ಕೊಪ್ಪಳ 02: ಅಖಿಲ ಕರ್ನಾಟಕ ಬ್ರಾಹ್ಮಣ ಮಹಾಸಭಾ ನೂತನ ರಾಜ್ಯ ಉಪಾಧ್ಯಕ್ಷರಾಗಿ ಕೊಪ್ಪಳದ ಈವ9ರು ನೇಮಕಗೊಂಡಿದ್ದು ಬ್ರಾಹ್ಮಣ ಸಮಾಜದ ಹಿರಿಯರಾದ ಡಾ, ಕೆಜಿ ಕುಲಕರ್ಣಿ ಮತ್ತು ಪ್ರಾಣೇಶ್ ಮಾದಿನೂರ್ ನೇಮಕಗೊಂಡಿದ್ದಾರೆ ಮಹಾಸಭಾ ರಾಜ್ಯಾಧ್ಯಕ್ಷರಾದ ಎಸ್ ರಘುನಾಥ್ ರವರು ನೇಮಕ ಮಾಡಿ ಆದೇಶ ಹೊರಡಿಸಿದ್ದಾರೆ
ಒಂದು ವರ್ಷದ ಅವಧಿಗೆ ಅಥವಾ ಮುಂದಿನ ಆದೇಶದ ತನಕ ಇವರ ಅಧಿಕಾರ ಅವಧಿ ಇದ್ದು ಸದ್ರಿ ಇಬ್ಬರು ಸಂಘಟನೆಯಲ್ಲಿ ರಾಜ್ಯ ಉಪಾಧ್ಯಕ್ಷರಾಗಿ ಕಾರ್ಯ ನಿರ್ವಹಿಸಲಿದ್ದಾರೆ, ಇತ್ತೀಚಿಗೆ ನಡೆದ ಮಹಾಸಭಾದ ಜಿಲ್ಲಾ ಪ್ರತಿನಿಧಿ ಸ್ಥಾನದ ಚುನಾವಣೆಯಲ್ಲಿ ಪ್ರಾಣೇಶ್ ಮಾದಿನೂರ್ ರವರು ರಘುನಾಥ್ ರವರ ಬಣ ದಿಂದ ಸ್ಪರ್ಧಿಸಿದ್ದರು ಅವರು ಸಂಘಟನೆಯಲ್ಲಿ ಸೇವೆ ಸಲ್ಲಿಸಲಿ ಎಂದು ಅವರನ್ನು ನೇಮಕ ಮಾಡಿಕೊಳ್ಳಲಾಗಿದೆ ಅಲ್ಲದೆ ಸಮಾಜದ ಹಿರಿಯರಾಗಿರುವ ಡಾ, ಕೆಜಿ ಕುಲಕರ್ಣಿ ಯವರ ಸೇವೆ ಸಮಾಜಕ್ಕೆ ಅವಶ್ಯಕತೆ ಇದೆ ಎಂದು ಅವರನ್ನು ಸಹ ಮಹಾಸಭಾ ರಾಜ್ಯ ಉಪಾಧ್ಯಕ್ಷರಾಗಿ ನೇಮಕ ಮಾಡಿ ಕೊಳ್ಳಲಾಗಿದೆ, ಜಿಲ್ಲೆಯ ಇಬ್ಬರು ಸಮಾಜದ ಮಹಾಸಭಾ ರಾಜ್ಯ ಉಪಾಧ್ಯಕ್ಷರಾಗಿ ನೇಮಕಗೊಂಡಿರುವುದಕ್ಕೆ ಸಮಾಜದ ಕೊಪ್ಪಳ ಜಿಲ್ಲೆಯ ಸಂಘಟನೆಗಳು ಹರ್ಷ ವ್ಯಕ್ತಪಡಿಸಿ ಅಭಿನಂದನೆಸಿದ್ದಾರೆ.