ಅನಧಿಕೃತ ಲೇಓಟಗಳನ್ನು ನಿರ್ಮಿಸಿದ ಪಿಡಿಓಗಳ ಮೇಲೆ ಕ್ರಮಕ್ಕೆ ಆಗ್ರಹ

Demand action against PDOs for constructing unauthorized Layout

ಬೆಳಗಾವಿ 07: ಸರ್ಕಾರದ ನಿಯಮ ಪಾಲನೆ ಮಾಡದೆ ಕೃಷಿ ಜಮೀನಿನಲ್ಲಿ ಅನಧಿಕೃತ ಲೇಓಟಗಳನ್ನು ನಿರ್ಮಾಣ ಮಾಡಿದ ಪಿಡಿಓಗಳು ಮತ್ತು ಸಂಬಂಧಿತರ ಮೇಲೆ ಕ್ರಮ ಕೈಗೊಳ್ಳಬೇಕೆಂದು ಆಗ್ರಹಿಸಿ ಜಿಲ್ಲಾ ಪಂಚಾಯತ ಮುಖ್ಯ ಕಾರ್ಯನಿರ್ವಹಣಾಧಿಕಾರಿಗಳಿಗೆ ಡಾ. ಬಿ.ಆರ್‌.ಅಂಬೇಡ್ಕರ ಶಕ್ತಿ ಸಂಘದ ವತಿಯಿಂದ ಮನವಿ ಸಲ್ಲಿಸಲಾಯಿತು.ಮನವಿಯಲ್ಲಿ ತಾಲೂಕಿನ ಕಾರ್ಯನಿರ್ವಹಿಸಿದ ಮತ್ತು ನಿರ್ವಹಿಸುತ್ತಿರುವ ಪಿಡಿಓಗಳಾದ ಜಿ.ಆಯ್‌.ಬರ್ಗಿ, ಇವರು 2019 ಮೇ. 16ರಿಂದ 2022 ಏಪ್ರಿಲ್ 7ರವರೆಗೆ ತಾಲೂಕಿನ ಕಂಗ್ರಾಳಿ ಬಿ.ಕೆ.ಕಂಗ್ರಾಳಿ ಕೆ.ಎಚ್‌., ಬಾಳೇಕುಂದ್ರಿ ಬಿ.ಕೆ. ಸಾಂಬ್ರಾ ಪಂಚಾಯತಿಗಳಲ್ಲಿ ಇವರು ಈ ಸ್ವತ್ತು ತಂತ್ರಾಂಶದ ಮೂಲಕ ನಮೂನೆ 9 ಮತ್ತು 11 ಎ, ಹಾಗೂ 11 ಬಿ ವಿತರಣೆಯಲ್ಲಿ ನಿಯಮ ಪಾಲನೆ ಮಾಡದೆ ಹಾಗೂ ನಿಯಮಬಾಹಿರವಾಗಿ ವಿನ್ಯಾಸಗಳನ್ನು ಅನುಮೋದಿಸಿ ನಮೂನೆ 9 ಮತ್ತು 11 ಎ, ಹಾಗೂ 11 ಬಿ ವಿತರಿಸಿದ್ದಾರೆ. ಕೆಲವೊಂದು ಪಂಚಾಯತಿಯಲ್ಲಿ ಸರ್ಕಾರದ ನಿಯಮ ಮತ್ತು ಆದೇಶಗಳನ್ನು ಪಾಲನೆ ಮಾಡದೆ ಗಾಳಿಗೆ ತೂರಿ 16-03-2024ರಂದು ಕೃಷಿ ಜಮೀನಿನಲ್ಲಿ ಅನಧಿಕೃತ ಲೇಓಟ್‌ಗಳನ್ನು ನಿರ್ಮಾಣ ಮಾಡಿದ್ದಾರೆ. ಅದೇ ರೀತಿ ತಾಲೂಕಿನ ಧಾಮನೆ(ಎಸ್) ಪಂಚಾಯತಿ ಪಿಡಿಓ ರಾನ್ನಮ್ಮ ಮಾದರ, ಉಷಾ ಪಂಚಾಯತಿ ವ್ಯಾಪ್ತಿಯಲ್ಲಿ ಕೆಲವೊಂದು ಜಮೀನಿನಲ್ಲಿ ಅನಧಿಕೃತ ಲೇಓಟ್‌ಗಳನ್ನು ನಿರ್ಮಾಣ ಮಾಡಿದ್ದಾರೆ. 

 ಸರ್ಕಾರದ ಸುತ್ತೋಲೆಗಳನ್ನು ಪಾಲಿಸದೆ ಕಾನೂನಿಗೆ ಗೌರವ ನೀಡದೆ ಸಾರ್ವಜನಿಕರಿಗೆ ಮೋಸ ಮಾಡಿ ಸರ್ಕಾರದ ಬೊಕ್ಕಸಕ್ಕೆ ಸುಮಾರು ಅಂದಾಜು ಕೋಟಿಗಳಷ್ಟು ನಷ್ಟ ಮಾಡಿದ್ದಾರೆ. ಕಾರಣ  ಪಿಡಿಓಗಳನ್ನು ಸೂಕ್ತ ವಿಚಾರಣೆ ಮಾಡಿ ತನಿಖೆ ನಡೆಸಿ ತಪ್ಪಿತಸ್ಥರೆಂದು ಕಂಡು ಬಂದಲ್ಲಿ ಸೂಕ್ತ ಕ್ರಮ ಜರುಗಿಸಬೇಕೆಂದು ಎಪ್ರಿಲ್ 2024ರಂದು ಆಗ್ರಹಿಸಿ ಜಿಪಂ ಸಿಇಓ ಮತ್ತು ತಾಪಂ ಇಇಓ ಅವರಿಗೆ ಮನವಿ ಅರ್ಜಿ ಸಲ್ಲಿಸಲಾಗಿತ್ತು ಆದರೆ ಇದಕ್ಕೆ ಸಂಬಂಧ ಪಟ್ಟಂತೆ ಕೇಸ್‌ವರ್ಕರಗಳು, ಸಿಬ್ಬಂದಿ ಇಲ್ಲಿಯ ತನಕ ಯಾವುದೇ ಕ್ರಮ ತೆಗೆದುಕೊಂಡಿಲ್ಲ.  

ಆದ್ದರಿಂದ ಇದಕ್ಕೆ ಸಂಬಂಧ ಪಟ್ಟಂತೆ ಪಿಡಿಓಗಳು ಮತ್ತು ಕರ್ತವ್ಯಲೋಪವೆಸಗಿದ ಕೇಸ್‌ವರ್ಕರಗಳು, ಸಿಬ್ಬಂದಿ ಮೇಲೂ ಕ್ರಮ ಜರುಗಿಸಬೇಕೆಂದು ಒತ್ತಾಯಿಸಲಾಗಿದೆ. ಒಂದು ವೇಳೆ ಇದನ್ನು ಗಂಭೀರವಾಗಿ ಪರಿಗಣಿಸಿ ಕ್ರಮ ಕೈಗೊಳ್ಳದಿದ್ದರೆ ಡಾ. ಬಿ.ಆರ್‌.ಅಂಬೇಡ್ಕರ ಶಕ್ತಿ ಸಂಘದ ವತಿಯಿಂದ ಜಿಪಂ ಕಾರ್ಯಾಲಯದೆದುರು ಶೀಘ್ರದಲ್ಲೆ ಉಪವಾಸ ಧರಣಿ ಸತ್ಯಾಗ್ರಹವನ್ನು ಹಮ್ಮಿಕೊಳ್ಳಲಾಗುವುದೆಂದು ಸಂಘದ ಸಂಸ್ಥಾಪಕ ರಾಜ್ಯಾಧ್ಯಕ್ಷ ಲಕ್ಷ್ಮಣ ದಶರಥ ಕೋಲಕಾರ ಅವರು ತಿಳಿಸಿದ್ದಾರೆ.  

 ಮನವಿ ಅರ​‍್ಿಸುವಾಗ ಸಂಘದ ಸದಸ್ಯರು, ಇತರರು ಉಪಸ್ಥಿತರಿದ್ದರು.