ಗ್ರಾಮಗಳಿಗೆ ಕೇಂದ್ರ ವೀಕ್ಷಕರಾದ ಚಕ್ರವರ್ತಿ ಭೇಟಿ

ಹಾವೇರಿ:  ಹಿರೇಕೆರೂರು ವಿಧಾನಸಭಾ ಕ್ಷೇತ್ರಗಳ ಚುನಾವಣಾ ಚಟುವಟಿಕೆಗಳ  ಮೇಲೆ ತೀವ್ರ ನಿಗಾವಹಿಸಿರುವ ಕೇಂದ್ರ ಸಾಮಾನ್ಯ ವೀಕ್ಷಕರಾದ ಹಿರಿಯ ಐಎಎಸ್ ಅಧಿಕಾರಿ ಚಕ್ರವತರ್ಿ ಅವರು ರಾತ್ರಿ ವೇಳೆ ಚುನಾವಣಾ ಚಟುವಟಿಕೆಗಳ ಮಾಹಿತಿ ಪಡೆಯಲು ಖದ್ದಾಗಿ ಗ್ರಾಮ ಸಂಚಾರ ಕೈಗೊಂಡು ಮಾಹಿತಿ ಸಂಗ್ರಹಿಸುತ್ತಿದ್ದಾರೆ.

ಅನಿರೀಕ್ಷಿತವಾಗಿ ಕ್ಷೇತ್ರ ವ್ಯಾಪ್ತಿಯ ಗ್ರಾಮಗಳಿಗೆ  ರಾತ್ರಿ ವೇಳೆ ಭೇಟಿ ನೀಡುವ   ಚಕ್ರವತರ್ಿ ಅವರು ಗ್ರಾಮಗಳ ರಾಜಕೀಯ ಚಟುವಟಿಕೆ ಕುರಿತಂತೆ ಗ್ರಾಮಸ್ಥರೊಂದಿಗೆ ಆತ್ಮೀಯ ಮಾತುಕತೆಗೆ ತೊಡಗಿ ರಾಜಕೀಯ ವ್ಯಕ್ತಿಗಳ ಚುನಾವಣಾ ಚಟುವಟಿಕೆಗಳ ಮಾಹಿತಿ ಸಂಗ್ರಹಿಸುತ್ತಾರೆ. ಯಾವ ಯಾವ ಪಕ್ಷದವರು ಮತಯಾಚನೆಗೆ ಬರುತ್ತಾರೆ, ಹಣ, ಉಡುಗೊರೆ, ಮಧ್ಯದ ಆಮಿಷ ಒಡ್ಡುತ್ತಾರೆಯೇ ಎಂಬುದಾಗಿ  ಪ್ರಶ್ನೆಗಳನ್ನು ಕೇಳುತ್ತಾ  ಅಭ್ಯಥರ್ಿಗಳು ಅಥವಾ ಪರವಾಗಿ ಮತದಾನಕ್ಕೆ ಆಮಿಷ ಒಡ್ಡಿದರೆ ಇಂತಹ ಚಟುವಟಿಕೆಗಳ ಮಾಹಿತಿಯನ್ನು ನಮ್ಮೊಂದಿಗೆ ಹಂಚಿಕೊಳ್ಳಿ ,ಇಂತಹ ಘಟನೆಗಳ ಮುನ್ಸೂಚನೆ ದೊರೆತರೆ ತಕ್ಷಣ ಮಾಹಿತಿ ನೀಡಿ. ಆಯೋಗದ ಅಧಿಕಾರಿಗಳ ತಂಡ ಸ್ಥಳಕ್ಕೆ ಧಾವಿಸುತ್ತದೆ, ಅಕ್ರಮಗಳಿಗೆ ತಡೆ ಹಾಕುತ್ತದೆ. ಇಂತಹ ಕಾನೂನು ಬಾಹೀರ ಚಟುವಟಿಕೆಗಳ ಮಾಹಿತಿ ನೀಡಿದವರ ಹೆಸರು ಗೌಪ್ಯವಾಗಿರಿಸಲಾಗುವುದು ಎಂದು ಮನವೊಲಿಸುತ್ತಾರೆ.

ನಿರ್ಬಢೆಯಿಂದ ಮತದಾನ ಮಾಡಿ, ಉಡುಗೊರೆ ಹಣದ ಆಮಿಷಕ್ಕೆ ಒಳಗಾಗಬೇಡಿ. ನೈತಿಕ ಮತದಾನ ಮಾಡಿ ಎಂದು ಮತದಾರರಿಗೆ ತಿಳಿಹೇಳುವ ಕೇಂದ್ರ ವೀಕ್ಷಕರು  ಮತದಾನಕ್ಕೆ ಆಮಿಷ ಒಡ್ಡುವ ವರು, ನಿಮ್ಮೆ ಇಚ್ಚೆಯ ವಿರುದ್ಧವಾಗಿ ಮತ ಚಲಾಯಿಸಲು ಒತ್ತಾಯಿಸುವವರ ವಿರುದ್ದ ದೂರು ನೀಡಲು ಮನವಿ ಮಾಡಿಕೊಂಡರು. ಮಾಹಿತಿ ನೀಡಲು ಅನುಕೂಲವಾಗುವಂತೆ ಗ್ರಾಮಸ್ಥರಿಗೆ ಮೊಬೈಲ್ ಸಂಖ್ಯೆ 63666 98346 ಸಹ ನೀಡಿದ್ದಾಗಿ ಗ್ರಾಮದ ಯುವಕ ಮಾಹಿತಿ ನೀಡಿದನು.ವೀಕ್ಷರೊಂದಿಗೆ ಗ್ರಾಮಸ್ಥರು ವಿಷಯ ಹಂಚಿಕೊಳ್ಳತ್ತಾ ಕೃಷಿ ಚಟುವಟಿಕೆ ಇಂದಾಗಿ ನಸುಕಿನಲ್ಲಿ ಮನೆ ತೊರೆದು ರಾತ್ರಿ ಮನೆ ಸೇರುವುದಾಗಿ ತಿಳಿಸಿದ ಜನತೆ ರಾಜಕೀಯ ಚಟುವಟಿಕೆ ಬಗ್ಗೆ ವಿವರಿಸಿ ಚುನಾವಣಾ ಅಕ್ರಮಗಳ ಬಗೆಗೆ ಮಾಹಿತಿ ನೀಡುವುದಾಗಿ ಹೇಳಿದರು.ಕ್ಷೇತ್ರ ವ್ಯಾಪ್ತಿಯ ದೂದಿಹಳ್ಳಿ, ಚನ್ನಳ್ಳಿ, ನದಿನೇಗಿಲು, ಬನ್ನಿಹಟ್ಟಿ, ತಿಪ್ಪಾಯಿಕೊಪ್ಪ,  ವರಹಾ ಚೆಕ್ಪೋಸ್ಟ್, ಕೋಡಮಗ್ಗಿ, ತಾವರಗಿ, ಕೋಡ, ಉಜನಿಪುರ, ಹಿರೇಬೂದಿಹಾಳ, ಅರಳಿಕಟ್ಟಿ, ಚಿನ್ನಮುಳಗುಂದ ಇತರ ಗ್ರಾಮಗಳಿಗೆ ರಾತ್ರಿ ವೇಳೆ ಸಂಚರಿಸಿ ಚುನಾವಣಾ ಚಟುವಟಿಕೆಗೆ ಬಗೆಗೆ ಅವಲೋಕಿಸಿದರು. ಯುವಕರು ಮತದಾರರ ಭೇಟಿಮಾಡಿ ಮಾಹಿತಿ ಪಡೆದು ನೈತಿಕ ಚುನಾವಣೆಗೆ ಆಯೋಗದೊಂದಿಗೆ ಸಹಕರಿಸಲು ಮನವಿ ಮಾಡಿಕೊಂಡರು.