ಅಖಿಲ ಕರ್ನಾಟಕ ಬ್ರಾಹ್ಮಣ ಮಹಾಸಭಾದ ಪ್ರತಿನಿಧಿಗಳ ಆಯ್ಕೆಯ ಚುನಾವಣೆ

Election of representatives of the All Karnataka Brahmin Mahasabha

ಅಖಿಲ ಕರ್ನಾಟಕ ಬ್ರಾಹ್ಮಣ ಮಹಾಸಭಾದ ಪ್ರತಿನಿಧಿಗಳ ಆಯ್ಕೆಯ ಚುನಾವಣೆ  

ರಾಣಿಬೆನ್ನೂರ  12:  ಅಖಿಲ ಕರ್ನಾಟಕ ಬ್ರಾಹ್ಮಣ ಮಹಾಸಭಾದ ಪ್ರತಿನಿಧಿಗಳ ಆಯ್ಕೆಯ ಚುನಾವಣೆ ಎ. ರಂದು ನಡೆಯಲಿದ್ದು ಹಾವೇರಿ ಜಿಲ್ಲೆಯ ಪ್ರತಿನಿಧಿ ಸ್ಥಾನಕ್ಕೆ ಸಮಾಜ ಸೇವಕ ಹಾಗು ಸಮಾಜದ ಕಳಕಳಿಯುಳ್ಳ ಕ್ಫಿ. ಸಂಜಯ ಎಂ ನಾಯಕ ಸ್ಪರ್ಧಿಸಿದ್ದು ಅವರ ಗೆಲುವಿಗೆ ಸಮಾಜ ಬಾಂಧವರು ಶ್ರಮಿಸಬೇಕು ಎಂದು ದೇವರಗುಡ್ಡ   ಮಾಲತೇಶ ಸ್ವಾಮಿ ದೇವಸ್ಥಾದ ಪ್ರಧಾನ ಅರ್ಚಕ ಸಂತೋಷ ಪೂಜಾರ ಮನವಿ ಮಾಡಿದರು.  

 ಶುಕ್ರವಾರ ನಗರದ ಅನಂತ ಸಭಾಭವನದಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಡಾಽ ಸಂಜಯ ಎಂ ನಾಯಕ ಅವರು   ಮಾತಾ ಚಾರಿಟಬಲ್ ಟ್ರಸ್ಟ್‌ ಸಂಸ್ಥಾಪಕ ಅಧ್ಯಕ್ಷರಾಗಿ, ಸಮುದಾಯ ಆರೋಗ್ಯ ಹಾಗೂ ಕುಟುಂಬಕಲ್ಯಾಳ ಕೇಂದ್ರದ ಅಧ್ಯಕ್ಷರಾಗಿ, ಕಾಮದೇನು ಗೋಮಾತಾ ಚಾರಿಟಬಲ್ ಟ್ರಸ್ಟ್‌ ಅಧ್ಯಕ್ಷರಾಗಿ, ಕರ್ನಾಟಕ ಸರ್ಕಾದ ಗೋಮಾತಾ ಸಹಕಾರಸಂಘದ ನಿದೇರ್ಶಕರಾಗಿ, ರಾಣಿಬೆನ್ನೂರ ಲಯನ್ಸ್‌ ಸಂಸ್ಥೆಯ ಎಂ.ಜಿ.ಎಫ್ ಸದಸ್ಯರಾಗಿ ಹಲವಾರು ಸಮಾಜ ಸೇವೆ ಸಲ್ಲಿಸಿರುವ ಇವರ ಸೇವೆ ಬ್ರಾಹ್ಮಣ ಸಮಾಜಕ್ಕೆ ಅಗತ್ಯವಿದ್ದು ಅವರಿಗೆ ಮತ ನೀಡಿ ಜಯಶಾಲಿ ಮಾಡಬೇಕು ಎಂದು ಮತದಾರರಲ್ಲಿ ವಿನಂತಿಸಿದರು. 

  ಅಭ್ಯರ್ಥಿ ಡಾಽ ಸಂಜಯ ನಾಯಕ ಮಾತನಾಡಿ, ಬ್ರಾಹ್ಮಣ ಸಮಾಜ ಬಹಳ ಕಡಿಮೆ ಜನಸಂಖ್ಯೆ ಇದ್ದು. ಅದರಲ್ಲೂ ಗ್ರಾಮೀಣ ಭಾಗದಲ್ಲಿ ಬಹಳ ವಿರಳವಾಗಿದೆ. ಅಲ್ಲಿ ಇವರ ಸಮಸ್ಯೆಗಳ ಹೆಚ್ಚಾಗಿವೆ. ಅವರ ಸಮಸ್ಯೆಗಳಿಗೆ ಸ್ಪಂದಿಸಲಾಗುವುದು. ಜಿಲ್ಲೆಯಲ್ಲಿ ಸುಮಾರು 40 ಸಾವಿರ ಜನಸಂಖ್ಯೆಇದ್ದು ಅದರಲ್ಲಿ ಕೇವಲ 15 ನೂರು ಮತದಾರು ಮಾತ್ರ ಇದ್ದಾರೆ ಇದು ನೋವಿನ ಸಂಗತಿಯಾಗಿದೆ ಎಂದರು.  ನಾನು ಈ ಚುನಾವಣೆಯಲ್ಲಿ ಆಯ್ಕೆಯಾದರೆ ಜಿಲ್ಲೆಯಾಧ್ಯಂತ ಸಂಚರಿಸಿ ಅಭಿಯಾನದ ಮೂಲಕ ಪ್ರತಿ ತಾಲುಕಿನಲ್ಲಿ 25 ಜನರನ್ನು ನನ್ನ ಸ್ವಂತ ಖರ್ಚಿನಲ್ಲಿ 500 ರೂ ವಂತಕೆ ಹಣ ತುಂಬಿ  ಮತದಾರ ಪಟ್ಟಿಯಲ್ಲಿ ಸೇರಿಸಲಾಗುದು. ಜೊತೆಗೆ ಗ್ರಾಮೀಣ ಭಾಗದಲ್ಲಿ ಶವಸಂಸ್ಕಾರಕ್ಕೆ ಬಹಳಷ್ಟು ಅನಾನುಕೂಲವಿದ್ದು ಇದರ ಸಮಸ್ಯೆಯನ್ನು ಗೆಲುವಾಗಿ ಸೋಲಾಗಿ ಶ್ರಮಿಸುತ್ತೇನೆ. ಇದು ಸಮಾಜಕ್ಕೆ ಬಹಳ ಮುಖ್ಯವಾಗಿದೆ ಎಂದು ಭರವಸೆ ನೀಡಿದರು.  

   ಸುದ್ದಿಗೋಷ್ಠಿಯಲ್ಲಿ ಗುರುರಾಜ ಶಿರಹಟ್ಟಿ, ಸತೀಶ ಹೊಳಬಾಗಿಲ,ಸುಧೀರ ನಾಯಕ, ನ್ಯಾಯವಾದಿ ಸಂಜೀವಶಿರಹಟ್ಟಿ ಮತ್ತಿತರರು ಇದ್ದರು.  

ಫೋಟೊ12ಆರ್‌ಎನ್‌ಆರ್07ರಾಣಿಬೆನ್ನೂರ: ನಗರದ ಅನಂತ ಸಭಾಭವನದಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ದೇವರಗುಡ್ಡ ಶ್ರೀ ಮಾಲತೇಶ ಸ್ವಾಮಿ ದೇವಸ್ಥಾದ ಪ್ರಧಾನ ಅರ್ಚಕ ಸಂತೋಷ ಪೂಜಾರ ಮಾತನಾಡಿದರು.