ಲೋಕದರ್ಶನ ವರದಿ
ಸಂಜೀವಿನಿ ಫೌಂಡೇಶನ್ ವೃದ್ಧಾಶ್ರಮಕ್ಕೆ ಉಪ ಮಹಾಪೌರ ಭೇಟಿ
ಬೆಳಗಾವಿ 18: ಬೆಳಗಾವಿ ವಡಗಾವದಲ್ಲಿರುವ ಸಂಜೀವಿನಿ ಫೌಂಡೇಶನ್ ವೃದ್ಧಾಶ್ರಮಕ್ಕೆ ಬೆಳಗಾವಿಯ ಉಪ ಮಹಾಪೌರವಾಣಿ ವಿಲಾಸ್ ಜೋಶಿ ಅವರು ಇಂದು ಭೇಟಿ ನೀಡಿ ಹಿರಿಯ ಪತ್ರಕರ್ತೆ ಸುಧಾ ಪಟ್ಟೇದ ಅವರ 80ನೇ ಜನ್ಮದಿನೋತ್ಸವ ಕಾರ್ಯಕ್ರಮದಲ್ಲಿ ಭಾಗವಹಿಸಿದರು.
ಕಳೆದ ಒಂದು ದಶಕಕ್ಕೂ ಅಧಿಕ ಕಾಲದಿಂದ ಕಾರ್ಯನಿರ್ವಹಿಸುತ್ತಿರುವ ಸಂಜೀವಿನಿ ಫೌಂಡೇಶನ್‌ದಲ್ಲಿ ಸದ್ಯಕ್ಕೆ 45ಕ್ಕೂ ಹೆಚ್ಚು ಆಶ್ರಮವಾಸಿಗಳಿದ್ದಾರೆ. ಅದರಲ್ಲಿ 99ವರ್ಷದ ಹಿರಿಯರು ಕೂಡ ಇದ್ದಾರೆ. ಇಲ್ಲಿ ಅವರಿಗೆ ಆರೋಗ್ಯದ ಮೇಲುಸ್ತುವಾರಿ ಕೂಡ ಸೂಕ್ತ ಸಮಯದಲ್ಲಿ ಲಭ್ಯವಾಗುತ್ತದೆ ಎಂದು ಸಂಜೀವಿನಿ ಫೌಂಡೇಶನ್ ಸಂಚಾಲಕಿ ಸವಿತಾ ಅವರು ಹೇಳಿದರು.
ಮದನ್ ಬಾಮಣೆ ಅವರು ಮಾತನಾಡಿ ಎಲ್ಲ ರೀತಿಯ ಸೌಲಭ್ಯಗಳನ್ನು ನೀಡಲಾಗುತ್ತಿದೆ ಎಂದು ಹೇಳಿದರು.
ಬೆಂಗಳೂರಿನ ಪಾರ್ವತಿ ಚೌಧರಿ, ಹಿರಿಯ ಪತ್ರಕರ್ತ ವಿಲಾಸ್ ಜೋಶಿ, ಮುರುಗೇಶ್ ಶಿವಪೂಜಿ, ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.