ಮುಧೋಳ ಕಂಠಿ ಕಾಲೇಜಿಗೆ ಡಾ.ಪ್ರಕಾಶ ಹೊಸಮನಿ ಭೇಟಿ

Dr. Prakash Hosamani visits Mudhol Kanthi College

ಮುಧೋಳ 24: ಕಾಲೇಜು ಶಿಕ್ಷಣ ಇಲಾಖೆಯ ಧಾರವಾಡ ಪ್ರಾದೇಶಿಕ ಕಚೇರಿಯ ಜಂಟಿ ನಿರ್ದೇಶಕ ಡಾ.ಪ್ರಕಾಶ ಹೊಸಮನಿ ಅವರು ಇತ್ತೀಚೆಗೆ ಬಾಗಲಕೋಟ ಬಿವ್ಹಿವ್ಹಿ ಸಂಘದ ಮುಧೋಳದ ಶ್ರೀ ಎಸ್‌.ಆರ್‌.ಕಂಠಿ ಮಹಾವಿದ್ಯಾಲಯಕ್ಕೆ ಭೇಟಿ ನೀಡಿ ಕಾಲೇಜುಗಳ ದಾಖಲೆಗಳನ್ನು ಪರೀಶೀಲಿಸಿದ ಬಳಿಕ ವಿವಿಧ ವಿಷಯಗಳ ವಿಭಾಗಗಳಿಗೆ ತೆರಳಿ ಪ್ರಾಧ್ಯಾಪಕರ ಕಾರ್ಯವೈಖರಿಯನ್ನು ನೋಡಿ ಮಹಾವಿದ್ಯಾಲಯಕ್ಕೆ ನ್ಯಾಕ್ ಮೌಲ್ಯಮಾಪನದಲ್ಲಿ ಎ ಗ್ರೇಡ್ ಬರುವಲ್ಲಿ ಪ್ರಾಧ್ಯಾಪಕರ ಪಾತ್ರ ಬಹುಮುಖ್ಯವಾಗಿದೆ ಎಂದು ಹೇಳಿ ಇದೇ ರೀತಿ ತಾವು ವಿದ್ಯಾರ್ಥಿಗಳಿಗೆ ಇನ್ನಷ್ಟೂ ಗುಣಮಟ್ಟದ ಶಿಕ್ಷಣ ನೀಡಿದ್ದಲ್ಲಿ ನಿಮ್ಮ ಮಹಾವಿದ್ಯಾಲಯವು ಅತ್ಯುತ್ತಮ ಮಹಾವಿದ್ಯಾಲಯಗಳಲ್ಲಿ ಇದು ಒಂದಾಗಲಿದೆ ಎಂದರು. 

ಕಾಲೇಜಿನ ಸುಸಜ್ಜಿತ ಗ್ರಂಥಾಲಯ, ಒಳಾಂಗಣ ಮತ್ತು ಹೊರಾಂಗಣ ಕ್ರೀಡಾಂಗಣ ಹಾಗೂ ಸುಂದರವಾದ ಗಾರ್ಡನ್ ನೋಡಿ ಅವರು ಅತೀ ಸಂತಸ ವ್ಯಕ್ತಪಡಿಸಿದರು. ಕಾಲೇಜಿನ ಪತ್ರಿಕೋಧ್ಯಮ ಹಾಗೂ ಸಮೂಹ ಸಂವಹನ ವಿಭಾಗದ ವಿದ್ಯಾರ್ಥಿಗಳಿಗೆ ಪ್ರಾಯೋಗಿಕ ತರಬೇತಿ ನೀಡಲು ಆರಂಭಿಸಿರುವ ಕಂಪ್ಯೂಟರ್ ಲ್ಯಾಬ್ ಹಾಗೂ ಸುಸಜ್ಜಿತ ಸ್ಟುಡಿಯೋ ಮಾಡಿರುವದನ್ನು ನೋಡಿ ಹರ್ಷವ್ಯಕ್ತಪಡಿಸಿ, ನಿಮ್ಮ ವಿಭಾಗದ ವಿದ್ಯಾರ್ಥಿಗಳು ಮುಂಬರುವ ದಿನಮಾನದಲ್ಲಿ ಶ್ರೇಷ್ಠ, ಗುಣಮಟ್ಟದ ಪತ್ರಕರ್ತರಾಗಿ ಹೊರಹೊಮ್ಮಿಲಿ, ಸಮಾಜದ ಸ್ವಾಸ್ಥ-್ಯವನ್ನು ಕಾಪಾಡುವಲ್ಲಿ ಅವರು ಪ್ರಮುಖ ಸ್ಥಾನವಹಿಸಿಲಿ ಎಂದು ಶುಭ ಹಾರೈಸಿದರು. 

ಪ್ರಾಚಾರ್ಯ ಪ್ರೊ.ಎಮ್‌.ವ್ಹಿ.ಜಿಗಬಡ್ಡಿ, ಐಕ್ಯೂಎಸಿ ಸಂಯೋಜಕ ಪ್ರೊ.ಎ.ಆರ್‌.ಕಡೂರ, ಬೋಧಕ ಸಿಬ್ಬಂದಿ ಕಾರ್ಯದರ್ಶಿ ಡಾ.ಸುಭಾಷ್ ಸಬರದ ಹಾಗೂ ಇತಿಹಾಸ ವಿಭಾಗದ ಮುಖ್ಯಸ್ಥ ಡಾ.ಎಮ್‌.ಆರ್‌.ಜರಕುಂಟಿ, ಸಂಖ್ಯಾಶಾಸ್ತ್ರ ವಿಭಾಗದ ಮುಖ್ಯಸ್ಥೆ ಪ್ರೋ.ಎಸ್‌.ಎಸ್‌.ಬಿರಾದಾರ, ಪತ್ರಿಕೋಧ್ಯಮ ಹಾಗೂ ಸಮೂಹ ಸಂವಹನ ವಿಭಾಗದ ಮುಖ್ಯಸ್ಥ ಪ್ರೋ.ವಿಶ್ವನಾಥ ಮುನವಳ್ಳಿ ಹಾಗೂ ವಿವಿಧ ವಿಭಾಗಗಳ ಮುಖ್ಯಸ್ಥರು, ಉಪನ್ಯಾಸಕರು, ಬೋಧಕೇತರ ಸಿಬ್ಬಂದಿಯವರು ಇದ್ದರು.