ಬಸವೇಶ್ವರ ಜಯಂತಿ ನಿಮಿತ್ತವಾಗಿ ಮಕ್ಕಳಿಗೆ ಹಾಗೂ ಸಾರ್ವಜನಿಕರಿಗೆ ರಾಗಿ ಅಂಬಲಿ ವಿತರಣೆ

Distribution of Ragi Ambali to children and the general public on the occasion of Basaveshwara Jayan

ಬಸವೇಶ್ವರ ಜಯಂತಿ ನಿಮಿತ್ತವಾಗಿ ಮಕ್ಕಳಿಗೆ ಹಾಗೂ ಸಾರ್ವಜನಿಕರಿಗೆ ರಾಗಿ ಅಂಬಲಿ ವಿತರಣೆ  

ಹಾವೇರಿ 01 : ನಗರದ ಶ್ರೀ ಹೊಸಮಠದಲ್ಲಿ   ಬಸವೇಶ್ವರ ಜಯಂತಿ ನಿಮಿತ್ತವಾಗಿ ಮಕ್ಕಳಿಗೆ ಹಾಗೂ ಸಾರ್ವಜನಿಕರಿಗೆ ರಾಗಿ ಅಂಬಲಿ ವಿತರಣೆ ಮಾಡಲಾಯಿತು. ಶ್ರೀಮಠದ ಶ್ರೀಗಳಾದ   ಬಸವಶಾಂತಲಿಂಗ ಸ್ವಾಮಿಗಳು ಮಾತನಾಡಿ ಬಸವಣ್ಣನವರು ಜೀವನದ ನಿಜವನ್ನು ಅರಿತ ಮಹಾಂತರಾಗಿದ್ದರು. ನಡೆ-ನುಡಿ ಯಲ್ಲಿ ಪರಿಶುದ್ಧತೆಯ ಹೊಂದಿದ ಮನಸ್ಸು ಅವರದು.ವಚನ ಶಾಸ್ತ್ರ ಸಂಪತ್ತು ಕನ್ನಡದಲ್ಲಿ ದೊರೆತಿರುವುದು ಕನ್ನಡಿಗರಿಗೆಲ್ಲರ ಭಾಗ್ಯವಾಗಿದೆ. ವಚನಗಳು ಸರಳ ಸುಂದರ ಭಾಷೆಯಲ್ಲಿವೆ.ಭಾಷೆ ಸರಳವಿದ್ದರೂ ಭಾವ ಭವ್ಯವಾಗಿದೆ.ಈ ಸಂಪತ್ತನ್ನು ಆಳವಾಗಿ ವಿವೇಚಿಸಿ ಅದನ್ನು ವಚನ ಶಾಸ್ತ್ರ ರಹಸ್ಯವೆಂದು ಕರೆದಿದ್ದಾರೆ. ವಚನಗಳಿಂದ ಎಲ್ಲರ ಲೌಕಿಕ ಬದುಕನ್ನು ಆಧ್ಯಾತ್ಮಿಕರಿಸಿ ಜೀವಕ್ಕೆ ಹೊಸ ಚೈತನ್ಯವನ್ನು ತುಂಬುವಂತಾಗಿದೆ. ಅವರ ಬದುಕಿನ ಮೌಲ್ಯಗಳನ್ನು ಪಾಲಿಸುವ ಕೆಲಸ ಮಾಡೋಣ ಎಂದು ಶ್ರೀಗಳು ತಿಳಿಸಿದರು. ಈ ಸಂದರ್ಭದಲ್ಲಿ ಶ್ರೀ ಹೊಸಮಠದ ಸೇವಾ ಸಮಿತಿ ಪದಾಧಿಕಾರಿಗಳು, ಹಾಗೂ ಶ್ರೀ ಮಠದ ಭಕ್ತರು ಉಪಸ್ಥಿತರಿದ್ದರು.