ಲೋಕದರ್ಶನವರದಿ
ಶಿಗ್ಗಾವಿ : ಹಿರೇಕೆರೂರ ಮತ್ತು ರಾಣೆಬೆನ್ನೂರ ಕ್ಷೇತ್ರಗಳಲ್ಲಿ ಕಾಂಗ್ರೆಸ್ ಗಾಳಿ ಜೋರಾಗಿದ್ದು ಎರಡೂ ಕ್ಷೇತ್ರಗಳ ಬಿಜೆಪಿ ಅಭ್ಯಥರ್ಿಗಳ ಸೋಲು ಬಹುತೇಕ ಖಚಿತವೆಂದು ಕೆಪಿಸಿಸಿ ಮುಖಂಡ ಹಾಗೂ ರಾಣೆಬೆನ್ನೂರ ವಿಧಾನಸಭಾ ಚುನಾವಣಾ ಕ್ಷೇತ್ರದ ವೀಕ್ಷಕರೂ ಆಗಿರುವ ಶಿಗ್ಗಾವಿ ತಾಲೂಕಿನ ಗುರುನಗೌಡ ಪಾಟೀಲ ಹೇಳಿದರು.
ಶಿಗ್ಗಾವಿ ಪಟ್ಟಣದಲ್ಲಿ ಬುಧವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು ರಾಣೆಬೆನ್ನೂರಿನ ತುಮ್ಮಿನಕಟ್ಟಿ ಜಿಲ್ಲಾ ಪಂಚಾಯತ ಕ್ಷೇತ್ರದಲ್ಲಿ ಕಾಂಗ್ರೆಸ್ ಅಭ್ಯಥರ್ಿ ಕೋಳಿವಾಡರ ಪರ ಪ್ರಚಾರ ಮಾಡಿದ್ದು ಕಾಂಗ್ರೆಸ್ ಗಾಳಿ ಜೋರಾಗಿದೆ, ಆರ್ ಶಂಕರ್ ಅವರ ರಾಜಕೀಯ ಮಾರಾಟದ ಆಟ ಜನತೆಗೆ ಗೊತ್ತಾಗಿದೆ ಇದರ ಪರಿಣಾಮ ಬಿಜೆಪಿ ಅಭ್ಯಥರ್ಿಗಳ ಸೋಲು ಖಚಿತವಾಗಿದೆ.
ಪಕ್ಷಾಂತರಿಗಳಿಗೆ ಜನತೆ ಈ ಚುನಾವಣೆಯಲ್ಲಿ ತಕ್ಕ ಪಾಠ ಕಲಿಸಲಿದ್ದು ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯನವರ ಅಭಿವೃದ್ಧಿ ಕಾರ್ಯಗಳನ್ನು ಜನತೆ ಮೆಚ್ಚಿದ್ದಾರೆ ಆದ್ದರಿಂದ ಅವರ ನಾಯಕತ್ವದಲ್ಲಿ ಸರಕಾರ ರಚಿಸಿದರೆ ಜನರ ನಿಜವಾದ ಸೇವೆ ಮಾಡಲು ಸಾಧ್ಯವಿದೆ ಇಲ್ಲವಾದರೆ ಸಾಮಾಜಿಕ ನ್ಯಾಯ ಮರಿಚೀಕೆಯಾಗಿಯೇ ಉಳಿಯಲಿದೆ ಆದ್ದರಿಂದ ಈ ಬಿಜೆಪಿಯ ಅನರ್ಹರನ್ನು ಶಾಶ್ವತವಾಗಿ ರಾಜಕೀಯದಿಂದ ದೂರವಿಡುವ ನಿಟ್ಟಿನಲ್ಲಿ ಜನತೆ ಈಗಾಗಲೇ ತೀಮರ್ಾನ ಕೈಗೊಂಡಿದ್ದಾರೆ ಎಂದರು.
ಹಿರಿಯರು, ಅನುಭವಿಗಳೂ ಆಗಿರುವ ಕೋಳಿವಾಡರ ಸೇವೆ ರಾಣೆಬೆನ್ನೂರ ಕ್ಷೇತ್ರಕ್ಕೆ ಇನ್ನೂ ಅವಶ್ಯವಿದ್ದು ಜನತೆ ಆಶೀವರ್ಾದ ಮಾಡಲಿದ್ದಾರೆ ಎಂದು ಭರವಸೆ ನೀಡಿದ ಅವರು ಇನ್ನು ಹಿರೇಕೆರೂರ ಕ್ಷೇತ್ರದ ಬಿಜೆಪಿ ಅಭ್ಯಥರ್ಿ ಬಿ ಸಿ ಪಾಟೀಲರು, ಬನ್ನಿಕೋಡ ಅವರ ವಿರುದ್ಧ ಸೋತು ಶಾಶ್ವತವಾಗಿ ಅನರ್ಹರಾಗಲಿದ್ದಾರೆ ಎಂದು ಭವಿಷ್ಯ ನುಡಿದರು.
ಜಿಲ್ಲಾ ಪಂಚಾಯತ ಉಪಾದ್ಯಕ್ಷೆ ಗಿರಿಜಮ್ಮ ಬ್ಯಾಲದಹಳ್ಳಿ, ಜಿ ಪಂ ಸದಸ್ಯ ಬಸವರಾಜ ದೇಸಾಯಿ, ರಮೇಶ ದುಗ್ಗತ್ತಿ, ವೀಕ್ಷಕರಾದ ಚಂದ್ರಶೇಖರ ಜುಟ್ಟಲ್, ನ್ಯಾಯವಾದಿ ನಾಗರಾಜ ಡಾವಣಗೇರಿ, ಶರಣಪ್ಪ ಕೋಟಗಿ, ಕೃಷ್ಣಪ್ಪ ಕಂಬಳಿ ಸೇರಿದಂತೆ ಕಾಂಗ್ರೆಸ್ ಮುಖಂಡರು ಇದ್ದರು.