ಲೋಕದರ್ಶನ ವರದಿ
ಶಿಗ್ಗಾವಿ 23: ಕೊರೊನಾ ಸೋಂಕಿತ ದೃಢಪಟ್ಟಿದ್ದರಿಂದ ಸೀಲ್ಡೌನ ಮಾಡಿರುವ ತಾಲೂಕಿನ ಬಂಕಾಪೂರ ಪಟ್ಟಟಣಕ್ಕೆ ಅಪರಜಿಲ್ಲಾಧಿಕಾರಿ ಟಿ ಯೋಗೇಶ್ವರ ಭೇಟಿ ನೀಡಿ ಕಟ್ಟು ನಿಟ್ಟಿನ ಕ್ರಮಗಳನ್ನು ಹಾಗೂ ಮುಂಜಾಗ್ರತಾ ಕ್ರಮಗಳನ್ನು ಕೈಗೊಳ್ಳುವಂತೆ ಅಧಿಕಾರಿಗಳಿಗೆ ಸೂಚಿಸಿದರು.
ಸೋಂಕಿತ ವ್ಯಕ್ತಿಯ ನೆಲೆಸಿದ್ದ ಮನೆಯ ಸುತ್ತಮುತ್ತಲಿನ 100 ಮೀ ಪ್ರದೇಶವನ್ನು ಸೀಲ್ ಡೌನ ಮಾಡಲಾಗಿದ್ದು ಸುತ್ತಲಿನ 7 ಕಿ.ಮೀ ಪ್ರದೇಶವನ್ನು ಬಫರ್ ಜೋನ ಎಂದು ಘೋಷಣೆ ಮಾಡಲಾಗಿದೆ. ಪಟ್ಟಣದ ಉಡಚೇಶ್ವರಿ ಸಭಾ ಭವನದಲ್ಲಿ ಪೀವರ್ ಕ್ಲಿನಿಕ್ ಕೇಂದ್ರ ತೆರೆಯಲಾಗಿದ್ದು, ಅಂಬೇಡ್ಕರ ನಗರದ ಕಿರಿಯ ಪ್ರಾಥಮಿಕ ಶಾಲೆಯಲ್ಲಿ ಕಂಟ್ರೋಲ್ ರೂಂ ಕೇಂದ್ರವನ್ನು ತೆರೆಯಲಾಗಿದೆ. ಸೀಲ್ಡೌನ ಪ್ರದೇಶಕ್ಕೆ ಒಳ ಹೋಗಲು ಮತ್ತು ಹೊರ ಬರಲು ಒಂದೇ ಗೇಟ್ ವ್ಯವಸ್ಥೆ ನಿಮರ್ಾಣ ಮಾಡಲಾಗಿದೆ.
ಅಪರ ಜಿಲ್ಲಾಧಿಕಾರಿ ಭೇಟಿ ನೀಡಿದ ಸಂದರ್ಭದಲ್ಲಿ ಪೊಲೀಸ ಉಪ ವರಿಷ್ಠಾಧಿಕಾರಿ ಮಲ್ಲಿಕಾಜರ್ುನ ಬಾಲದಂಡಿ, ಸವಣೂರಿನ ಉಪವಿಭಾಗಾಧಿಕಾರಿ ಅನ್ನಪೂರ್ಣ ಮುದಕಮ್ಮನವರ, ಜಿ.ಆ.ಕು.ಕ. ಅಧಿಕಾರಿ ಡಾ || ರಾಜೇಂದ್ರ ದೊಡ್ಡಮನಿ, ತಾಲೂಕ ದಂಡಾಧಿಕಾರಿ ಪ್ರಕಾಶಕುದರಿ , ಸಿ.ಪಿ.ಐ ಬಸವರಾಜ ಹಳಬಣ್ಣವರ, ಪಿ.ಎಸ್ಐ ಸಂತೋಷ ಪಾಟೀಲ, ತಾಲೂಕಆರೋಗ್ಯಾಧಿಕಾರಿ ಡಾ|| ಹನುಮಂತಪ್ಪ ಕುಡಚಿ, ವೈದ್ಯಾಧಿಕಾರಿ ಡಾ|| ಮನೋಜ ನಾಯ್ಕ, ಪುರಸಭೆ ಮುಖ್ಯಾಧಿಕಾರಿ ರೇಣುಕಾ ದೇಸಾಯಿ ಸೇರಿದಂತೆ ಇಲಾಖೆಯ ಅಧಿಕಾರಿಗಳು ಹಾಗೂ ಸಿಬ್ಬಂದಿಗಳು ಉಪಸ್ಥಿತರಿದ್ದರು.