ಲೋಕದರ್ಶನ
ವರದಿ
ದಾಂಡೇಲಿ:
ನವರಾತ್ರಿಯ ಅಂಗವಾಗಿ ದಾಂಡೇಲಿ ನಗರದಲ್ಲಿ ದಾಂಡಿಯಾ ರಂಗು ಸಡಗರ ಸಂಭ್ರಮದಿಂದ
ಬಣ್ಣ ಬಣ್ಣದ ವಿದ್ಯುತ್ ದೀಪಗಳಿಂದ ಅಲಂಕೃತವಾದ ಅಂಗಳದಲ್ಲಿ ಆರಂಭಗೊಂಡಿದೆ. ಸುಮಾರು 25 ವರ್ಷಗಳಿಂದ ನಗರದ ದುಗರ್ಾದೇವಿ ದೇವಸ್ಥಾನದ
ಆವರಣದಲ್ಲಿ ಆರಂಭವಾದ ದಾಂಡಿಯಾ ನೃತ್ಯವು ಇಂದು ನಗರದ ತುಂಬೆಲ್ಲಾ
ಪಸರಿಸಿಕೊಂಡಿದೆ. ದಾಂಡೇಲಿಯಲ್ಲಿ ನೆಲೆ ನಿಂತ ಉತ್ತರ
ಭಾರತೀಯರಿಂದ ನಗರದಲ್ಲಿ ಆರಂಭಗೊಂಡ ದಾಂಡಿಯಾ ನೃತ್ಯವು ಸಮಯ ಕಳೆದಂತೆ ಸ್ಥಳೀಯ
ಯುವಕ ಯುವತಿಯರ ಅಚ್ಚು ಮೆಚ್ಚಿನ ನೃತ್ಯವಾಗಿ ಹೊರಹೊಮ್ಮಿದೆ.
ಪುಟಾಣಿಗಳಿಂದ ಹಿಡಿದು ಯುವಕ, ಯುವತಿಯರು ಹಾಗೂ ಹಿರಿಯರು ಸಹ
ದಾಂಡಿಯಾ ನೃತ್ಯದಲ್ಲಿ ಉತ್ಸಾಹದಿಂದ ಪಾಲ್ಗೊಳ್ಳುತ್ತಿರುವುದು ದಾಂಡಿಯಾ ನೃತ್ಯದ ವಿಶೇಷತೆಯಾಗಿದೆ. 9 ದಿನಗಳ ಕಾಲ ನಡೆಯುವ ಈ
ನೃತ್ಯದ ಹಬ್ಬದಲ್ಲಿ ಕೆಲವು ಸಂಘಟನಾಕಾರರು ಉತ್ತಮ ದಾಂಡಿಯಾ ಪಟುಗಳಿಗೆ ಬಹುಮಾನವನ್ನು ನೀಡುವ ಸಂಪ್ರದಾಯವು ನಡೆದು ಬಂದಿದೆ. ಕೆಲವರು ಪ್ರತಿ ನಿತ್ಯ ಉತ್ತಮ ದಾಂಡಿಯಾ ಪಟುಗಳಿಗೆ ಬಹುಮಾನ ನೀಡಿ ಹುರಿದುಂಬಿಸಿದರೆ ಇನ್ನೂ
ಕೆಲವರು 9 ದಿನಗಳ ಕಾಲ ಅವರ ನೃತ್ಯವನ್ನು
ಗಮನಿಸಿ ಬಹುಮಾನವನ್ನು ನೀಡಿ ಪ್ರೋತ್ಸಾಹಿಸುತ್ತಾರೆ. ರಾತ್ರಿ 11 ಘಂಟೆವರೆಗೆ
ದಾಂಡಿಯಾ ನೃತ್ಯವನ್ನು ವಿಕ್ಷೀಸಲು ನೂರಾರು ಜನರು ಸೇರಿರುತ್ತಾರೆ.