ಸಂವಿಧಾನ ಶಿಲ್ಪಿ ಡಾ. ಬಿ.ಆರ್ ಅಂಬೇಡ್ಕರ್ ಜಯಂತಿ ಆಚರಣೆ
ಬೆಳಗಾವಿ 14: ಘಟಪ್ರಭಾ ನಗರದ ಜನತಾ ಕಾಲೋನಿಯಲ್ಲಿ ಸಂವಿಧಾನ ಶಿಲ್ಪಿ ಭಾರತ ರತ್ನ ಡಾ. ಬಿ.ಆರ್ ಅಂಬೇಡ್ಕರ್ ಅವರ 134 ನೇಯ ಜಯಂತಿಯನ್ನು ಭಾವ ಚಿತ್ರಕ್ಕೆ ಪೂಜೆ ಸಲ್ಲಿಸಿ ಕೇಕ್ ಕತ್ತರಿಸಿ ಸಿಹಿ ಹಂಚುವ ಮೂಲಕ ವಿಜ್ರಂಭಣೆಯಿಂದ ಆಚರಿಸಲಾಯಿತು. ನಂತರ ಮಾತನಾಡಿದ ಮುಖಂಡರಗಳು ಸಂವಿಧಾನ ಶಿಲ್ಪಿ ಡಾ. ಬಿ.ಆರ್ ಅಂಬೇಡ್ಕರ್ ಇಂದು ಅವರ ಕೊಡುಗೆಗಳನ್ನು ನೆನೆದು ಸ್ಮರಿಸುವ ದಿನ ಅವರನ್ನು ಗೌರವಿಸುವ ಸುದಿನ ಇಂದಿನ ಪ್ರಜೆಗಳು ಅವರ ಸಂದೇಶಗಳನ್ನು ತಿಳಿದು ಸದಾ ಅನುಸರಿಸಬೇಕು ಎಂದು ಯುವಕರಿಗೆ ಕರೆ ನೀಡಿದರು.
ಕರ್ನಾಟಕ ರಕ್ಷಣಾ ವೇದಿಕೆ (ಸಂತೋಷ ಅರಳಿಕಟ್ಟಿ ಬಣ)ದ ರಾಜ್ಯಾಧ್ಯಕ್ಷ ಪ್ರಶಾಂತ ಅರಳಿಕಟ್ಟಿ, ಕರ್ನಾಟಕ ಪ್ರಜಾ ಶಕ್ತಿ ಸಮಿತಿ ಬೆಳಗಾವಿ ಜಿಲ್ಲಾಧ್ಯಕ್ಷ ರಾಜು ದೊಡಮನಿ, ಯಲ್ಲಪ್ಪ ಹಂಚಿನಾಳ, ದುಂಡಪ್ಪ ಮೇತ್ರಿ, ಮಹಾತೇಶ ಗೊಟ್ಯಾಗೋಳ, ಸತೀಶ್ ರಾಣೆ, ಸಂದೀಪ ಅರಳಿಕಟ್ಟಿ, ಗೋವಿಂದ ಮೇತ್ರಿ, ಸುನೀಲ ರಾಜಾಪೂರೆ, ಕಿರಣ ರಾಣೆ ಸೇರಿದಂತೆ ಅನೇಕರು ಉಪಸ್ಥಿತರಿದ್ದರು.