ವಿಕಲಚೇತನರಿಗೂ ಸಮಾಜದಲ್ಲಿ ಜೀವಿಸುವ ಹಕ್ಕಿದೆ

ಹಾವೇರಿ:  ನಮ್ಮ ಸಮಾಜದಲ್ಲಿ ವಿಕಲಚೇತನರಿಗೂ ಕೂಡಾ ಜೀವಿಸುವ ಹಕ್ಕಿದೆ. ವಿಕಲಚೇತನರಲ್ಲಿ ಚೈತನ್ಯದ ಚಿಲುಮೆ ಮೂಡಿಸಿ ಬದುಕಲು ಉತ್ಸುಕತೆಯನ್ನು ತುಂಬಬೇಕು ಎಂದು ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಅಧ್ಯಕ್ಷರು ಹಾಗೂ ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶರಾದ ಎಸ್.ಎಚ್. ರೇಣುಕಾದೇವಿ ಹೇಳಿದರು.

       ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ, ನ್ಯಾಯವಾದಿಗಳ ಸಂಘ, ಜಿಲ್ಲಾ ಆಡಳಿತ, ಜಿಲ್ಲಾ ಪಂಚಾಯತ್, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ, ವಿಕಲಚೇತನರ ಹಾಗೂ ಹಿರಿಯನಾಗರಿಕರ ಸಬಲೀಕರಣ ಇಲಾಖೆ, ಜಿಲ್ಲಾ ಅಂಗವಿಕಲ ಮಕ್ಕಳ ವಸತಿ ಶಾಲೆಗಳ ಸ್ವಯಂ ಸೇವಾ ಸಂಘ, ಜಿಲ್ಲಾ ಅಂಗವಿಕಲರ ಸಂಘ, ಮತ್ತು ಜಿಲ್ಲಾ ಅಂಗವಿಕಲರ ವಿಶೇಷ ಶಾಲಾ ನೌಕರರ ಸಂಘ ಹಾಗೂ ಎಸ್.ಜೆ.ಎಂ ದೈಹಿಕ ಅಂಗವಿಕಲರ ವಸತಿಯಿತ ಪ್ರೌಢಶಾಲೆ ಇವರ ಸಂಯುಕ್ತಾಶ್ರಯದಲ್ಲಿ ಹಮ್ಮಿಕೊಂಡಿದ್ದ ವಿಶ್ವ ವಿಕಲಚೇತನರ ದಿನಾಚರಣೆ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು. 

      ವಿಕಲಚೇತನರಿಗೆ ಸಕರ್ಾರದ ವಿವಿಧ ಯೋಜನೆಗಳಿವೆ. ಯೋಜನೆಗಳ ಸದುಪಯೋಗ ಪಡೆದುಕೊಳ್ಳಲು ಸಕರ್ಾರದ ಸಹಾಯಹಸ್ತವಿದೆ. ಪಾಲಕರು ವಿಕಲಚೇತನ ಮಕ್ಕಳನ್ನು ಬಹಳ ಪ್ರೀತಿ, ಕಾಳಜಿಯಿಂದ ನೋಡಿಕೊಳ್ಳಬೇಕು. ಅವರನ್ನು ಉದಾಸೀನಮಾಡದೇ, ಹೀಯಾಳಿಸದೇ  ಪೋಷಕರು ಕಣ್ಣಲ್ಲಿ ಕಣ್ಣಿಟ್ಟು ಜೋಪಾನವಾಗಿ ನೋಡಿಕೊಳ್ಳಬೇಕು. ಅಂಗವಿಕಲ ಮಗು ಹುಟ್ಟಿದೆ ಎಂದು ಬೇಸರ ಪಟ್ಟುಕೊಳ್ಳದೇ ಮುಂದುವರೆದ ವೈದ್ಯಕೀಯ ವಿಜ್ಞಾನದಲ್ಲಿ ಸರಿಯಾದ ಸಮಯದಲ್ಲಿ ತೋರಿಸಿದರೇ ಮಕ್ಕಳು ಗುಣಮುಖರಾಗಬಹುದು ಎಂದು ಹೇಳಿದರು.

 ಲೈಂಗಿಕ ದೌರ್ಜನ್ಯಗಳು ಹೆಚ್ಚುತ್ತಿದ್ದು ಪರಿಚಯಸ್ಥರಿಂದಲೇ ದೌರ್ಜನ್ಯ ಎಸಗಿ ಮಕ್ಕಳನ್ನು ಸಾಯಿಸುತ್ತಿದ್ದಾರೆ. ಹೀಗಾಗಿ ಮಕ್ಕಳನ್ನು ಬಹಳ ಎಚ್ಚರಿಕೆಯಿಂದ ನೋಡಿಕೊಳ್ಳಬೇಕು. ವಿಕಲಚೇತನರದು ಒಂದು ಜೀವ ಅವರನ್ನು ಅತೀ ಜೋಪಾನವಾಗಿ ನೋಡಿಕೊಳ್ಳಬೇಕು. ಈ ನಿಟ್ಟಿನಲ್ಲಿ ದೌರ್ಜನ್ಯಗಳಿಂದ ಮಕ್ಕಳನ್ನು ಸಂರಕ್ಷಿಸಬೇಕು. ವಿಕಲಚೇತನ ಮಕ್ಕಳಲ್ಲಿ ಸಮಯಪ್ರಜ್ಞೆ, ಶಿಸ್ತು, ಆರೋಗ್ಯ, ಸ್ವಚ್ಛತೆ, ಸತ್ಯನುಡಿ ಉತ್ತಮ ಸಂಸ್ಕಾರವನ್ನು ಪೋಷಕರು ಕಲಿಸಿಕೋಡಬೇಕು. ಪುಟ್ಟರಾಜ ಗವಾಯಿಗಳು ಕಣ್ಣು ಕಾಣದಿದ್ದರೂ ಸಂಗೀತ ಕ್ಷೇತ್ರದಲ್ಲಿ ಸಾಧನೆ ಮಾಡಿ ಇಂದು ಎಲ್ಲರಿಗೂ ಆದರ್ಶಪ್ರಿಯರಾಗಿದ್ದರೆ ಎಂದು ಅವರು ಹೇಳಿದರು. 

ಕಾರ್ಯಕ್ರಮದಲ್ಲಿ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಸದಸ್ಯ ಕಾರ್ಯದಶರ್ಿಗಳು ಹಾಗೂ ಹಿರಿಯ ಸಿವಿಲ್ ನ್ಯಾಯಾಧೀಶರಾದ ಶ್ರೀಮತಿ ಕೆ. ಶ್ರೀವಿದ್ಯಾ ಅವರು ಮಾತನಾಡಿ  ವಿಕಲಚೇತನ ಮಕ್ಕಳ ಸಾಮಥ್ರ್ಯ ಗುರುತಿಸಿ ಅವರ ಆಸಕ್ತಿಗನುಗುಣವಾಗಿ ಸೂಕ್ತ ತರಬೇತಿ ಕೊಡಿಸಬೇಕು. ವಿಕಲಚೇತನರೂ ಸಹ ಉನ್ನತ ಸ್ಥಾನದಲ್ಲಿ ಸಾಧನೆ ಮಾಡಿದ್ದಾರೆ.  ವಿಕಲಚೇತನರಿಗೆ ಕಾನೂನು ಸೇವಾ ಪ್ರಾಧಿಕಾರದಿಂದ ಉಚಿತ ಕಾನೂನು ಸೇವೆಯನ್ನು ನೀಡಲಾಗುತ್ತದೆ. ಅವರು ಸಲ್ಲಿಸುವ ಪ್ರಕರಣದಲ್ಲಿ ಅಜರ್ಿ ಶುಲ್ಕವನ್ನು ತೆಗೆದುಕೊಳ್ಳುವುದಿಲ್ಲ. ಸಲಹೆಗಳನ್ನು ನೀಡಲಾಗುತ್ತದೆ. ವಿಕಲಚೇತನರೂ ಪ್ರಾಧಿಕಾರದ ಸದುಪಯೋಗಪಡೆದುಕೊಳ್ಳಬೇಕು ಎಂದು  ಹೇಳಿದರು. 

ಸಾರ್ವಜನಿಕ ಶಿಕ್ಷಣ ಇಲಾಖೆಯ ಉಪನಿದರ್ೇಶಕ ಅಂದಾನಪ್ಪ ವಡಗೇರಿ ಅಧ್ಯಕ್ಷತೆವಹಿಸಿ ಮಾತನಾಡಿದರು. ಇದೇ ಸಂದರ್ಭದಲ್ಲಿ ಹೊಸಮಠದ ಬಸವ ಶಾಂತಲಿಂಗ ಸ್ವಾಮಿಗಳು ಸಾನಿದ್ಯವಹಿಸಿ ಆಶಿರ್ವಚನ ನೀಡಿದರು. 

ಸಾಮಾಜಿಕ ಸೇವೆ ಮಾಡಿದ ವಿಕಲಚೇತನರಾದ ಮೀನಾಕ್ಷಿ ಕಡಕೋಳ, ವೆಂಕಟೇಶ್ ಮೆಹರವಾಡೆ, ಈರಯ್ಯ ಹಿರೇಮಠ, ರಾಜು ಜವಳಿ, ಸಿದ್ಲಿಂಗಯ್ಯ ಬಡ್ಡಿಯವರ, ಮೌನೇಶ ಬಡಿಗೇರ ಹಾಗೂ 2019-20 ಎಸ್.ಎಸ್.ಎಲ್.ಸಿ ಪರೀಕ್ಷೆಯಲ್ಲಿ ಹೆಚ್ಚು ಅಂಕಗಳಿಸಿದ ವಿದ್ಯಾಥರ್ಿಗಳಾದ ಕರಬಸಯ್ಯ ಗುರುಮಠ, ನೇತ್ರಾವತಿ ನಿಂಬಣ್ಣನವರ, ಪಂಚಾಕ್ಷರಿ ಬೆಳಗಾಲ, ಮಾಬುಬಾಷಾ ಲಾಲಾನವರ ಇವರನ್ನು ಸನ್ಮಾನಿಸಲಾಯಿತು. ವಿಶ್ವ ವಿಕಲಚೇತನರ ದಿನಾಚರಣೆ ಪ್ರಯುಕ್ತ ಹಮ್ಮಿಕೊಂಡಿದ್ದ ಕ್ರೀಡೆ ಮತ್ತು ಸಾಂಸ್ಕೃತಿಕ ಸ್ಪಧರ್ೆಗಳಲ್ಲಿ ವಿಜೇತರಾದವರಿಗೆ ಪ್ರಶಸ್ತಿ  ವಿತರಿಸಲಾಯಿತು. 

ಕಾರ್ಯಕ್ರಮದಲ್ಲಿ ಜಿಲ್ಲಾ ವಿಕಲಚೇತನರ ಹಾಗೂ ಹಿರಿಯ ನಾಗರಿಕರ ಕಲ್ಯಾಣಾಧಿಕಾರಿಗಳಾದ ಮಲ್ಲಿಕಾಜರ್ುನ ಮಠದ, ಶಹರ ಪೊಲೀಸ್ಠಾಣೆಯ ಪಿ.ಐ. ಶ್ರೀಧರ್ಶಾಸ್ತ್ರಿ, ಜಿಲ್ಲಾ ಅಂಗವಿಕಲರ ಸಂಘದ ಅಧ್ಯಕ್ಷ ಪುಟ್ಟಪ್ಪ ಜಲದಿ, ಉಪಾಧ್ಯಕ್ಷ ಮೌನೇಶ ಬಡಿಗೇರ, ಜಿಲ್ಲಾ ಅಂಗವಿಕಲ ಮಕ್ಕಳ ವಸತಿ ಶಾಲೆಗಳ ಸ್ವಯಂಸೇವಾ ಸಂಘದ ಅಧ್ಯಕ್ಷ ಹೆಚ್. ಆರ್. ಶಿವಕುಮಾರ, ಜಿಲ್ಲಾ ಅಂಗವಿಕಲ ವಿಶೇಷ ಶಾಲಾ ನೌಕರರ ಸಂಘದ ಅಧ್ಯಕ್ಷ ಎಂ.ಕೆ. ಪಾಟೀಲ, ಎಸ್.ಐ. ಮಡಿವಾಳರ, ಜಿಲ್ಲಾ ಮಕ್ಕಳ ರಕ್ಷಣಾ ಘಟಕದ ವಿನಯ್ ಗುಡುಗೂರು ಹಾಗೂ ಮತ್ತಿತರರು ಉಪಸ್ಥಿತರಿದ್ದರು.