ಗಂಗಾಪುರದ ದುರ್ಗಮ್ಮದೇವಿ ಜಾತ್ರೋತ್ಸವ
ರಾಣೇಬೆನ್ನೂರು 26 : ತಾಲೂಕಿನ ಸುಕ್ಷೇತ್ರ ಗಂಗಾಪುರ ಗ್ರಾಮದ ಪರಮಕಲ್ಯಾಣಿ ಶ್ರೀ ದುರ್ಗಮ್ಮದೇವಿ 38ನೇ ವಾರ್ಷಿಕ ಜಾತ್ರೋತ್ಸವ ಮತ್ತು ಸರ್ವಧರ್ಮ ಸಾಮೂಹಿಕ ವಿವಾಹ ಮಹೋತ್ಸವ ಧಾರ್ಮಿಕ ಕಾರ್ಯಕ್ರಮವು ಏಪ್ರಿಲ್ 29,2025 ರಿಂದ ಆರಂಭವಾಗಲಿದೆ ಎಂದು ಶ್ರೀ ದುರ್ಗಮ್ಮ ದೇವಿ ಟ್ರಸ್ಟ್ ಕಮಿಟಿ ಹಾಗೂ ಭಕ್ತ ಮಂಡಳಿಯು ತನ್ನ ಪ್ರಕಟಣೆಯಲ್ಲಿ ತಿಳಿಸಿದೆ. 29 ಮಂಗಳವಾರ ಮುಂಜಾನೆ ಶ್ರೀ ದೇವಿಗೆ ಅಭಿಷೇಕ, ಉಡಿ ತುಂಬ ಕಾರ್ಯಕ್ರಮ, ಗ್ರಾಮದಲ್ಲಿ ಶ್ರೀದೇವಿಯ ಭವ್ಯ ಉತ್ಸವ ಮೂರ್ತಿಯ ಮೆರವಣಿಗೆ. ಬುಧವಾರ ಮುಂಜಾನೆ ಪಡ್ಲಿಗಿ ತುಂಬಿಸುವುದು 12:30ಕ್ಕೆ ಸಾಮೂಹಿಕ ವಿವಾಹ ಮಂಗ ಲ ಕಾರ್ಯ ಜರುಗುವುದು. ಮೇ 1,ರಂದು ಮುಂಜಾನೆ ಶ್ರೀದೇವಿಯ ವಿವಿಧ ಧಾರ್ಮಿಕ ಕಾರ್ಯಕ್ರಮಗಳೊಂದಿಗೆ ಜಾತ್ರಾ ಮಹೋತ್ಸವ ಸಾಂಗಮಂಗಲಗೊಳ್ಳುವುದು. ಭಕ್ತಾದಿಗಳು ಜಾತ್ರೋತ್ಸವದಲ್ಲಿ ಭಾಗವಹಿಸಿ ಶ್ರೀ ದೇವಿಯ ಕೃಪೆಗೆ ಪಾತ್ರರಾಗುವಂತೆ, ಕಮಿಟಿಯು ತಿಳಿಸಿದ.