ಮುಂಡಗೋಡ 15: ಪಟ್ಟಣದ ಗಾಂಧಿನಗರದಲ್ಲಿ ಸಂವಿಧಾನ ಶಿಲ್ಪಿ ಡಾಽಽ ಬಿ ಆರ್ ಅಂಬೇಡ್ಕರ್ 134ನೇ ಹಾಗೂ ಡಾಽಽ ಬಾಬು ಜಗಜೀವನರಾವ್ 118 ನೇ ರವರ ಜನ್ಮ ದಿನಾಚರಣೆಯನ್ನು ಭಕ್ತಿ ಭಾವದಿಂದ ಆಚರಿಸಲಾಯಿತು.
ಇಲ್ಲಿಯ ಗಾಂಧಿನಗರ ಹಾಗೂ ಅಂಬೇಡ್ಕರ ಓಣಿಯ ಹತ್ತಿರ ಇರುವ ಡಾಽಽ ಬಿ ಆರ್ ಅಂಬೇಡ್ಕರ್ ಪುತ್ಥಳಿಗೆ ಮಾಲಾರೆ್ಣ ಮಾಡಿ ಪೂಜೆ ಸಲ್ಲಿಸಿ ನಂತರ ಪಲಾವ್ ಹಾಗೂ ಸಿಹಿಯನ್ನು ಹಂಚಿ ಸಂವಿಧಾನ ಶಿಲ್ಪಿ ಡಾಕ್ಟರ್ ಅಂಬೇಡ್ಕರ್ ಜಯಂತಿಯನ್ನು ಸಂಭ್ರಮದಿಂದ ಆಚರಿಸಿದರು ಹಾಗೂ ಪಟ್ಟಣದಲ್ಲಿ ಜೈ ಭೀಮ್ ಸಂಘಟನೆಯಿಂದ ಪಟ್ಟಣದ ಪ್ರಮುಖ ಬೀದಿಗಳಲ್ಲಿ ಜೈಭೀಮ್ ಜೈಭೀಮ್ ಅಂತ ಘೋಷಣೆ ಕೂಗುತ್ತ ಬೈಕ್ ರ್ಯಾಲಿ ನಡೆಸಿದರು.
ಈ ವೇಳೆಯಲ್ಲಿ ದಲಿತರ ಸಂಘಟನೆದವರು ಹಾಗೂ ಸಾರ್ವಜನಿಕರು ಉಪಸ್ಥಿತರಿದ್ದರು.