ರಾಣೇಬೆನ್ನೂರಲ್ಲಿ ದತ್ತಾತ್ರೇಯ ಜಯಂತ್ಯೋತ್ಸವ

ಲೋಕದರ್ಶನವರದಿ

ರಾಣಿಬೆನ್ನೂರ:  ಸ್ಥಳೀಯ ಸಿದ್ದೇಶ್ವರ ನಗರದ ದತ್ತ ಮಂದಿರದಲ್ಲಿ ಶ್ರೀ ದತ್ತಾತ್ರೇಯ ಜಯಂತ್ಯೋತ್ಸವ ಹಾಗೂ ತೊಟ್ಟಿಲೋತ್ಸವದ ಕಾರ್ಯಕ್ರಮವು ಗುರುವಾರ ನೂರಾರು ಭಕ್ತರ ಸಮ್ಮುಖದಲ್ಲಿ ಶ್ರದ್ಧಾ ಭಕ್ತಿಯಿಂದ ನೆರೆವೇರಿತು.

   ಮುಂಜಾನೆಯಿಂದಲೇ  ದತ್ತಾತ್ರೇಯ ಸ್ವಾಮಿಗೆ ಪುರೋಹಿತ ನಿಖಿಲ ಮತ್ತು ಸಂಗಡಿಗರಿಂದ ರುದ್ರಾಭಿಷೇಕ, ಪುಷ್ಪಾಭಿಷೇಕ, ಮಂಗಳಾರತಿ  ಹಾಗೂ ಅಗಡಿಯ ಶ್ರೀಧರ ಚರ್ಕವತರ್ಿ ಇವರಿಂದ ಗುರು ಚರಿತ್ರೆ ಪಾರಾಯಣವು  ನಡೆಯಿತು. 

  ಅಂದು ಮುಂಜಾನೆ 11ಗಂಟೆಗೆ ವೇದಬ್ರಹ್ಮ ವಿನಾಯಕ ದೀಕ್ಷೀತ್ ಅವರ ಮಾರ್ಗದರ್ಶನದಲ್ಲಿ ತೊಟ್ಟಿಲೋತ್ಸವ ಕಾರ್ಯಕ್ರಮ ಅತ್ಯಂತ ಸಡಗರ ಸಂಭ್ರಮದಿಂದ ನಡೆಯಿತು. ರಾತ್ರಿ 8 ಗಂಟೆಗೆ ಕಾತರ್ಿಕೋತ್ಸವ ಕಾರ್ಯಕ್ರಮ ಜರುಗಿತು

   ಅಖಿಲ ಕನರ್ಾಟಕ ಬ್ರಾಹ್ಮಣ ಸಮಾಜದ ಉಪಾದ್ಯಕ್ಷ ಪ್ರಕಾಶ ಕುಲಕಣರ್ಿ, ಕಾರ್ಯದಶರ್ಿ ಪ್ರಸನ್ನ ಜೋಶಿ, ಸಿ.ಎಚ್.ಕುಲಕಣರ್ಿ, ಎನ್.ಎಚ್.ಕುಲಕಣರ್ಿ, ದೇವಸ್ಥಾನದ ಪ್ರಯಾಸ್ಥರಾದ ಕೆ.ಎಮ್.ಕುಲಕಣರ್ಿ, ರಾಧಾ ಕುಲಕಣರ್ಿ, ವಿನಾಯಕ ಕುಲಕಣರ್ಿ, ರೇಣುಕಾ ಚಕ್ರವತರ್ಿ, ವಾಣಿ ಕುಲಕಣರ್ಿ, ಸತೀಶ ಕುಲಕಣರ್ಿ, ನವೀನ ಕುಲಕಣರ್ಿ ಸೇರಿದಂತೆ ಮತ್ತಿತರರು ಇದ್ದರು