ಪಿ.ಒ.ಕೆ ವಶಪಡಿಸಿಕೊಂಡು ಪಾಕಿಗೆ ಪಾಠ ಕಲಿಸಿ: ಶಾಸಕ ಲಕ್ಷ್ಮಣ ಸವದಿ
ಅಥಣಿ 26: ಕಾಶ್ಮೀರದ ಜೊತೆಗೆ ಭಾರತದಲ್ಲಿನ ಉಗ್ರವಾದಿ ಚಟುವಟಿಕೆಗಳ ನಿರ್ನಾಮಕ್ಕಾಗಿ ಪಿ.ಒ.ಕೆ ವಶಪಡಿಸಿಕೊಳ್ಳುವ ಮೂಲಕ ಪಾಕಿಸ್ತಾನಕ್ಕೆ ತಕ್ಕ ಪಾಠ ಕಲಿಸಬೇಕು ಎಂದು ಶಾಸಕ ಲಕ್ಷ್ಮಣ ಸವದಿ ಕೇಂದ್ರ ಸರಕಾರವನ್ನು ಆಗ್ರಹಿಸಿದರು.
ಅವರು ಲೋಕೋಪಯೋಗಿ ಇಲಾಖೆಯಡಿ 9 ಕೋಟಿ ಅನುದಾನದಲ್ಲಿ ಮಂಜೂರಾದ ಅಥಣಿ-ಐನಾಪರ ರಸ್ತೆಯ 2.6 ಕಿಲೋ ಮೀಟರ್ ರಸ್ತೆ ಅಭಿವೃದ್ಧಿ ಕಾಮಗಾರಿಗೆ ಭೂಮಿ ಪೂಜೆ ನೆರವೇರಿಸಿ ಸುದ್ದಿಗೋಷ್ಟಿಯಲ್ಲಿ ಮಾತನಾಡುತ್ತಿದ್ದರು.
ಕಾಶ್ಮೀರದ ಉಗ್ರವಾದಿಗಳ ಹುಟ್ಟಡಗಿಸಲು ಕೈಗೊಳ್ಳುವ ಕೇಂದ್ರದ ಎಲ್ಲ ನಿರ್ಣಯಗಳನ್ನುವ ಎಲ್ಲ ರಾಜಕೀಯ ಪಕ್ಷಗಳು ಈಗಾಗಲೇ ಸ್ವಾಗತಿಸಿದ್ದು, ಕಾಶ್ಮೀರದ ಪ್ರವಾಸಕ್ಕೆ ತೆರಳಿದ್ದ ಅಮಾಯಕ ಭಾರತೀಯರನ್ಬು ಹತ್ಯೆಗೈದ ಉಗ್ರವಾದಿಗಳಿಗೆ ಮತ್ತು ಅವರನ್ನು ಪೋಷಿಸುತ್ತಿರುವ ಪಾಕಿಸ್ತಾನಕ್ಕೆ ತಕ್ಕ ಪಾಠ ಕಲಿಸಬೇಕು ಎಂದ ಅವರು ಉಗ್ರವಾದಿಗಳ ಗಟ್ಟಿ ನೆಲೆಯಾಗಿರುವ ಪಿ.ಒ.ಕೆ ವಶಪಡಿಸಿಕೊಳ್ಳಿ ಎಂದು ಕೇಂದ್ರವನ್ನು ಆಗ್ರಹಿಸಿದರು.
ತಾತ್ಕಾಲಿಕ ವೀಸಾ ಪಡೆದುಕೊಂಡು ಭಾರತದಲ್ಲಿರುವ ಪಾಕಿಸ್ತಾನಿಯರು 48 ಗಂಟೆಗಳಲ್ಲಿಯೇ ಹೊರಗೆ ಹೋಗಬೇಕು ಎಂದು ಕೇಂದ್ರ ಸರಕಾರ ಖಡಕ್ಕಾಗಿ ಹೊರಡಿಸಿದ ಆದೇಶವನ್ನು ನಾನು ವೈಯಕ್ತಿಕವಾಗಿ ಬೆಂಬಲಿಸುತ್ತೇನೆ ಅಲ್ಲದೆ ಪಾಕಿಸ್ತಾನದ ಜೊತೆಗಿರುವ ಎಲ್ಲ ಸಂಬಂಧಗಳನ್ನು ಕಳಚುವ ನಿಟ್ಟಿನಲ್ಲಿ ಕೈಗೊಳ್ಳುವ ಎಲ್ಲ ಕ್ರಮಗಳನ್ನು ದೇಶದ ಹಿತದೃಷ್ಟಿಯಿಂದ ಇಡೀ ದೇಶದ ಜನ ಬೆಂಬಲಿಸಬೇಕು ಎಂದರು.
ಅಥಣಿ ಪಟ್ಟಣ ಸೇರಿದಂತೆ ಗ್ರಾಮೀಣ ಭಾಗದ ರಸ್ತೆ ಸುಧಾರಣೆಗಾಗಿ ಲೋಕೋಪಯೋಗಿ ಇಲಾಖೆಯಿಂದ ವಿವಿಧ ರಸ್ತೆ ಕಾಮಗಾರಿಗಳಿಗಾಗಿ 45 ಕೋಟಿ ಅನುದಾನ ಮಂಜೂರಾಗಿ ಟೆಂಡರ್ ಪ್ರಕ್ರಿಯೆ ಪೂರ್ಣಗೊಂಡಿದ್ದು, ಈ ಅನುದಾನದಲ್ಲಿ ಅಥಣಿ ಯಲ್ಲಮ್ಮವಾಡಿ ರಸ್ತೆಗೆ 30 ಕೋಟಿ, ಅಥಣಿ ಸತ್ತಿ ರಸ್ತೆ ಅಭಿವೃದ್ಧಿಗಾಗಿ 6 ಕೋಟಿ, ಶಿರಹಟ್ಟಿ ನಂದಗಾಂವ ರಸ್ತೆ ಅಭಿವೃದ್ಧಿಗಾಗಿ 5 ಕೋಟಿ, ಅಥಣಿ ಜನವಾಡ ರಸ್ತೆ ಸುಧಾರಣೆಗೆ 2 ಕೋಟಿ, ಮಹಿಷವಾಡಗಿ ನದಿ ರಸ್ತೆ ಅಭಿವೃದ್ಧಿಗೆ 1 ಕೋಟಿ, ಸವದಿ ದರ್ಗಾ 2 ಕೋಟಿ, ಬಡಚಿ ಬುರ್ಲಟ್ಟಿ ರಸ್ತೆ ಅಭಿವೃದ್ಧಿಗೆ 1ಕೋಟಿ ರಸ್ತೆ ಸುಧಾರಣೆಯ ಕಾಮಗಾರಿಗಳು ಈಗಾಗಲೇ ಪ್ರಾರಂಭಗೊಂಡಿವೆ ಎಂದರು.
ಅಥಣಿ ಪಟ್ಟಣದ 25 ಕೋಟಿ ಅನುದಾನದ ಜೋಡು ಕೆರೆಗಳ ಮತ್ತು 10 ಕೋಟಿ ಅನುದಾನದ ಭಾಗೀರಥಿ ನಾಲಾ ಅಭಿವೃದ್ಧಿಗಾಗಿ ಕರೆದಿರುವ ಟೆಂಡರ್ ಪ್ರಕ್ರಿಯೆ ಕೆಲವೇ ದಿನಗಳಲ್ಲಿಯೇ ಪೂರ್ಣಗೊಳ್ಳಲಿದೆ ಎಂದರು. ಭಾಗೀರಥಿ ನಾಲಾ ಯೋಜನೆ ಪೂರ್ಣಗೊಳ್ಳುವುದರಿಂದ ಕೊಳಚೆ ನಿರ್ಮೂಲನೆ ಆಗುವುದರೊಂದಿಗೆ ವೈ ಪಾಸ್ ರಸ್ತೆ ನಿರ್ಮಿಸುವ ಉದ್ದೇಶ ತಮ್ಮದಾಗಿದೆ ಎಂದರು.
ಅಥಣಿ ಪಟ್ಟಷದಲ್ಲಿ ಈಗಾಗಲೇ 24ಥ7 ಕುಡಿಯುವ ನೀರು ಯೋಜನೆ ಪ್ರಗತಿಯಲ್ಲಿದೆ ಎಂದ ಅವರು ಯು.ಜಿ.ಡಿ ಯೋಜನೆ ಅನುಷ್ಠಾನಕ್ಕಾಗಿ 300 ಕೋಟಿ ಅನುದಾನ ಅಗತ್ಯವಿದ್ದು, ಕೆಲವೇ ತಿಂಗಳುಗಳಲ್ಲಿಯೇ ಈ ಯೋಜನೆಯ ಕಾರ್ಯ ಪ್ರಾರಂಭಗೊಳ್ಳಲಿದೆ ಎಂದ ಅವರು ಅಥಣಿ ಪಟ್ಟಣದ ಅಭಿವೃದ್ಧಿಗಾಗಿ ಮತ್ತಷ್ಟು ಅಭಿವೃದ್ಧಿ ಯೋಜನೆಗಳು ಅನುಷ್ಠಾನಗೊಳಿಸುವುದಾಗಿ ಹೇಳಿದರು.
ನಿರಂತರ ವಿದ್ಯುತ್ ಪೂರೈಕೆಗಾಗಿ ಯಲ್ಲಡಗಿ, ತೆಲಸಂಗ ಮತ್ತು ಸವದಿಯಲ್ಲಿ 110 ಕೆ.ವಿ. ವಿದ್ಯತ್ ವಿತರಣಾ ಕೇಂದ್ರಗಳು ಮಂಜೂರಾಗಿದ್ದು, ಕಾಮಗಾರಿಗಳು ಪ್ರಾರಂಭಗೊಳ್ಳಲಿವೆ ಇದರ ಕೊತೆಗೆ ಕೊಕಟನೂರ ಹತ್ತಿರ 30 ಎಮ್.ವಿ, ಯಲ್ಲಡಗಿಯಲ್ಲಿ 35 ಎಮ್.ವಿ, ಸತ್ತಿಯಲ್ಲಿ 40 ಎಮ್.ವಿ. ಸಾಮರ್ಥ್ಯ ದ ಸೋಲಾರ ಪಾರ್ಕಗಳನ್ನು ಸ್ಥಾಪಿಸುವ ಸಂಬಂಧ ಪ್ರಸ್ತಾವನೆ ಸಲ್ಲಿಸಲಾಗಿದೆ ಎಂದ ಅವರು ಇದರಿಂದ ಗ್ರಾಮೀಣ ಭಾಗದ ಕೃಷಿಗೆ ಗುಣಮಟ್ಟದ ವಿದ್ಯುತ್ ಪೂರೈಕೆಯಾಗುತ್ತದೆ ಎಂದರು.
ಲೋಕೋಪಯೋಗಿ ಇಲಾಖೆಯ ಜಯಾನಂದ ಹಿರೇಮಠ, ಮಲ್ಲಿಕಾರ್ಜನ ಮಗದುಮ್, ಜಿ.ಪಂ ಅಧಿಕಾರಿ ವೀರಣ್ಣಾ ವಾಲಿ, ಗುತ್ತಿಗೆದಾರ ಗೀರೀಶ ಸಜ್ಜನ, ಪುರಸಭಾಧ್ಯಕ್ಷೆ ಶಿವಲೀಲಾ ಬುಟಾಳಿ, ಉಪಾಧ್ಯಕ್ಷೆ ಭುವನೇಶ್ವರಿ ಯಕ್ಕಂಚಿ, ಸದಸ್ಯರಾದ ಮಲ್ಲೇಶ ಹುದ್ದಾರ, ವೀಲೀನರಾಜ ಯಳಮಲ್ಲಿ, ರಾಹಶೇಖರ ಗುಡೋಡಗಿ, ದತ್ತಾ ವಾಸ್ಟರ್, ದೀಲೀಪ ಲೋಣಾರೆ, ಸಂತೋಷ ಸಾವಡಕರ, ಪ್ರಮೋದ ಬಿಳ್ಳೂರ, ರಿಯಾಜ ಸನದಿ, ಬಸವರಾಜ ಹಳ್ಳದಮಳ, ಬಾಬು ಖೆಮಲಾಪುರ, ಧುರೀಣರಾದ ಅರುಣ ಯಲಗುದ್ರಿ, ಅಜೀತ ಇನಾಮದಾರ, ಶಿವರುದ್ರ ಘೂಳಪ್ಪನವರ, ರಾಜು ಚೌಗಲಾ ಸೇರಿದಂತೆ ಅನೇಕರು ಉಪಸ್ಥಿತರಿದ್ದರು.