ಮೃತ ಪಟ್ಟ ನಾಗರೀಕರಿಗೆ ಮೆಣದ ಬತ್ತಿ ಹಚ್ಚುವ ಮೂಲಕ ಭಾವಪೂರ್ಣ ಶದ್ರಾಂಜಲಿ ಸಲ್ಲಿಕೆ
ಹೊಸಪೇಟೆ 27 :- ಇಂದು ಹೊಸಪೇಟೆಯ ಜೈಭೀಮ್ ವೃತ್ತದಲ್ಲಿ ಹೊಸಪೇಟೆಯ ಅಂಜುಮನ್ ಖಿದ್ಮತೆ ಇಸ್ಲಾಂ (ರಿ) ವತಿಯಿಂದ ಕಾಶ್ಮೀರದ ಪಹಲ್ಗಾಮ್‌ನಲ್ಲಿ ಉಗ್ರರು ಪ್ರವಾಸಿಗರನ್ನು ಗುರಿಯಾಗಿಸಿಕೊಂಡು ನಡೆದ ಭೀಕರ ಭಯೋತ್ಪಾದಕ ದಾಳಿಯನ್ನು ಖಂಡಿಸಿ ಹಾಗೂ ದಾಳಿಯಿಂದಾಗಿ ಮೃತ ಪಟ್ಟ ನಾಗರೀಕರಿಗೆ ಮೆಣದ ಬತ್ತಿ ಹಚ್ಚುವ ಮೂಲಕ ಭಾವಪೂರ್ಣ ಶದ್ರಾಂಜಲಿ ಸಲ್ಲಿಸಿದರು.
ಈ ಸಂದರ್ಭದಲ್ಲಿ ಹೊಸಪೇಟೆ ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷರು ಹಾಗೂ ಅಂಜುಮನ್ ಕಿದ್ಮತೆ ಇಸ್ಲಾಂ ಸಮಿತಿಯ ಅಧ್ಯಕ್ಷರಾದ ಎಚ್.ಎನ್ ಮೊಹಮ್ಮದ್ ಇಮಾಮ ನಿಯಾಜಿ ರವರು ಮಾತನಾಡಿ ಪೆಹೆಲ್ಗಮ್ ನಲ್ಲಿ ಅಮಾಯಕ ಪ್ರವಾಸಿಗರ ಮೇಲೆ ನಡೆದ ಉಗ್ರಗಾಮಿಗಳ ಕೃತ್ಯವನ್ನು ನಮ್ಮ ಸಮಾಜದ ವತಿಯಿಂದ ಖಂಡಿಸುತ್ತೇವೆ. ಕೆಲವೊಂದು ಎಲೆಕ್ಟ್ರಾನಿಕ್ ಮೀಡಿಯಾ ಗಳು ಹಾಗೂ ಕೆಲ ರಾಜಕಾರಣಿಗಳು ಜಾತಿ ಧರ್ಮ ಹೆಸರಿನಲ್ಲಿ ರಾಜಕಾರಣ ಮಾಡುತ್ತಿರುತ್ತಾರೆ ಹಿಂದೂ ಮುಸ್ಲಿಮರ ಸಾಮರಸ್ಯವನ್ನು ಹಾಳು ಮಾಡುತ್ತಿರುತ್ತಾರೆ. ಹಾಗೂ ಉಗ್ರಗಾಮಿಗಳಿಗೆ ಯಾವುದೇ ಜಾತಿ ಮತ ಪಂಥ ಭೇದಭಾವವಿಲ್ಲದೆ ದುಷ್ಕೃತ್ಯವನ್ನು ಎಸಗುತ್ತಿರುತ್ತಾರೆ. ಇಂತಹ ಉಗ್ರಗಾಮಿಗಳಿಗೆ ಉಗ್ರವಾದ ಶಿಕ್ಷೆಯನ್ನೇ ನೀಡಬೇಕು ಎಂದು ನಾವೆಲ್ಲರೂ ಸರ್ವಾನುಮತದಿಂದ ಆಗ್ರಹಿಸುತ್ತೇವೆ. ವಿಶ್ವದಲ್ಲಿಯೇ ಭಾರತ ಸರ್ವಧರ್ಮಗಳ, ಹಾಗೂ ಸರ್ವ ಜನಾಂಗದ ಶಾಂತಿಯ ತೋಟವಾಗಿರುತ್ತದೆ. ಶಾಂತಿಯನ್ನು ಕದಡುವ ಉಗ್ರಗಾಮಿಗಳಿಗೆ ತಕ್ಕ ಶಿಕ್ಷೆಯಾಗಲೇಬೇಕೆಂದು ಕೇಂದ್ರ ಸರ್ಕಾರಕ್ಕೆ ಮನವಿ ಮಾಡಿದರು , ನಂತರ ಮೃತಪಟ್ಟ ಎಲ್ಲರಿಗೂ ಆತ್ಮಕ್ಕೆ ಶಾಂತಿ ಸಿಗಲೆಂದು ಹಾಗೂ ಎಲ್ಲಾ ಕುಟುಂಬದವರಿಗೂ ದುಃಖವನ್ನು ಭರಿಸಲು ಶಕ್ತಿಯನ್ನು ನೀಡಲು ಆ ಭಗವಂತನಲ್ಲಿ ಪ್ರಾರ್ಥಿಸುತ್ತೇವೆ ಎಂದರು.
ಈ ಒಂದು ಕಾರ್ಯಕ್ರಮದಲ್ಲಿ ನಾಜಿಮ್ ರವರು ಹಾಗೂ ಫಜಲುಲ್ಲಾ ರವರು, ಹಾಗೂ ರೆಹಮತ ರವರು, ವಖ್ಫ್ ಬೋರ್ಡ್ ನ ಜಿಲ್ಲಾಧ್ಯಕ್ಷರಾದ ದಾದಾಪೀರ್ ಭಾವ್ ರವರು ಹಾಗೂ ಅಂಜುಮನ್ ಕಮಿಟಿಯ ಉಪಾಧ್ಯಕ್ಷರಾದ ಎಮ್.ಎಮ್, ಫೈರೋಜ್ ಖಾನ್, ಕಾರ್ಯದರ್ಶಿಯಾದ ಅಬೂಬಕ್ಕರ್ ಅಶ್ರಫಿ, ಜಂಟಿಕಾರ್ಯದರ್ಶಿಯಾದ ಡಾಽಽ ದರ್ವೇಶ್ ಮೈನುದ್ದಿನ್. ಸದ್ಯಸರಾದ ಗುಲಾಮ್ ರಸೂಲ್, ಖಾದರ್ ರಫಾಯಿ, ಹಾಗೂ ಮಸೀದಿಗಳ ಅಫೀಸಾಬ್ ಗಳು ಸಮಾಜದ ಹಿರಿಯ ಮುಖಂಡರು ಯುವಕರು ಭಾಗವಹಿಸಿದ್ದರು.