ಡಾ. ಬಿ. ಆರ್‌. ಅಂಬೇಡ್ಕರ್ ಜಯಂತಿ ಹಾಗೂ ಪಕ್ಷಿಗಳನ್ನು ರಕ್ಷಿಸಿ ಚಟುವಟಿಕೆ

Dr. B. R. Ambedkar Jayanti and bird protection activities

ಡಾ. ಬಿ. ಆರ್‌. ಅಂಬೇಡ್ಕರ್ ಜಯಂತಿ ಹಾಗೂ ಪಕ್ಷಿಗಳನ್ನು ರಕ್ಷಿಸಿ ಚಟುವಟಿಕೆ  

ಗದಗ 14 :ನಗರದ ಪ್ರತಿಷ್ಠತ ಕೆ. ಎಲ್‌. ಇ. ಸಂಸ್ಥೆಯ ಕಲಾ ಹಾಗೂ ವಾಣಿಜ್ಯ ಮಹಾವಿದ್ಯಲಯದ ಎನ್‌. ಎಸ್‌. ಎಸ್‌. ಘಟಕದ ವತಿಯಿಂದ ಡಾ. ಬಿ. ಆರ್‌. ಅಂಬೇಡ್ಕರ್ ಜಯಂತಿಯ ಪ್ರಯುಕ್ತವಾಗಿ ಡಾ. ಬಿ. ಆರ್‌. ಅಂಬೇಡ್ಕರ್ ಜಯಂತಿ ಹಾಗೂ ಪಕ್ಷಿಗಳನ್ನು ರಕ್ಷಿಗಳನ್ನು ಚಟುವಟಿಕೆಯನ್ನು ಆಯೋಜಿಸಲಾಗಿತ್ತು. ಮೊದಲಿಗೆ ಡಾ. ಬಿ. ಆರ್‌. ಅಂಬೇಡ್ಕರ್ ಅವರ ಭಾವ ಚಿತ್ರಕ್ಕೆ ಗೌರವಯುತವಾಗಿ ಪೂಜೆ ಸಲ್ಲಿಸಿ ನಂತರ ಎನ್‌. ಎಸ್‌. ಎಸ್‌. ಸ್ವಯಂಸೇವಕರು ಈ ಬೇಸಿಗೆ ದಿನಗಳಲ್ಲಿ ಪಕ್ಷಿಗಳಿಗೆ ಅವಶ್ಯಕವಾಗಿರುವ ಕಾಳುಗಳು ಮತ್ತು ನೀರನ್ನು ಹಾಕಲು ವ್ಯವಸ್ಥೆ ಮಾಡಲಾಯಿತು ಮತ್ತು ಪ್ರತಿದಿನ ಅವುಗಳನ್ನು ಗಮನಿಸಲು ಎನ್‌. ಎಸ್‌. ಎಸ್‌. ಸ್ವಯಂಸೇವಕರಿಗೆ ಸೂಚಿಸಲಾಯಿತು.       

ಈ ಚಟುವಟಿಕೆಯಲ್ಲಿ ಮಹಾವಿದ್ಯಾಲುದ ಪ್ರಾಚಾರ್ಯರಾದ ಶ್ರೀಮತಿ. ಡಾ. ಎ. ಕೆ. ಮಠ, ಎನ್‌. ಎಸ್‌. ಎಸ್‌. ಘಟಕದ ಕಾರ್ಯಕ್ರಮಾಧಿಕಾರಿಗಳಾದ ಪ್ರೋ. ವಾಗೀಶ ಗು.ರೇಶ್ಮಿ, ಎನ್‌. ಎಸ್‌. ಎಸ್‌. ಘಟಕದ ನಾಯಕರಾದ ಕುಮಾರ. ಪವನಕುಮಾರ ಕುಲಕರ್ಣಿ ಹಾಗೂ ನಾಯಕಿಯರಾದ ಕುಮಾರಿ. ಸಾಕ್ಷಿ ಹೊಸಮಠ, ಎನ್‌. ಎಸ್‌. ಎಸ್‌. ಘಟಕದ 2 ನೇ ತಂಡದ ನಾಯಕ ಕುಮಾರ ಪ್ರಜ್ವಲ್ ಬಳ್ಳಾರಿ, ನಾಯಕಿ ಕುಮಾರಿ ಪೂಜಾ ಮರಿಬಸಣ್ಣನವರ, 3 ನೇ ತಂಡದ ನಾಯಕ ಕುಮಾರ. ಮಂಜುನಾಥ ಗಾಣಿಗೇರ್, ನಾಯಕಿ ಮೇಘಾ ಮುದ್ಧಿ, ಎನ್‌. ಎಸ್‌. ಎಸ್‌. ಘಟಕದ ಎಲ್ಲ ಸ್ವಯಂಸೇವಕರು ಹಾಗೂ ಮಹಾವಿದ್ಯಾಲಯದ ಎಲ್ಲ ಭೋಧಕ ಮತ್ತು ಭೋಧಕೇತರ ಸಿಬ್ಭಂದಿಯವರು ಉಪಸ್ಥಿತರಿದ್ದರು.