ಉಗ್ರರಿಗೆ ಕಠಿಣ ಶಿಕ್ಷೆ ನಿಡಲು ಆಗ್ರಹ

Demand for strict punishment for terrorists

ಲೋಕದರ್ಶನ ವರದಿ 

ಉಗ್ರರಿಗೆ ಕಠಿಣ ಶಿಕ್ಷೆ ನಿಡಲು ಆಗ್ರಹ  

ಹಾನಗಲ್ 25: ಜಮ್ಮು ಮತ್ತು ಕಾಶ್ಮೀರದ ಪಹಲ್ಗಾಮ್‌ದಲ್ಲಿ ಉಗ್ರರ ಕೃತ್ಯಕ್ಕೆ ಬಲಿಯಾದ ಪ್ರವಾಸಿಗರ ಗೌರವಾರ್ಥ ಇಲ್ಲಿ ಬುಧವಾರ ಸಂಜೆ ಯುವ ಕಾಂಗ್ರೆಸ್ ವತಿಯಿಂದ ಮೇಣದಬತ್ತಿ ಬೆಳಗಿಸಿ, ಶ್ರದ್ಧಾಂಜಲಿ ಸಲ್ಲಿಸಲಾಯಿತು. ಇಲ್ಲಿನ ಕನಕ ವೃತ್ತದಲ್ಲಿ ಸೇರಿದ ಯುವ ಕಾಂಗ್ರೆಸ್ ಕಾರ್ಯಕರ್ತರು ಉಗ್ರರ ಅಟ್ಟಹಾಸಕ್ಕೆ ಆಕ್ರೋಶ ವ್ಯಕ್ತಪಡಿಸಿ, ಘಟನೆಯಲ್ಲಿ ಮಡಿದ ಜೀವಗಳಿಗಾಗಿ ಕಂಬನಿ ಮಿಡಿದರು. ಈ ಸಂದರ್ಭದಲ್ಲಿ ಯುವ ಕಾಂಗ್ರೆಸ್ ತಾಲೂಕಾಧ್ಯಕ್ಷ ಸಂತೋಷ ದುಂಡಣ್ಣನವರ ಮಾತನಾಡಿ, ಉಗ್ರರ ಹೇಯ ಕೃತ್ಯ ಖಂಡನೀಯ. ಪ್ರವಾಸಕ್ಕೆಂದು ತೆರಳಿದ ಕನ್ನಡಿಗರೂ ಸೇರಿದಂತೆ ಹಲವು ಮುಗ್ಧ ಜೀವಗಳು ಬಲಿಯಾಗಿವೆ. ಪ್ರವಾಸಿಗರನ್ನು ಗುರಿಯಾಗಿಸಿಕೊಂಡು ನಡೆಸಿರುವ ಉಗ್ರರ ದಾಳಿಯಿಂದ ಇಡೀ ದೇಶ ಬೆಚ್ಚಿ ಬಿದ್ದಿದೆ. ಅಮಾನವೀಯ ಕೃತ್ಯಕ್ಕೆ ಕಾರಣರಾದವರನ್ನು ಸುಮ್ಮನೆ ಬಿಡಬಾರದು ಎಂದರು. ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಮಂಜು ಗೊರಣ್ಣನವರ, ನಗರ ಕಾಂಗ್ರೆಸ್ ಅಧ್ಯಕ್ಷ ಮತೀನ್ ಶಿರಬಡಗಿ, ಪುರಸಭೆ ಅಧ್ಯಕ್ಷ ಪರಶುರಾಮ ಖಂಡೂನವರ, ಉಪಾಧ್ಯಕ್ಷೆ ವೀಣಾ ಗುಡಿ, ಮಾಜಿ ಅಧ್ಯಕ್ಷೆ ಮಮತಾ ಆರೆಗೊಪ್ಪ, ಪ್ರವೀಣ ಹಿರೇಮಠ, ಬಾಬು ನಿಕ್ಕಂ, ಆದರ್ಶ ಶೆಟ್ಟಿ, ಶಿವು ತಳವಾರ, ಶಿವು ಭದ್ರಾವತಿ, ರಾಜಕುಮಾರ ಶಿರಪಂತಿ, ಅಬ್ದುಲ್‌ರಜಾಕ್ ಮುಲ್ಲಾ, ನಾಗರಾಜ ಆರೇರ, ರಫೀಕ್ ಉಪ್ಪುಣಸಿ, ಇರ್ಫಾನ್ ಮಿಠಾಯಿಗಾರ, ನಿಯಾಜ್ ಸರ್ವಿಕೇರಿ, ಬಸವರಾಜ ಡುಮ್ಮನವರ, ಮೈಲಾರಿ ಬಾರ್ಕಿ, ರಾಮಚಂದ್ರ ಕಲ್ಲೇರ, ಬಸನಗೌಡ ಪಾಟೀಲ, ಲಿಂಗರಾಜ ಮಡಿವಾಳರ ಸೇರಿದಂತೆ ಇನ್ನೂ ಹಲವರು ಈ ಸಂದರ್ಭದಲ್ಲಿ ಇದ್ದರು.  ಪಹಲ್ಗಾಮ್‌ನಲ್ಲಿ ನಡೆದ ಭಯೋತ್ಪಾದಕ ದಾಳಿ ಆಘಾತಕಾರಿ. ಈ ಹೇಯ ಕೃತ್ಯದಲ್ಲಿ ಪ್ರವಾಸಕ್ಕೆಂದು ತೆರಳಿದ್ದ ಹಲವು ಕನ್ನಡಿಗರು ಸಹ ಪ್ರಾಣ ತೆತ್ತಿರುವುದು ದುಃಖದ ಸಂಗತಿ. ಭಯೋತ್ಪಾದಕರ ದಾಳಿ ಕುರಿತ ಚಿತ್ರಗಳು ಹೃದಯವಿದ್ರಾವಕವಾಗಿವೆ. ಮುಗ್ಧ ಜನರ ಮೇಲೆ ದಾಳಿ ನಡೆಸಿರುವುದು ಮಾನವೀಯತೆ ಮೇಲಿನ ದಾಳಿ. ಈ ಉಗ್ರ ಕೃತ್ಯವನ್ನು ಖಂಡಿಸುವೆ.