ವಿಶಿಷ್ಟವಾಗಿ ಆಚರಿಸಿದ ಡಿ.ಬಿ ಆರ್ ಅಂಬೇಡ್ಕರ್ ಜನ್ಮ ದಿನಾಚರಣೆ ಕಾರ್ಯಕ್ರಮ

D.B.R. Ambedkar birth anniversary program celebrated in a unique way

ವಿಶಿಷ್ಟವಾಗಿ ಆಚರಿಸಿದ ಡಿ.ಬಿ ಆರ್ ಅಂಬೇಡ್ಕರ್ ಜನ್ಮ ದಿನಾಚರಣೆ ಕಾರ್ಯಕ್ರಮ

.ಬ್ಯಾಡಗಿ 14: ಪಟ್ಟಣದ ಸರ್ಕಾರಿ ಸಾರಿಗೆ ಸಂಸ್ಥೆ ಬ್ಯಾಡಗಿ ಘಟಕದಲ್ಲಿ ಇಂದು ಡಾ.ಬಿ.ಆರ್‌.ಅಂಬೆಡ್ಕರವರ 134 ನೇ ಜನ್ಮದಿನಾಚರಣೆ ಕಾರ್ಯವನ್ನು ಎಲ್ಲಾ ಚಾಲಕ ಹಾಗೂ ನಿರ್ವಾಹಕರು ಹಾಗೂ ಡಿಪೋ ಸಿಬ್ಬಂದಿಗಳು ಸೇರಿ ನಗರದಲ್ಲಿರುವ ಶ್ರೀ ಕನಕದಾಸ ನಿರ್ಗತಿಕ ಅನಾಥ ಮಕ್ಕಳಿಗೆ ಹಾಗೂ ಕುಟೀರ ಮಕ್ಕಳಿಗೆ ಹಾಗೂ ಪಟ್ಟಣದಲ್ಲಿರುವ ಎಲ್ಲಾ ಅನಾಥ ಮಕ್ಕಳಿಗೆ ಹೊಸ ಬಟ್ಟೆಯನ್ನು ನೀಡುವುದರ ಮೂಲಕ ವಿಶಿಷ್ಟವಾಗಿ ಆಚರಿಸಿದರು.ಈ ವೇಳೆ ಘಟಕ ವೈವಸ್ಥಾಪಕರಾದ ಜಿ.ಬಿ.ಅಡ್ರಗಟ್ಟಿ.ಡಾ. ಅಂಬೇಡ್ಕರ್ ಅವರ ಭಾವಚಿತ್ರಕ್ಕೆ ಪುಷ್ಪ ನಮನ ಸಲ್ಲಿಸುವ ಮೂಲಕ ಮಾತನಾಡಿ ಒಂದು ದೇಶ ಒಂದು ಮತ ಎಂಬ ಘೋಷಣೆಯಡಿ ಮತದಾನದ ಹಕ್ಕು ಶಿಕ್ಷಣದ ಹಕ್ಕು ಉದ್ಯೋಗದ ಹಕ್ಕು ಮಹಿಳಾ ಸಮಾನತೆ ಸಂವಿಧಾನದಲ್ಲಿ ಅಳವಡಿಸಿರುವುದು ಡಾ.ಬಿ ಆರ್ ಅಂಬೇಡ್ಕರ್ ಅವರ ಎಂದರು.ಚಾಲಕರು ಅಧ್ಯಕ್ಷರಾದ ಹೊನ್ನಪ್ಪ ಚಲವಾದಿ ಮಾತನಾಡಿ ಅಂಬೇಡ್ಕರವರು. ಸಮಾನತೆ ಮತ್ತು ಸಾಮಾಜಿಕ ನ್ಯಾಯಕ್ಕಾಗಿ ತಮ್ಮ ಜೀವನವನ್ನೇ ಮುಡುಪಾಗಿಟ್ಟ ವ್ಯಕ್ತಿಯ ಸ್ಪೂರ್ತಿದಾಯಕ ಪ್ರಯಾಣವನ್ನು ಆಧರಿಸಿದೆ. ಶತಶತಮಾನದಿಂದಲೂ ಭಾರತ ದೇಶದಲ್ಲಿರುವ ಜಾತಿ ವ್ಯವಸ್ಥೆಯನ್ನು ಮೀರಿ ಸಮಾನತೆ ಹಾಗೂ ಸಾಮಾಜಿಕ ನ್ಯಾಯವನ್ನು ಹೊಂದಲು ಡಾ.ಬಿ.ಆರ್‌.ಅಂಬೇಡ್ಕರ್ ಅವರ ಶ್ರಮ ಹಾಗೂ ಹೋರಾಟವನ್ನು ನಾವುಗಳು ಸ್ಮರಿಸಿಕೊಳ್ಳಬೇಕು ಎಂದರು.ಈ ಸಂದರ್ಭದಲ್ಲಿ ಸಂಚಾರ ನಿಯಂತ್ರಕರಾದ ಐ ಟಿ ಅಗಸಿಮನಿ ಕಂಟ್ರೋಲರ ವೀರ​‍್ಪ ಇಟಗಿ.ಬಸಣ್ಣ ಹಡಪದ, ರಂಗನಾಥ್‌. ಡಿ ಎಸ್‌ಎಸ್ ಸಂಚಾಲಕರಾದ ರವಿ ಹುಣಸಿಮರ,ಚಾಲಕರು ಹಾಗೂ ನಿರ್ವಾಹಕರಾದ ಸಿ ಕೆ ನಾಗರಾಜ್ ,ಸುರೇಶ್, ಭಾರತಿ ಯು,ಎನ್ ಪೂಜಾರಿ ಆನಂದ್ ಬೂದಗಟ್ಟಿ, ಯಲ್ಲಪ್ಪ ,ಜಿ ರೋಜಾ ,ಎಸ್ ವಿನೋದ್, ಜಯಪ್ಪ ನಾಯ್ಕರ್, ಚಂದ್ರು ದಾನಪ್ಪನವರ್, ಹಾಗೂ ಬ್ಯಾಡಗಿ ಘಟಕದ ಸಮಸ್ತ ಸಾರಿಗೆ ಸಿಬ್ಬಂದಿಗಳು ಮತ್ತು ಡಿ ಎಸ್ ಎಸ್ ಸಂಘಟನೆಯ ಎಲ್ಲಾ ಪದಾಧಿಕಾರಿಗಳು ಉಪಸ್ಥಿತರಿದ್ದರು.