ವಿಜಯಪುರ 12: ಇತ್ತೀಚಿಗೆ ನಡೆದ ರಾಜಕೀಯ ನಡೆ ಮತ್ತು ಧಾರ್ಮಿಕ ವಿಚಾರಗಳಲ್ಲಿ ವೈಮನಸ್ಸು ವಿಪರೀತ ತಾರಕಕ್ಕೆರಿದೆ, ವಿಜಯಪುರ ನಗರದ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಅವರು ಹುಬ್ಬಳ್ಳಿಯಲ್ಲಿ ಭಾಷಣ ಮಾಡುವಾಗ ಮುಸಲ್ಮಾನರ ಧರ್ಮ ಗುರುಗಳ ಬಗ್ಗೆ ಮಾತನಾಡಿದ ವಿಷಯ ವಿಚಾರವಾಗಿ ಈಗಾಗಲೇ ಈಋ ಮಾಡಲಾಗಿದೆ.
ಆದ್ರೆ ನಿನ್ನೆ ನಡೆದಂತ ಒಬ್ಬ ಮುಸಲ್ಮಾನ ಯುವಕನ ಸಂಭಾಷಣೆ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡಿ ಯತ್ನಾಳರ ಕತ್ತನ್ನ ಕತ್ತರಿಸುವ ಮಾತನ್ನು ಕೇಳಿ ಅಘಾದವಾಗಿದೆ. ಆಗಲೇ ರಾಜಸ್ತಾನದಲ್ಲಿ ಇದೆ ರೀತಿಯ ಘಟನೆಯಲ್ಲಿ ಒಬ್ಬ ಟೈಲರ್ ನ ಕತ್ತು ಕತ್ತರಿಸಿದ ಘಟನೆ ಇನ್ನೂ ಮಾಸಿಲ್ಲ. ಕಾರಣ ಆ ಅಘಾತಕಾರಿ ಹೇಳಿಕೆ ಕೊಟ್ಟ ಆ ಮುಸ್ಲಿಂ ಯುವಕನ ಮೇಲೆ ಸ್ವ ಮೋಟೋ ಎಫ್‌ಐಆರ್ ದಾಖಲಿಸಿ ಅರೆಸ್ಟ್ ಮಾಡಬೇಕು ಎಂದು ಪೊಲೀಸ್ ಇಲಾಖೆಗೆ ಬಿಜೆಪಿ ರಾಜ್ಯ ವ್ಯಾಪಾರ ಮತ್ತು ವಾಣಿಜ್ಯ ಪ್ರಕೋಷ್ಠದ ಸಂಚಾಲಕನಾಗಿ ವಿಜಯಕುಮಾರ ಕುಡಿಗನೂರ ಒತ್ತಾಯಿಸಿದ್ದಾರೆ.