ಕೊರೊನಾ ಎಪೆಕ್ಟ್: ಮೂಕ ರೋಧನೆ ಅನುಭವಿಸುತ್ತಿರುವ ಪ್ರಾಣಿಗಳು

ಕೆ.ಎಸ್.ನಾಗರಾಜ

ರಾಣೇಬೆನ್ನೂರು: ಏ.12: ಕರೋನಾ ವೈರಸ್ ಸೊಂಕು ರೋಗ ಹರಡಿಕೆಯಿಂದಾಗಿ ರಾಜ್ಯವೂ ಸೇರಿದಂತೆ ಜಿಲ್ಲೆಯಲ್ಲಿ ಯಾವುದೇ ತರಕಾರಿ ಮಾರುಕಟ್ಟೆಗಳು ನಿಯಮಿತವಾಗಿ ತನ್ನ ವ್ಯಾಪಾರ ವಹಿವಾಟು ನಡೆಸದ ಕಾರಣ ಇದೀಗ ಪ್ರಾಣಿ-ಪಕ್ಷಿ, ಜಾನುವಾರುಗಳಿಗೆ ಆಹಾರ ಕೊರತೆ ಉಂಟಾಗಿ ನಿತ್ಯವೂ ಆಹಾರವಿಲ್ಲದೇ, ಕೊರಗುವಂತಾಗಿದೆ. ಜಾನುವಾರುಗಳು ಸಂಚರಿಸಿ ಅಲ್ಲಲ್ಲಿ ಸಿಕ್ಕ ಕಾಯಿಪಲ್ಲೆ, ತರಕಾರಿ ಮತ್ತಿತರೆ ಯಾವುದೇ ವಸ್ತುಗಳು ಸಿಗದೇ, ಮೂಕ ರೋಧನೆ ಅನುಭವಿಸುತ್ತಾ ತಿರುಗುವುದನ್ನು ನೋಡಿದರೇ, ಎಂಥಹ ಕಟುಕ ಹೃದಯದವರಿಗೂ ಸಹ ಮನ ಕಲಕುತ್ತದೆ.  ಅಂತಹ ಪರಿಸ್ಥಿತಿ ಇಲ್ಲಿ ನಿಮರ್ಾಣವಾಗಿದೆ. 

ರಸ್ತೆಗಳಲ್ಲಿ ನಿತ್ಯವೂ ನೂರಾರು ಬಿಡಾಡಿ ದನಗಳು ಸುತ್ತಾಡುತ್ತಾ ತಮ್ಮ ಹೊಟ್ಟೆಯನ್ನು ಹೊರೆಯುತ್ತಾ ತಿರುಗುತ್ತಿದ್ದವು.  ದುಗರ್ಾ ಮಾರುಕಟ್ಟೆ, ನೆಹರು ಮಾರುಕಟ್ಟೆ, ಉಳ್ಳಾಗಡ್ಡಿ ಮಾರುಕಟ್ಟೆ, ದೊಡ್ಡಪೇಟೆ ಮತ್ತಿತರೆ ಕಡೆಗಳಲ್ಲಿ ಸಂಚರಿಸುತ್ತಾ ಜೀವನ ಸಾಗಿಸುತ್ತಿದ್ದವು.  ಯಾರಿಗೂ ಹೇಳದೆ, ಯಾರಿಗೂ ಕೇಳದೇ, ಬಾಯಿ ಇಲ್ಲದ ಈ ಮೂಕ ಪ್ರಾಣಿಗಳು ಆಹಾರ ಸಿಗದೇ, ಮೂಕ ರೋಧನೆ ಅನುಭವಿಸುತ್ತಿವೆ.  ಮಾನವೀಯ ದೃಷ್ಠಿಯುಳ್ಳ ಕೆಲವರು ಇವುಗಳಿಗೆ ಹೋಲ್ಸೇಲ್ ದರದಲ್ಲಿ ಕಿಂಟಾಲ್ ಗಟ್ಟಲೇ, ಹೂಕೊಸು, ಸೌತೆಕಾಯಿ, ಮುಳಗಾಯಿ, ಆಲೂಗಡ್ಡೆ, ಸೊಪ್ಪು, ತರಕಾರಿ ಖರೀದಿಸಿ ಹಾಕುವುದನ್ನು ಸಹ ಕಾಣುತ್ತಿದ್ದೇವೆ.  

ಕರೋನಾ ವೈರಸ್ ರೋಗಾಣು ಹರಡಿ ವಾಣಿಜ್ಯ ನಗರ ಲಾಕ್ ಆದಾಗಿನಿಂದಲೂ ಅಲ್ಲಲ್ಲಿ ಶ್ವಾನಗಳಿಗೆ ಕೆಲವರು ಬಿಸ್ಕಿತ್, ಬ್ರೇಡ್, ರೊಟ್ಟಿ ಹಾಕುತ್ತಿರುವುದು ಸಹ ನಗರದಲ್ಲಿ ಕಾಣುವಂತಾಗಿದೆ.  ತನ್ನ ದಿನನಿತ್ಯದ ಕಾಯಕದಲ್ಲಿ ಇದೊಂದು ನನ್ನ ಕಾಯಕ ಎನ್ನುವ ಮಾದರಿಯನ್ನು ತನ್ನ ಬದುಕಿನಲ್ಲಿ ಅಳವಡಿಸಿಕೊಂಡಿರುವ ಇಲ್ಲಿನ ಕೋಟೆ ಭಾಗದ ಸ್ಥಳೀಯ ಕಾಪರ್ೋರೇಷನ್ ಬ್ಯಾಂಕ್ ಕ್ಯಾಷಿಯರ್ ಮುರುಳಿಧರ ಮಠದ ಮತ್ತು ಅವರ ಪತ್ನಿ ರಮಾ ಮಠದ ಅವರು ನೂರಾರು ಶ್ವಾನಗಳಿಗೆ ಬ್ರೇಡ್-ಬಿಸ್ಕತ್ಗಳನ್ನು ಹಾಕಿ ತಮ್ಮ ಸೇವಾ ಕಾರ್ಯ ಮೆರೆಯುತ್ತಿರುವುದು ಸಾರ್ವಜನಿಕರ ಪ್ರಶಂಸೆಗೆ ಪಾತ್ರವಾಗಿದ್ದಾರೆ.

ರಾಣೇಬೆನ್ನೂರಿನ ವಿವಿಧಕಡೆಗಳಲ್ಲಿ ಮತ್ತು ಬಡಾವಣೆಗಳಲ್ಲಿ ಪ್ರತ್ಯೇಕವಾಗಿ ಹಣ್ಣು-ಹಂಪಲು, ತರಕಾರಿ, ವ್ಯಾಪಾರಸ್ತರು ತಮ್ಮ ವ್ಯಾಪಾರದ ಮೂಲಕ ಗ್ರಾಹಕರ ಮನೆ ಬಾಗಿಲಿಗೆ ತಲುಪಿಸುವಂತಹ ವಾತಾವರಣ ನಿಮರ್ಿಸಿರುವುದು ಗ್ರಾಹಕರಿಗೆ ಸಂತೋಷದ ಸಂಗತಿಯಾಗಿದೆ.  ಆದರೆ, ವ್ಯಾಪಾರಿಗಳು ಇರುವ ದರಕ್ಕಿಂತ ಅತೀ ಹೆಚ್ಚಿನ ದರ ಪಡೆಯುತ್ತಿರುವುದು ಜನಸಾಮಾನ್ಯರಿಗೆ ಹೊರೆ ಎನ್ನುವಂತಾಗಿದೆ.  ಆಡಳಿತ ಇಂತಹ ಸಂದಿಗ್ಧ ಪರಿಸ್ಥಿತಿಯಲ್ಲಿ ಸೂಕ್ತ ದರವನ್ನು ನಿಗದಿಪಡಿಸಿ ಯಾರಿಗೂ ಆಥರ್ಿಕ ಭಾರವಾಗದ ರೀತಿಯಲ್ಲಿ ಕ್ರಮ ಕೈಗೊಳ್ಳಬೇಕೆನ್ನುವುದು ಜನಸಾಮಾನ್ಯರಿಂದ ಕೇಳಿಬರುವ ಮಾತಾಗಿದೆ.