ಹಾವೇರಿ: ದೈನಂದಿನ ವ್ಯವಹಾರದಲ್ಲಿ ಪ್ರತಿಯೊಬ್ಬ ಗ್ರಾಹಕನು ಒಂದಲ್ಲಾ ಒಂದು ಸಂದರ್ಭದಲ್ಲಿ ವಂಚನೆಗೆ ಒಳಗಾಗುತ್ತಾನೆ. ಇಂತಹ ಸಂದರ್ಭದಲ್ಲಿ ಗ್ರಾಹಕರ ವ್ಯಾಜ್ಯಗಳ ಪರಿಹಾರ ವೇದಿಕೆಗೆ ದೂರು ಸಲ್ಲಿದಾಗ ನ್ಯಾಯ ಪಡೆಯಬಹುದು ಎಂದು ಜಿಲ್ಲಾ ಗ್ರಾಹಕರ ವ್ಯಾಜ್ಯ ಪರಿಹಾರ ವೇದಿಕೆ ಅಧ್ಷಕ್ಷೆ ಸುನಂದಾ ದುಗರ್ೇಶ ಹೇಳಿದರು.
ಜಿಲ್ಲಾಡಳಿತ, ಜಿಲ್ಲಾ ಗ್ರಾಹಕರ ವ್ಯಾಜ್ಯಗಳ ಪರಿಹಾರ ವೇದಿಕೆ ಹಾಗೂ ವಿವಿಧ ಇಲಾಖೆಗಳ ಸಹಯೋಗದಲ್ಲಿ ಮಂಗಳವಾರ ನಗರದ ಸಿ.ಬಿ. ಕೊಳ್ಳಿ ಪಾಲಿಟೆಕ್ನಿಕ್ ಕಾಲೇಜು ಸಭಾಂಗಣದಲ್ಲಿ ನಡೆದ ರಾಷ್ಟ್ರೀಯ ಗ್ರಾಹಕರ ದಿನಾಚರಣೆ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ಗ್ರಾಹಕರು ಕಾನೂನಿನ ಅರಿವಿನ ಕೊರತೆಯಿಂದ ಮೋಸಕ್ಕೆ ಒಳಗಾಗುತ್ತಾರೆ. ಯಾವುದೇ ಸೇವೆ ಪಡೆಯುವ ಅಥವಾ ವಸ್ತು ಖರೀದಿಯ ಸಂದರ್ಭದಲ್ಲಿ ಮಾಲೀಕರಿಂದ ಅಥವಾ ವ್ಯಾಪಾರಸ್ಥರಿಂದ ಸೇವಾ ನ್ಯೂನ್ಯತೆ ಅಥವಾ ಗುಣಮಟ್ಟದ ಕೊರತೆ, ತೂಕ, ಅಳತೆಯಲ್ಲಿ ಮೋಸವಾದರೆ ಅಂತಹವರ ವಿರುದ್ಧ ಗ್ರಾಹಕರ ವೇದಿಕೆಗೆ ದೂರು ಸಲ್ಲಿಸಬಹುದು. ಆದರೆ ಯಾವುದೇ ಸೇವೆ ಮತ್ತು ಖರೀದಿಯ ಸಂದರ್ಭದಲ್ಲಿ ಕಡ್ಡಾಯವಾಗಿ ರಸೀದಿಯನ್ನು ಪಡೆಯಬೇಕು. ಈ ರಶೀದಿಯೊಂದಿಗೆ ಜಿಲ್ಲಾ ಗ್ರಾಹಕರ ವೇದಿಕೆಗೆ ದೂರು ಸಲ್ಲಿಸಿದರೆ ಪರಿಹಾರ ಪಡೆಯಬಹುದು. ದೂರು ಸಲ್ಲಿಸಲು ಯಾವುದೇ ಶುಲ್ಕ ವಿರುವುದಿಲ್ಲ ಎಂದು ಹೇಳಿದರು.
ಜಿಲ್ಲೆಯಲ್ಲಿ ಕಳೆದ ನಾಲ್ಕುವರೆ ವರ್ಷಗಳಲ್ಲಿ ಕೇವಲ 30 ದೂರುಗಳು ಮಾತ್ರ ಜಿಲ್ಲಾ ಗ್ರಾಹಕ ವೇದಿಕೆಗೆ ದಾಖಲಾಗಿವೆ. ನಿತ್ಯ ಸಾವಿರಾರು ಜನರು ವಂಚನೆ ಒಳಗಾದರೂ ನ್ಯಾಯ ಪಡೆಯಲು ಅರಿವಿನ ಕೊರತೆ ಗ್ರಾಹಕರಿಗಿದೆ. ಮೊದಲು ಗ್ರಾಹಕರು ಜಾಗೃತರಾಗಬೇಕು, ತಮಗಾದ ಅನ್ಯಾಯವನ್ನು ಪ್ರಶ್ನಿಸಬೇಕು. ಖರೀದಿಸುವ ಪ್ರತಿಯೊಂದು ವಸ್ತುವಿಗೆ ರಶೀದಿ ಪಡೆಯಬೇಕು. ಎಂ.ಆರ್.ಪಿ.ಗಿಂತ ಅಧಿಕ ಹಣ ಪಡೆದರೆ, ಕಳಪೆ ಗುಣಮಟ್ಟದ ವಸ್ತು ನೀಡಿದರೆ ಈ ರೀತಿಯ ಹಲವು ಲೋಪದೋಷಗಳಿದ್ದಲ್ಲಿ ಒಂದು ಬಿಳಿ ಹಾಳೆಯಲ್ಲಿ ವಿವರವಾದ ಮಾಹಿತಿಯನ್ನು ಗ್ರಾಹಕರ ವ್ಯಾಜ್ಯ ಪರಿಹಾರ ವೇದಿಕೆಗೆ ಸಲ್ಲಿಸಿ ನ್ಯಾಯ ಪಡೆದುಕೊಳ್ಳಬಹುದು ಎಂದು ತಿಳಿಸಿದರು.
ಜಿಲ್ಲೆ, ರಾಜ್ಯ ಹಾಗೂ ರಾಷ್ಟ್ರ ಒಟ್ಟು ಮೂರು ಹಂತದಲ್ಲಿ ಗ್ರಾಹಕರ ವ್ಯಾಜ್ಯ ಪರಿಹಾರ ವೇದಿಕೆ ಕಾರ್ಯನಿರ್ವಹಿಸುತ್ತದೆ. ವೇದಿಕೆಗೆ ದೂರು ದಾಖಲಾದ ಮೂರು ತಿಂಗಳೊಳಗಾಗಿ ಪರಿಹಾರ ಒದಗಿಸಲಾಗುವುದು. ಗ್ರಾಹಕರ ವ್ಯಾಜ್ಯ ಪರಿಹಾರ ವೇದಿಕೆ 1986ರ ಕಾಯ್ದೆ ಅನ್ವಯ ಜಿಲ್ಲಾ ಮಟ್ಟದ ಈ ಮೊದಲು 20 ಲಕ್ಷ ರೂ.ವರೆಗೆ ಪರಿಹಾರ ಪಡೆಯಲು ಅವಕಾಶವಿತ್ತು. ಈಗ 2019ರ ಕಾಯ್ದೆ ಅನ್ವಯ ಜಿಲ್ಲಾ ಮಟ್ಟದಲ್ಲಿ ಒಂದು ಕೋಟಿ ರೂ.ವರೆಗೆ ಪರಿಹಾರ ಪಡೆದುಕೊಳ್ಳಲು ಅವಕಾಶ ಕಲ್ಪಿಸಿ ಕಾಯ್ದೆಗೆ ತಿದ್ದುಪಡಿ ತರಲಾಗಿದೆ. ಸದ್ಯ 1986 ಕಾಯ್ದೆ ಜಾರಿಯಲ್ಲಿದೆ. ಬಿ.ಪಿ.ಎಲ್. ಹಾಗೂ ಅಂತ್ಯೋದಯ ಪಡಿತರ ಚೀಟಿದಾರರಿಗೆ ಯಾವುದೇ ಶುಲ್ಕ ಇರುವುದಿಲ್ಲ. ಐದುಲಕ್ಷ ರೂ.ವರೆಗೆ ಪರಿಹಾರದ ದೂರಿಗೆ ಶುಲ್ಕ ಇರುವುದಿಲ್ಲ. ಇದಕ್ಕಿಂತ ಮೇಲ್ಪಟ್ಟ ಪರಿಹಾರಕ್ಕೆ ರೂ.100 ಗಳ ಶುಲ್ಕ ಭರಿಸಬೇಕಾಗುತ್ತದೆ ಎಂದು ಹೇಳಿದರು.
ಕಾರ್ಯಕ್ರಮ ಉದ್ಘಾಟಿಸಿದ ಅಪರ ಜಿಲ್ಲಾಧಿಕಾರಿಗಳು ಹಾಗೂ ಅಹಾರ ನಾಗರಿಕ ಸರಬರಾಜು ಹಾಗೂ ಗ್ರಾಹಕರ ವ್ಯವಹಾರಗಳ ಇಲಾಖೆ ಪ್ರಭಾರ ಉಪನಿದರ್ೆಶಕರಾದ ಡಾ.ಎನ್.ತಿಪ್ಪೇಸ್ವಾಮಿ ಅವರು ಮಾತನಾಡಿ, ಸಮಾಜದಲ್ಲಿರುವ ಪ್ರತಿಯೊಬ್ಬರು ಗ್ರಾಹಕರಾಗಿದ್ದಾರೆ. ಮನುಷ್ಯನ ಆಸೆ ಹಾಗೂ ತ್ವರಿತ ಶ್ರೀಮಂತನಾಗಲು ವಾಮ ಮಾರ್ಗಗಳನ್ನು ಹಿಡುತ್ತಿರುವುದು ಸಾಮಾನ್ಯವಾಗಿದೆ. ಮಾರುಕಟ್ಟೆಯಲ್ಲಿ ಕಲಬೆರಿಕೆ ಹಾಗೂ ವಿಷಕಾರಿಕ ವಸ್ತುಗಳ ಮಾರಾಟ ನಡೆಯುತ್ತಿದೆ. ಕೊಳ್ಳುವ ಗ್ರಾಹಕರು ಬಹಳ ಎಚ್ಚರಿಕೆಯಿಂದ ಖರೀದಿಸಬೇಕು ಹಾಗೂ ಖರೀದಿಸಿದ ವಸ್ತುಗಳಿಗೆ ರಶೀದಿ ಪಡೆಯಬೇಕು. ನಮಗೆ ಅನ್ಯಾಯವಾದ ಸಂದರ್ಭದಲ್ಲಿ ಪರಿಹಾರ ಪಡೆದುಕೊಳ್ಳು ರಶೀದಿಗಳು ಸಹಕರಾಗಿವೆ ಎಂದು ಹೇಳಿದರು.
ಮುಖ್ಯ ಅತಿಥಿಗಳಾಗಿ ಭಾಗವಹಿಸಿದ ತಹಶೀಲ್ದಾರ ಜಿ.ಎಸ್. ಶಂಕರ ಹಾಗೂ ಚೈತನ್ಯ ರೂರಲ್ ಡೆವಲಪಮೆಂಟ್ ಸೊಸೈಟಿ ನಿದರ್ೆಶಕರಾದ ಶ್ರೀಮತಿ ಗೀತಾ ಪಾಟೀಲ ಅವರು ಮಾತನಾಡಿದರು. ವಕೀಲರಾದ ಮಹಾಂತೇಶ ಬಸವನಾಯ್ಕರ ಅವರು ಗ್ರಾಹಕ ಹಕ್ಕುಗಳ ಕಾಯ್ದೆ ಕುರಿತು ಉಪನ್ಯಾಸ ನೀಡಿದರು. ಸಿ.ಬಿ.ಕೊಳ್ಳಿ ಪಾಲಿಟೆಕ್ನಿಕ್ ಪ್ರಾಂಶುಪಾಲ ಚನ್ನಪ್ಪ ಬಿ ಅವರು ಅಧ್ಯಕ್ಷತೆ ವಹಿಸಿದ್ದರು.
ಕಾರ್ಯಕ್ರಮದಲ್ಲಿ ಕಾನೂನುಮಾಪನ ಶಾಸ್ತ್ರ ಇಲಾಖೆ ಸಹಾಯಕ ನಿದರ್ೆಶಕ ಲೋಕೇಶ್, ಜಿಲ್ಲಾ ಮಕ್ಕಳ ಕಲ್ಯಾಣ ಸಮಿತಿ ಅಧ್ಯಕ್ಷ ಎಸ್.ಎಚ್.ಮಜೀದ್ ಇತರರು ಉಪಸ್ಥಿತರಿದ್ದರು.