ಕಾಂಗ್ರೆಸ್ ಸರ್ಕಾರ ಭ್ರಷ್ಟಾಚಾರದಿಂದ ಅಭಿವೃದ್ಧಿ ಸಾಧ್ಯವಾಗುತ್ತಿಲ್ಲ: ಶಾಸಕ ಐಹೊಳೆ

Congress government is not able to develop due to corruption: MLA Aihole

ರಾಯಬಾಗ 10: ಕಾಂಗ್ರೆಸ್ ನೇತೃತ್ವದ ರಾಜ್ಯ ಸರ್ಕಾರ ಭ್ರಷ್ಟಾಚಾರದಲ್ಲಿ ಮುಳಗಿದ್ದರಿಂದ ಅಭಿವೃದ್ಧಿಗಾಗಿ ಅನುದಾನ ನೀಡುತ್ತಿಲ್ಲ. ಇದರಿಂದ ಅಭಿವೃದ್ಧಿ ಕಾಮಗಾರಿ ಕೈಗೊಳ್ಳಲು ಸಾಧ್ಯವಾಗುತ್ತಿಲ್ಲವೆಂದು ಶಾಸಕ ಡಿ.ಎಮ್‌.ಐಹೊಳೆ ಅವರು ಸರ್ಕಾರದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.  

ಗುರುವಾರ ತಾಲೂಕಿನ ಭೆಂಡವಾಡ ಗ್ರಾಮದಲ್ಲಿ ಲೋಕೋಪಯೋಗಿ ಇಲಾಖೆಯಡಿ ಮಂಜೂರಾದ 1 ಕೋಟಿ ರೂ. ಅನುದಾನದಲ್ಲಿ ಭೆಂಡವಾಡ-ಚಿಕ್ಕೋಡಿ ರೈಲ್ವೆ ಸ್ಟೇಷನ್ ರಸ್ತೆ ಕಾಮಗಾರಿ ಹಾಗೂ ಮಂಟೂರ ಗ್ರಾಮದಲ್ಲಿ ಸಮಾಜ ಕಲ್ಯಾಣ ಇಲಾಖೆಯಡಿ ಮಂಜೂರಾದ 20 ಲಕ್ಷ ರೂ. ಅನುದಾನದಲ್ಲಿ ಡಾ.ಬಿ.ಆರ್‌.ಅಂಬೇಡ್ಕರ್ ಸಮುದಾಯ ಭವನ ನಿರ್ಮಾಣ ಕಾಮಗಾರಿಗೆ ಚಾಲನೆ ನೀಡಿ ಮಾತನಾಡಿದ ಅವರು, ರಾಯಬಾಗ ಮತಕ್ಷೇತ್ರದ ಅಭಿವೃದ್ಧಿಗಾಗಿ ಸದಾ ಕಂಕಣಬದ್ಧವಾಗಿದ್ದು, ಎಲ್ಲ ಗ್ರಾಮಗಳಿಗೆ ಮೂಲಭೂತ ಸೌಲಭ್ಯ ಕಲ್ಪಿಸಲಾಗುವುದು ಎಂದು ತಿಳಿಸಿದರು.  

ಎಇಇ ಆರ್‌.ಬಿ.ಮನವಡ್ಡರ, ರಾಜೇಶ ಡಂಗ, ಶೋಭಾ ಮೇಗಾಡೆ, ಸುರೇಶ ಚೌಗುಲೆ, ಅಪ್ಪು ಬಾನೆ, ನಿಂಗಪ್ಪ ಪಕಾಂಡಿ, ಸಂಗಪ್ಪಾ ಬೆನ್ನಾಳೆ, ರೇವಣು ದುಪಾದುಳೆ, ಡಾ.ಅಪ್ಪಯ್ಯ ನಾಯಿಕ, ಮಹಾದೇವ ಸಾರಾಪೂರೆ, ಉಮೇಶ ಪೂಜೇರಿ, ಅಪ್ಪಾಸಾಬ ದೇಸಾಯಿ, ರಾವಸಾಬ ದೇಸಾಯಿ, ಭೀಮು ಹಳವರ, ಉದಯ ಉಪ್ಪಾರ, ಮುತ್ತೇಪ್ಪ ನಾಯಿಕ, ಗುರುನಾಥ ಹಂಜಿ, ರಾವಸಾಬ ಮೇಗಾಡೆ, ಶಿವಾನಂದ ಉಪ್ಪಾರ ಸೇರಿ ಅನೇಕರು ಇದ್ದರು.