ವಿಪತ್ತು ನಿರ್ವಹಣಾ ಪ್ರಾಧಿಕಾರದ ಪ್ರಗತಿ ಪರೀಶೀಲನಾ ಸಭೆ

Disaster Management Authority Progress Review Meeting

ವಿಪತ್ತು ನಿರ್ವಹಣಾ ಪ್ರಾಧಿಕಾರದ ಪ್ರಗತಿ ಪರೀಶೀಲನಾ ಸಭೆ  

  ಗದಗ 22: ಜಿಲ್ಲೆಯಲ್ಲಿ ಕುಡಿಯುವ ನೀರು ಸರಬರಾಜು ಸಮರ​‍್ಕ ನಿರ್ವಹಣೆಗೆ ಕ್ರಮ ವಹಿಸಬೇಕೆಂದು ಜಿಲ್ಲಾಧಿಕಾರಿ ಸಿ.ಎನ್‌. ಶ್ರೀಧರ್ ತಿಳಿಸಿದರು. ನಗರದ ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ಜರುಗಿದ ಜಿಲ್ಲಾ ವಿಪತ್ತು ನಿರ್ವಹಣಾ ಪ್ರಾಧಿಕಾರದ ಪ್ರಗತಿ ಪರೀಶೀಲನಾ ಸಭೆ0ು ಅಧ್ಯಕ್ಷತೆ ವಹಿಸಿ ಅವರು  ಮಾತನಾಡಿದರು.ಜಿಲ್ಲೆಯಲ್ಲಿ ಕುಡಿ0ುುವ ನೀರು ಹಾಗೂ ಜಾನುವಾರು ಮೇವಿನ ಸ್ಥಿತಿಗತಿ0ು ಸಮರ​‍್ಕವಾಗಿ 0ಾವುದೇ ತೊಂದರೆ0ಾಗದಂತೆ ನಿರ್ವಹಿಸಬೇಕು. ಕುಡಿ0ುುವ ನೀರು, ಮೇವಿನ ಸ್ಥಿತಿಗತಿ  ಸಂಬಂಧಿಸಿದಂತೆ 0ಾವುದೇ ದೂರುಗಳಿಗೆ ಆಸ್ಪದ ನೀಡದಂತೆ ಕಾ0ುರ್ನಿರ್ವಹಿಸಬೇಕು. ಒಂದು ವೇಳೆ  ನೀರಿನ ಸಮಸ್ಯೆಯು ಉದ್ಭವಿಸಿದರೆ ಮುಂಜಾಗ್ರತಯಾಗಿ  ಖಾಸಗಿ ಬೋರ್‌ವೆಲ್‌ಗಳ ಮೂಲಕ ನೀರು ಸರಬರಾಜು ಮಾಡಲು ಅಂತಹ ಬೋರ್‌ವೆಲ್‌ಗಳ ಸುಸ್ಥಿತಿಯಲ್ಲಿವೆಯೋ ಹೇಗೆ ಎಂಬುದರ ಕುರಿತು  ಪರೀಶೀಲಿಸಬೇಕು.  ಪ್ರಸಕ್ತ  ಪೂರ್ವ ಮುಂಗಾರು ಮಳೆ ಉತ್ತಮವಾಗಿ ಶುರುವಾಗಿದ್ದು ಮುಂಗಾರು ಮಳೆಯೂ ಕೂಡ ಉತ್ತಮವಾಗುವ ನೀರೀಕ್ಷೆಯಿದೆ ಎಂದರು. ರೋಣ ಮತ್ತು ನರಗುಂದ ತಾಲೂಕಿನ ಬಹುಗ್ರಾಮ  ಕುಡಿಯುವ ನೀರಿನ ಕೆರೆಗಳಿಗೆ ನವಿಲುತೀರ್ಥ ಜಲಾಶಯದಿಂದ ನೀರು ಬಿಡುಗಡೆ ಮಾಡುವ ಕುರಿತು ಚರ್ಚೆ ನಡೆಸಿದ ನಂತರ ಮಾತನಾಡಿದ ಜಿಲ್ಲಾಧಿಕಾರಿಗಳು  ಅನಗತ್ಯವಾಗಿ  ನೀರು ಪೋಲಾಗದಂತೆ ಅದನ್ನು ಮರುಬಳಕೆ ಮಾಡುವ ಕುರಿತು ಯೋಚಿಸಿ ನೀರಿನ ಸಂಪನ್ಮೂಲಗಳ ಸಮರ​‍್ಕ ಬಳಕೆಯಾಗುವಂತೆ  ಕ್ರಮ ವಹಿಸಬೇಕು  ಎಂದು  ಜಿಲ್ಲಾಧಿಕಾರಿ ಸಿ.ಎನ್‌.ಶ್ರೀಧರ್  ನಿರ್ದೇಶನ ನೀಡಿದರು.ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಭರತ್ ಎಸ್ ಅವರು ಮಾತನಾಡಿ ಎಲ್ಲ ನೀರಿನ ಮೂಲಗಳಲ್ಲಿ ನೀರು ಕುಡಿಯಲು ಯೋಗ್ಯ ಎಂಬುದರ ಕುರಿತು ಪರೀಕ್ಷೆ ನಡೆಸಬೇಕು.  ಬೋರ್‌ವೆಲ್‌ದ  ಸುತ್ತಮುತ್ತ ಕಲುಷಿತ ಅಂಶಗಳು ಇವೆಯೋ ಇಲ್ಲವೋ ಎಂಬುದರ ಕುರಿತು ಪರೀಶೀಲನೆ ನಡೆಸಿ ಖಚಿತಪಡಿಸಿಕೊಳ್ಳಬೇಕು.  ವಾಟರ್ ಹೆಡ್ ಟ್ಯಾಂಕ್ ಸ್ವಚ್ಛತೆಗೆ ನಿಗಾ ವಹಿಸಬೇಕೆಂದು ಅಧಿಕಾರಿಗಳಿಗೆ ಕಟ್ಟುನಿಟ್ಟಿನ ಸೂಚನೆ ನೀಡಿದರು. ಪಶುಪಾಲನಾ ಮತ್ತು ಪಶು ವೈದ್ಯಕೀಯ ಸೇವಾ ಇಲಾಖೆಯ ಉಪನಿರ್ದೇಶಕರಾದ  ಡಾ.ಎಚ್‌.ನಾಗರಾಜ ಅವರು ಮಾತನಾಡಿ ಜಿಲ್ಲೆಯಲ್ಲಿ ಜಾನುವಾರುಗಳಿಗೆ ಸಾಕಷ್ಟು ಮೇವಿನ ದಾಸ್ತಾನಿದೆ. ಯಾವುದೇ ಕೊರತೆಯಿರುವುದಿಲ್ಲ ಎಂದು ಸಭೆಗೆ ತಿಳಿಸಿದರು. ಸಭೆಯಲ್ಲಿ ಅಪರ ಜಿಲ್ಲಾಧಿಕಾರಿ ಶ್ರೀಮತಿ ಅನ್ನಪೂರ್ಣ ಎಂ, ಉಪವಿಭಾಗಾಧಿಕಾರಿ ಗಂಗಪ್ಪ ಎಂ, ನಗರಾಭಿವೃದ್ಧಿ ಕೋಶದ ಯೋಜನಾ ನಿರ್ದೇಶಕ ಬಸವರಾಜ ಕೊಟ್ಟೂರ, ತಾ.ಪಂ. ಕಾರ್ಯನಿರ್ವಹಣಾಧಿಕಾರಿಗಳು, ತಹಶೀಲ್ದಾರರುಗಳು .  ಸೇರಿದಂತೆ ವಿವಿಧ ಇಲಾಖೆ0ು ಅಧಿಕಾರಿಗಳು ಹಾಜರಿದ್ದರು