ಜಿಲ್ಲಾ ಸದಸ್ಯತ್ವ ಅಭಿಯಾನ ಕಾರ್ಯಕ್ರಮ

ಹಾವೇರಿ : ಜಿಲ್ಲೆಯ ಹಿರೇಕೆರೂರ ತಾಲೂಕಿನ ಸುಕ್ಷೇತ್ರದ ಶಿವಾಲಿ ಬಸವೇಶ್ವರ ಮೂಕಪ್ಪ ಸ್ವಾಮಿಗಳ ಗದ್ದುಗೆ ಸಾತೇನಹಳ್ಳಿಯಲ್ಲಿ ಉತ್ತರ ಕನರ್ಾಟಕ ರೈತ ಸಂಘದ ಜಿಲ್ಲಾ ಸದಸ್ಯತ್ವ ಅಭಿಯಾನ ಕಾರ್ಯಕ್ರಮ ಜೂನ್ 10 ಸೋಮವಾರ ಬೆಳಿಗ್ಗೆ 10-30 ಘಂಟೆಗೆ  ಹಮ್ಮಿಕೊಳ್ಳಲಾಗಿದೆ. ಉ.ಕ ರೈತ ಸಂಘದ ರಾಜಾಧ್ಯಕ್ಷರಾದ ಬಸವರಾಜ ಕರಿಗಾರ ಮುಖ್ಯ ಅಥಿತಿಗಳಾಗಿ ಭಾಗವಹಿಸಲಿದ್ದು, ಜಿಲ್ಲಾಧ್ಯಕ್ಷ ಹನುಮಂತಪ್ಪ ದೀವಿಗಿಹಳ್ಳಿ ಅಧ್ಯಕ್ಷತೆ ವಹಿಸುವರು.ಶಿವಾಲಿ ಬಸವೇಶ್ವರ ಸಮಿತಿಯ ಅಧ್ಯಕ್ಷರು ಹಾಗೂ ಪದಾಧಿಕಾರಿಗಳು.ಉ.ಕ ರೈತ ಸಂಘದ ಮುಖಂಡರಾದ ರಜಶೇಖರ ದೂದಿಹಳ್ಳಿ.ಚಂದ್ರಶೇಖರ ಉಪ್ಪಿನ.ಫಕ್ಕಿರಗೌಡ ಗಾಜೀಗೌಡ್ರ.ಹೊನ್ನಪ್ಪ ಸಣ್ಣಬಾಕರ್ಿ.ಜಗದೀಶ ಕುಸಗೂರ.ರೇಣುಕಾಸ್ವಾಮಿ ಹಿರೇಮಠ ಸೇರಿದಂತೆ ರಾಜ್ಯ,ಜಿಲ್ಲಾ ಹಾಗೂ ತಾಲೂಕಾ ಪದಾಧಿಕಾರಿಗಳು ಆಗಮಿಸಲಿದ್ದಾರೆ. ಈ ಸದಸ್ಯತ್ವ ಅಭಿಯಾನ ಕಾರ್ಯಕ್ರಮಕ್ಕೆ ಹೆಚ್ಚಿನ ಸಂಖ್ಯೆಯಲ್ಲಿ ಜಿಲ್ಲೆಯ ರೈತರು, ರೈತ ಮಹಿಳೆಯರು ಭಾಗವಹಿಸಿ ಕಾರ್ಯಕ್ರಮವನ್ನು ಯಶಸ್ವಿಗೊಳಿಸಬೇಕೆಂದು ಉ.ಕ ರೈತ ಸಂಘದ ಜಿಲ್ಲಾ ಪ್ರಧಾನ ಕಾರ್ಯದಶರ್ಿ ಫಕ್ಕಿರೇಶ ಡಿ ಕಾಳಿ ಪ್ರಕಟಣೆ ಕೋರಿದ್ದಾರೆ.