ವಾಷಿಂಗ್ಟನ್,
ಏ 18,ಜಗತ್ತಿನಾದ್ಯಂತ ಕೋವಿಂಡ್ -19 ಸೋಂಕಿನಿಂದ ಒಟ್ಟು 1 ಲಕ್ಷದ
39ಸಾವಿರದ 378 ಮಂದಿ ಮೃತಪಟ್ಟಿದ್ದಾರೆ ಎಂದು ವಿಶ್ವ ಆರೋಗ್ಯ ಸಂಸ್ಥೆ ಶನಿವಾರ
ತಿಳಿಸಿದೆ. ಅಲ್ಲದೆ, ಸೋಂಕು ದೃಢಪಟ್ಟ ಪ್ರಕರಣಗಳ ಸಂಖ್ಯೆ 2 ದಶಲಕ್ಷದ 74ಕ್ಕೆ
ಏರಿಕೆಯಾಗಿದೆ ಎಂದು ಖಚಿತಪಡಿಸಿದೆ.ಕಳೆದ 24 ಗಂಟೆಗಳಲ್ಲಿ ಹೊಸದಾಗಿ 82,967 ಕೊರೊನಾ
ವೈರಸ್ ಪ್ರಕರಣಗಳು ವರದಿಯಾಗಿದ್ದು, 8,493 ಮಂದಿ ಸೋಂಕಿನಿಂದ ಮೃತಪಟ್ಟಿದ್ದಾರೆ
ಎಂದು ವಿವರಿಸಿದೆ.ಐರೋಪ್ಯ ದೇಶಗಳಲ್ಲಿ 1.05 ದಶಲಕ್ಷ ಕೋವಿಡ್ -19 ಸೋಂಕು ದೃಢ ಪಟ್ಟ
ಪ್ರಕರಣಗಳು ವರದಿಯಾಗಿದ್ದು, 6 ಲಕ್ಷದ 32 ಸಾವಿರದ 781 ಮಂದಿ ಸೋಂಕಿಗೆ ಒಳಗಾಗುವ
ಮೂಲಕ ಅಮೆರಿಕಾ ದೇಶ ಜಗತ್ತಿನ ತೀವ್ರ ಬಾಧಿತ ದೇಶವಾಗಿದೆ.