತ್ಮಹತ್ಯೆಗೆ ಶರಣಾಗಿದ್ದಾರೆ. ಇನ್ನು ಸರ್ಕಾರಿ ಆಸ್ಪತ್ರೆಗಳಲ್ಲಿ ವೈದ್ಯರು ಮತ್ತು ಸಿಬ್ಬಂದಿಗಳಿಲ್ಲದೆ ಬಾಣಂತಿಯರಿಗೆ ಸರಿಯಾಗಿ ಆರೈಕೆ ಕೊರತೆಯಿಂದ 730 ಬಾಣಂತಿಯರು, 1100 ಶಿಶುಗಳು ಮರಣ ಹೊಂದಿವೆ ಎಂದು ಅಂಕಿ ಅಂಶಗಳ ಸಮೇತ ಮಾಹಿತಿ ನೀಡಿದರು.
ಸರ್ಕಾರದ ಬ್ರಷ್ಟಾಚಾರದ ಕುರಿತು ಹಿರಿಯ ಶಾಸಕ ರಾಯರೆಡ್ಡಿ ಅವರೆ ಹೇಳಿದ್ದಲ್ಲದೆ, ಇದಕ್ಕೆ ಪುಷ್ಟಿ ಎಂಬಂತೆ 40 ಕ್ಕೂ ಹೆಚ್ಚು ಕಾಂಗ್ರೆಸ್ ಶಾಸಕರು ತಮ್ಮ ಕ್ಷೇತ್ರಗಳ ಅಭಿವೃದ್ಧಿಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಸಚಿವರುಗಳು ಒಂದು ಪೈಸೆ ಅನುದಾನ ನೀಡಿಲ್ಲವೆಂದು ಅಸಮಾಧಾನ ವ್ಯಕ್ತಪಡಿಸಿ ಹೈಕಮಾಂಡಿಗೆ ಪತ್ರ ಬರೆದಿದ್ದಾರೆ ಎಂದರು.
ಸಿಸಿಬಿ, ಎಸಿಬಿ, ಲೋಕಾಯುಕ್ತ, ಬೆಲೆ ಏರಿಕೆ, ಹಗರಣಗಳನ್ನು ಮುಚ್ಚಿ ಹಾಕುವ, ಹೆಣ್ಣು ಮಕ್ಕಳ ಅತ್ಯಾಚಾರ ಪ್ರಕರಣಗಳು, ಎಸ್ ಸಿ /ಎಸ್ ಟಿ 38 ಸಾ ಕೋಟಿ ಅನುದಾನ ಇನ್ನೂ ಅನೇಕ ಕಾಂಗ್ರೆಸ್ ಸರ್ಕಾರ ಮಾಡಿರುವ ದುರ್ಬಳಕೆ ಪ್ರಕರಣಗಳ ಬಗ್ಗೆ ನಾಡಿನ ಜನತೆಗೆ ತಿಳಿಸುವ ಸಲುವಾಗಿ ಜನಾಕ್ರೋಶ ಅಭಿಯಾನವನ್ನು ಮೈಸೂರಿನಿಂದ ಆರಂಭಿಸಿದ್ದೇವೆ.ಮುಂದಿನ ದಿನಗಳಲ್ಲಿ 30 ಜಿಲ್ಲೆಗಳಲ್ಲಿಯೂ ಈ ಜನಾಕ್ರೋಶ ಅಭಿಯಾನ ಮುಂದುವರಿಯಲಿದೆ ಎಂದರು.
ಈ ಸಂದರ್ಭದಲ್ಲಿ ಚಿತ್ರದುರ್ಗ ಸಂಸದ ಗೋವಿಂದ ಕಾರಜೋಳ, ಬಿಡಿಸಿಸಿ ಬ್ಯಾಂಕ್ ನಿರ್ದೇಕರು ಬಸನಗೌಡ ಪಾಟೀಲ, ಮಾಜಿ ಜಿಪಂ ಸದಸ್ಯ ಮಹಾಂತೇಶ ಹಿಟ್ಟಿನಮಠ ಮುಖಂಡರಾದ ಆರ್ ಟಿ ಪಾಟೀಲ,ಧರೆಪ್ಪ ಸಾಂಗ್ಲೀಕರ, ಕೆ ಆರ್ ಮಾಚಪ್ಪನ್ನವರ, ರಾಜುಗೌಡ ಪಾಟೀಲ, ರಾಜು ಯಡಹಳ್ಳಿ, ಬಿ ಜಿ ಮಳಲಿ, ಶ್ರೀಶೈಲ ಚನ್ನನವರ, ರಾಜು ಬರಮೋಜಿ, ಹನಮಂತ ತುಳಶಿಗೇರಿ, ಆರ್ ಕೆ ಮಳಲಿ,ಅಶೋಕಗೌಡ ಪಾಟೀಲ, ಶೇಖರ ಅಂಗಡಿ, ಸಿದ್ದಣ್ಣಗೌಡ ಪಾಟೀಲ, ಮಹಾಲಿಂಗಪ್ಪ ತಟ್ಟಿಮನಿ, ವೆಂಕಣ್ಣ ಗುಂಡಾ, ಜಿ ಎಸ್ ಗೊಂಬಿ, ಶಿವಲಿಂಗ ಘಂಟಿ, ಭೀಮಶಿ ಗೌಂಡಿ, ಶಂಕರಗೌಡ ಪಾಟೀಲ, ಅರ್ಜುನ ಮೋಪಗಾರ, ಭಾಷಾ ಯಾದವಾಡ, ಶಿವಬಸು ಗೌಂಡಿ, ವಿಜಯ ಸಭಕಾಳೆ, ಚನ್ನಪ್ಪ ಪಟ್ಟಣಶೆಟ್ಟಿ, ಮಹೇಶ ಜಿಡ್ಡಿಮನಿ, ಶೇಖರ ಮಗದುಮ,ಬಸವರಾಜ ಮಡಿವಾಳ, ಮಹಾಲಿಂಗ ಬುದ್ನಿ, ಸೇರಿದಂತೆ ಅನೇಕ ಮುಖಂಡರು ಮತ್ತು ಕಾರ್ಯಕರ್ತರು ಉಪಸ್ಥಿತರಿದ್ದರು.