ಹವಾಲ್ದಾರ ಯಲ್ಲಪ್ಪ ಭೋಜ ಹೃದಯಾಘಾತದಿಂದ ಸಾವು

Constable Yellappa Bhoja dies of heart attack

ಲೋಕದರ್ಶನ ವರದಿ 

ಹವಾಲ್ದಾರ ಯಲ್ಲಪ್ಪ ಭೋಜ ಹೃದಯಾಘಾತದಿಂದ ಸಾವು 


ಕಾಗವಾಡ 14: ಕರ್ತವ್ಯದಲ್ಲಿದ್ದ ಹವಾಲ್ದಾರ ಹೃದಯಾಘಾತದಿಂದ ಸಾವನ್ನಪ್ಪಿದ ಘಟನೆ ಕುಡಚಿ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ. 


ಮೃತ ಯಲ್ಲಪ್ಪ ಭೋಜ ಅವರಿಗೆ ರವಿವಾರ ರಾತ್ರಿ ಇದ್ದಕ್ಕಿದ್ದಂತೆ ತೀವ್ರ ಎದೆ ನೋವು ಕಾಣಿಸಿಕೊಂಡಿದ್ದು, ಅವರು ತಮ್ಮ ಸಹೋದ್ಯೋಗಿಗಳಿಗೆ ಮಾಹಿತಿ ನೀಡಿದ್ದಾರೆ. ನಂತರ ಅವರನ್ನು ತಕ್ಷಣವೇ ಮಹಾರಾಷ್ಟ್ರದ ಸಾಂಗಲಿ ನಗರದ ಭಾರತಿ ಆಸ್ಪತ್ರೆಗೆ ಕರೆದೊಯ್ಯಲಾಯಿತು. ಆದರೆ ವೈದ್ಯರು ಅವರು ಮೃತಪಟ್ಟಿದ್ದಾರೆ ಎಂದು ಘೋಷಿಸಿದ್ದಾರೆ. 


ಕುಡಚಿ ಚೆಕ್‌ಪೋಸ್ಟ್‌ನಲ್ಲಿ ಕರ್ತವ್ಯಕ್ಕೆ ನಿಯೋಜಿಸಲ್ಪಟ್ಟಿದ್ದ ಮೂಡಲಗಿ ತಾಲೂಕಿನ ತುಕ್ಕಾನಟ್ಟಿ ನಿವಾಸಿ 46 ವರ್ಷದ ಹವಾಲ್ದಾರ ಯಲ್ಲಪ್ಪ ಭೋಜ್ ಹೃದಯಾಘಾತದಿಂದ ನಿಧನರಾಗಿದ್ದಾರೆ. 


ಕುಡಚಿ ಚೆಕ್‌ಪೋಸ್ಟ್‌ನಲ್ಲಿ ಕಾನೂನು ಸುವ್ಯವಸ್ಥೆ ಕಾಪಾಡಲು ಅವರನ್ನು ನಿಯೋಜಿಸಲಾಗಿತ್ತು. ಅಲ್ಲಿ ರವಿವಾರ ಈ ಘಟನೆ ನಡೆದಿದೆ. ಅವರು ಕಳೆದ 9 ತಿಂಗಳಿನಿಂದ ಕುಡಚಿ ಪೊಲೀಸ್ ಠಾಣೆಯಲ್ಲಿ ಕರ್ತವ್ಯದಲ್ಲಿದ್ದರು. ಇದಕ್ಕೂ ಮೊದಲು ಅವರು ಕಾಗವಾಡ ಪೋಲಿಸ್ ಠಾಣೆಯಲ್ಲಿ ಕರ್ತವ್ಯ ನಿರ್ವಹಿಸಿದ್ದರು. ಪೋಷಕರು, ತಾಲೂಕಿನಲ್ಲಿ ಗ್ರಾಮ ಅಭಿವೃದ್ಧಿ ಅಧಿಕಾರಿಯಾಗಿ ಸೇವೆ ಸಲ್ಲಿಸುತ್ತಿರುವ ಪತ್ನಿ, ಇಬ್ಬರು ಹೆಣ್ಣುಮಕ್ಕಳು ಮತ್ತು ಒಬ್ಬ ಮಗನನ್ನು ಅಗಲಿದ್ದಾರೆ.