ಬಡಮಲ್ಲಿ ಗ್ರಾಮದಲ್ಲಿ 15 ಲಕ್ಷ ವೆಚ್ಚದಲ್ಲಿ ಕಟ್ಟಡಕ್ಕೆ ಕಾಮಗಾರಿಗೆ ಚಾಲನೆ
ಬ್ಯಾಡಗಿ 01: ತಾಲೂಕಿನ ಬಡಮಲ್ಲಿ ಗ್ರಾಮದಲ್ಲಿ 15 ಲಕ್ಷ ವೆಚ್ಚದಲ್ಲಿ ನಿರ್ಮಾಣವಾಲಿರುವ ನೂತನ ಪಾಂಡುರಂಗ ರುಕ್ಮಿಣಿ ದೇವಸ್ಥಾನದ ಕಟ್ಟಡಕ್ಕೆ ಕಾಮಗಾರಿ ಗೆ ಶಾಸಕ ಬಸವರಾಜ ಶಿವಣ್ಣನವರ ಮಂಗಳವಾರ ಗುದ್ದಲಿ ಪೂಜೆ ನೆರವೇರಿಸಿದರು.ನಂತರ ಮಾತನಾಡಿದವರು, ದೇವಸ್ಥಾನಗಳಿಂದ ಸಮಾಜದಲ್ಲಿ ಶಾಂತಿ, ನೆಮ್ಮದಿ ನೆಲೆಸಿದೆ. ಭಕ್ತಿ, ಭಾವದಿಂದ ಯಾವುದೇ ದೇವರನ್ನು ಪೂಜಿಸಿ, ಪ್ರಾರ್ಥಿಸಿದರೂ ನಮ್ಮ ಮನೆ ಮತ್ತು ಮನದಲ್ಲಿ ಉಲ್ಲಾಸ ಮೂಡುತ್ತದೆ. ಪ್ರತಿನಿತ್ಯ ಜನರು ಯಾವ ಕಾರ್ಯ ಕೈಗೊಳ್ಳುವುದಿದ್ದರೂ ದೇವರನ್ನು ನೆನಪಿಸಿಕೊಳ್ಳದೇ ಮುಂದುವರಿಯುವುದಿಲ್ಲ. ದೇವರ ಮೇಲಿನ ನಂಬಿಕೆ, ಆಚಾರ, ವಿಚಾರ, ಸಂಪ್ರದಾಯ ಪಾಲಿಸುವುದರಿಂದ ಅಡ್ಡಿ, ಆತಂಕಗಳ ನಿವಾರಣೆಯಾಗುತ್ತದೆ ಎಂದರು.ಈ ಸಂದರ್ಭದಲ್ಲಿ ದೇವಸ್ಥಾನ ಸಮಿತಿಯ ಅಧ್ಯಕ್ಷ ಬಸವರಾಜ ಮೇವುಂಡಿ.ಉಪಾದ್ಯಕ್ಷ ದುರ್ಗಪ್ಪ ಮತ್ತೂರ.ನಂದೀಶ ಗೊಂದಿ.ಮುಕಪ್ಪ ಅತ್ತಿಕಟ್ಟಿ.ಅಶೋಕ ಓಲೇಕಾರ.ಮುಖಂಡ ಶಿವನಗೌಡ ಪಾಟೀಲ.ನಾಗರಾಜ ಆನ್ವೇರಿ.ಚನ್ನಬಸಪ್ಪ ಹುಲ್ಲತ್ತಿ. ಗದಿಗೆಪ್ಪ ಗೌಡ್ರು ಹೊಂಡದಗೌಡ್ರ.ನಾಗಪ್ಪ ಓಲೇಕಾರ ಬಸವನಗೌಡ್ರ ಸಣ್ಣಗೌಡ್ರ ಪಿಡಿಓ ರಾಜು ಹಾದಿಮನಿ ಬಸಪ್ಪ ಗೊಂದಿ. ಈರ್ಪ ಓಲೆಕಾರ್.ಪುಟ್ಟಪ್ಪ ಮತ್ತೂರ.ಗ್ರಾಮದ ಎಲ್ಲಾ ಹಿರಿಯರು ಸಮಾಜದ ಬಾಂಧವರು ಉಪಸ್ಥಿತರಿದ್ದರು.