ಇಂಡಿ 29: ತಾಲೂಕಿನ ಬಂಥನಾಳ ಗ್ರಾಮದ ಸರಕಾರಿ ಮಾದರಿ ಪ್ರಾಥಮಿಕ ಶಾಲೆಯ 8ನೇ ವರ್ಗದ ವಿದ್ಯಾರ್ಥಿನಿ ಕುಮಾರಿ ದಾನೇಶ್ವರಿ ಅರವಿಂದ ಕೊಪ್ಪಾ ಅವಳು ನ್ಯಾಷನಲ್ ಮೀನ್ಸ್ ಕಮ್ ಮೆರಿಟ್ ವಿದ್ಯಾರ್ಥಿವೇತನ ಯೋಜನೆ (NMMS ¥ÀjÃPÉë) ಯಲ್ಲಿ 99 ಅಂಕಗಳನ್ನು ಪಡೆದು ತಾಲೂಕಿಗೆ ಪ್ರಥಮ ಸ್ಥಾನ (1 Rank) ಹಾಗೂ ವಿಜಯಪುರ ಜಿಲ್ಲೆಗೆ 9ನೇ ಸ್ಥಾನ (Rank) ಪಡೆದು ಶಾಲೆಯ ಮತ್ತು ತಾಲೂಕಿನ ಕೀರ್ತಿ ಹೆಚ್ಚಿಸಿದ್ದಾಳೆ.
ವಿದ್ಯಾರ್ಥಿನಿಯ ಈ ಸಾಧನೆಗೆ ಶಾಲಾ ಮುಖ್ಯ ಶಿಕ್ಷಕ ಎಸ್ ಡಿ ಶರ್ಮಾ ಹಾಗೂ ಎಸ್ ಡಿ ಎಂ ಸಿ ಅಧ್ಯಕ್ಷರು, ಸರ್ವ ಸದಸ್ಯರು, ಶಿಕ್ಷಕ ಸಿಬ್ಬಂದಿ ವರ್ಗದವರು ಅಭಿನಂದನೆಗಳನ್ನು ಸಲ್ಲಿಸಿದ್ದಾರೆ.