ಚಡಚಣ 27: ವಿಶ್ವರತ್ನ ಡಾ.ಬಾಬಾಸಾಹೇಬ ಅಂಬೇಡ್ಕರ್ ರವರ ವರ್ಷದ ಒಂದು ದಿನ ಅಷ್ಟೇ ಜಯಂತ್ಯುತ್ಸವ ಕಾರ್ಯಕ್ರಮ ಮೂಲಕ ಅವರ ನೆನಪು ಆಶೆಯಗಳು ಸೀಮಿತವಾಗಬಾರದು. ಅವರ ನೆನಪು ಆಶೆಯಗಳ ಮತ್ತು ಮಾರ್ಗದರ್ಶನದ ಹಾದಿ ನಮ್ಮೇರಲ್ಲಿ ಜೀವಂತವಾಗಿರಬೇಕು ಎಂದು ನಾಗಠಾಣ ಮತಕ್ಷೇತ್ರದ ಶಾಸಕವಿಠ್ಠಲ ಕಟಕಧೋಂಡ ಹೇಳಿದರು.
ಚಡಚಣ ತಾಲೂಕಿನ ದೇವರ ನಿಂಬರಗಿ ಗ್ರಾಮದಲ್ಲಿ ವಿಶ್ವರತ್ನ ಡಾ. ಬಿ.ಆರ್. ಅಂಬೇಡ್ಕರ್ ಅವರ 134ನೇ ಜಯಂತ್ಯುತ್ಸವ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು ,ಡಾ. ಬಿ.ಆರ್.ಅಂಬೇಡ್ಕರ್ ಅವರ ಇತಿಹಾಸ ಪುರುಷ, ದೇಶದ ಪ್ರತಿಯೊಬ್ಬ ಪ್ರಜೆಗೂ ಸಂವಿಧಾನ ಮೂಲಕ ಬದುಕುವ ಹಕ್ಕನ್ನು ನೀಡಿದ ಮಹಾತ್ಮ. ಅವರ ಮುಂದಿನ 135 ನೇ ಜಯಂತ್ಯುತ್ಸವ ಕಾರ್ಯಕ್ರಮದ ಅಷ್ಟರಲ್ಲಿ ದೇ.ನಿಂಬರಗಿ ಗ್ರಾಮದಲ್ಲಿ ಅಂಬೇಡ್ಕರ್ ಅವರ ಭವ್ಯ ಪುತ್ಥಳಿ ನಿರ್ಮಾಣ ಮಾಡುತ್ತೇನೆ ಎಂದು ಹೇಳಿದರು.ದೇವರ ನಿಂಬರಗಿ ಗ್ರಾಮ ಪಂಚಾಯತಿ ಅಧ್ಯಕ್ಷ ಭೀಮನಗೌಡ ಕಲ್ಲನಗೌಡ ಬಿರಾದಾರ ಮಾತನಾಡಿ, ಡಾ.ಬಾಬಾಸಾಹೇಬ ಅಂಬೇಡ್ಕರ್ ರವರ ಆದರ್ಶ ಮಾರ್ಗದ ಹಾದಿಯಲ್ಲಿ ನಾವೆಲ್ಲರೂ ನಡೆಯೋಣ ದೇಶಕ್ಕೆ ಅಂಬೇಡ್ಕರ್ ರವರ ಕೊಡುಗೆ ಅಪಾರವಾಗಿದೆ ಎಂದರು.
ಈ ವೇಳೆ ಸುರೇಶ ಗುಮಾಸ್ತೆ, ಪಿಂಟು ಮುತ್ತಿನ, ಡಿ.ಬಿ.ಧರ್ಮವೀರ, ಮುತ್ತುಗೌಡ ಬಿರಾದಾರ, ಚಂದ್ರಬಾಬಾ ಸಿಂಗೆ, ವಿಜಯಕುಮಾರ್ ಹವಾಲ್ದಾರ್, ಬಸವರಾಜ ಲವಗಿ, ತಾನಾಜಿ ಸಿಂಗೆ, ಅಜಿತ್ ಸಿಂಗೆ, ಭೀಮಾಶಂಕರ ಕನ್ನೂರ, ಏಗೆಪ್ಪಗೌಡ ಬಿರಾದಾರ, ಅಲ್ಲಿಸಾಬ ಬೋರಗಿ, ಬೀರ್ಪ ಸಲಗರ, ಚನ್ನು ಗಾಡಿವಡ್ಡರ, ರಾಜಕುಮಾರ ಸಿಂಗೆ, ಸೇರಿದಂತೆ ಡಾ.ಬಿ.ಆರ್ ಅಂಬೇಡ್ಕರ್ ಯುವಕ ಮಂಡಳಿ ಸರ್ವ ಸದಸ್ಯರು ಮತ್ತು ಸುತ್ತಮುತ್ತಲಿನ ಗ್ರಾಮಸ್ಥರು ಉಪಸ್ಥಿತರಿದ್ದರು.