ಲೋಕದರ್ಶನ ವರದಿ
ಮುಧೋಳ 16: ತಾಲೂಕಿನ ಮಂಟೂರ ಗ್ರಾಮ ಪಂಚಾಯತಿಯನ್ನು ಮಾದರಿಯಾಗಿ ಅಭಿವೃದ್ಧಿ ಪಡಿಸಲು 4.68 ಕೋಟಿ ರೂ.ಗಳ ಕ್ರೀಯಾ ಯೋಜನೆಗೆ ಗ್ರಾಮಸಭೆ ಜಿಪಂ ಸಿಇಒ ಗಂಗೂಬಾಯಿ ಮಾನಕರ್ ನೇತೃತ್ವದಲ್ಲಿ ನಡೆದು ಅನುಮೋದನೆ ನೀಡಿದೆ.
ಗ್ರಾಮದ ಶ್ರೀ ರಾಮಲಿಂಗೇಶ್ವರ ಸಮುದಾಯ ಭವನದ ಆವರಣದಲ್ಲಿ ನಡೆದ ವಿಶೇಷ ಗ್ರಾಮಸಭೆಯಲ್ಲಿ ಜಿಪಂ ಸಿಇಒ ಗಂಗೂಬಾಯಿ ಮಾನಕರ್ ಮಂಟೂರ ಗ್ರಾಮ ಪಂಚಾಯತಿ ನರೇಗಾ ಯೋಜನೆಯಡಿ ಹೆಚ್ಚುವರಿ ಕ್ರೀಯಾ ಯೋಜನೆ 332.39[ಲಕ್ಷಗಳಲ್ಲಿ] ಮೊತ್ತಕ್ಕೆ ಅನುಮೋದನೆ ನೀಡಿದ್ದು ಅಲ್ಲದೇ 2019-20ನೇ ಸಾಲಿನ ನರೇಗಾ ಕ್ರೀಯಾ ಯೋಜನೆ 135.619ಲಕ್ಷ ರೂ. ಮೊತ್ತಕ್ಕೆ ಸಭೆಯಲ್ಲಿ ಅನು ಮೋದನೆ ನೀಡಿ ಒಟ್ಟು 468.009 ಲಕ್ಷ ಮೊತ್ತಕ್ಕೆ ಅನುಮೋದನೆ ನೀಡಿದರು.
ಗ್ರಾಮ ಗುಡ್ಡದ ಪ್ಲಾಟ್ ಜನರು ಹಕ್ಕು ಪತ್ರ ಇಲ್ಲದೇ ವಾಸಿಸುತ್ತಿದ್ದಾರೆ ಎಂಬುದರ ಕುರಿತು ಅರಣ್ಯ ಇಲಾಕೆ ಹಾಗೂ ಸಕರ್ಾರದ ಮಟ್ಟದಲ್ಲಿ ಚಚರ್ಿಸಿ ಪರಿಹರಿಸಲಾಗುವುದು ಎಂದು ಭರವಸೆ ನೀಡಲಾಯಿತು. ಬುದ್ನಿ ಪಿಎಂ ಗ್ರಾಮದ ಸುಮಾರು 30 ವರ್ಷಗಳ ಕಾಲ ರಸ್ತೆ ಬದಿ ವಾಸಿಸುತ್ತಿರುವ ಲಂಬಾಣಿ ಜನಾಂಗದವರಿಗೆ ನಿವೇಶನ ಮತ್ತು ವಸತಿ ಉದ್ದೇಶಕ್ಕಾಗಿ ಖಾಸಗಿ ಜಮೀನನ್ನು ಖರೀದಿಸಿ ಹಕ್ಕುಪತ್ರ ಹಂಚಿಕೆ ಮಾಡಲಾಗುವುದು ಎಂದು ತಿಳಿಸಲಾಯಿತು.
ಗ್ರಾಮದ ಸಮಗ್ರ ಮುನ್ನೋಟದ ಕುರಿತು ಪಿಕೆಪಿಎಸ್ ಅಧ್ಯಕ್ಷ ಸುರೇಂದ್ರಬಾಬು ಗೋಲಶೆಟ್ಟಿ ವಿವರಿಸಿ ಗ್ರಾಮಗಳಲ್ಲಿ ಮಾಡಬಹು ದಾದ, ಮಾಡಲೇಬೇಕಾದ ಕಾಮಗಾರಿಗಳ ಕುರಿತು ಸಮಗ್ರ ಮಾಹಿತಿ ವಿವರಿಸಿದರು.
ಗ್ರಾಪಂ ಅಧ್ಯಕ್ಷ ಸೌಮ್ಯ ರವೀಂದ್ರ ಕೋಲೂರ ಅಧ್ಯಕ್ಷತೆ ವಹಿಸಿದ್ದರು. ಗ್ರಾಪಂ ಉಪಾಧ್ಯಕ್ಷ ಮಲ್ಲಪ್ಪ ಚಿಗರಡ್ಡಿ,ತಾಪಂ ಅಧ್ಯಕ್ಷ ತಿಮ್ಮಣ್ಣ ಬಟಕುಕರ್ಿ,ತಾಪಂ ಸದಸ್ಯ ಚನ್ನಬಸಪ್ಪ ಡೋಣಿ,ತಾಪಂ ಕಾರ್ಯನಿವರ್ಾಹಕ ಅಧಿಕಾರಿ ಬಿ.ವ್ಹಿ.ಅಡವಿಮಠ ಉಪಸ್ಥಿತರಿದ್ದರು.
ಪಿಡಿಒ ರಾಜು ವಾರದ ಸ್ವಾಗತಿಸಿದರು. ಗೀತಾ ತುರುಮುರಿ[ಗೋಲಶೆಟ್ಟಿ} ಕಾರ್ಯಕ್ರಮ ನಿರೂಪಿಸಿ, ವಂದಿಸಿದರು.