ಉತ್ತೇಜನವು ಉತ್ಸಾಹವನ್ನು ಹೆಚ್ಚಿಸುವ ಕ್ರಿಯೆ : ವೈಬಿ ಕಡಕೋಳ

Encouragement is the act of increasing enthusiasm: YB Kadakola

ಉತ್ತೇಜನವು ಉತ್ಸಾಹವನ್ನು ಹೆಚ್ಚಿಸುವ ಕ್ರಿಯೆ : ವೈಬಿ ಕಡಕೋಳ 

ಯರಗಟ್ಟಿ, 08 :  "ಉತ್ತೇಜನವು ಉತ್ಸಾಹವನ್ನು ಹೆಚ್ಚಿಸುವ, ಕ್ರಿಯೆ ನಾವು ಯಾವುದೇ ಸಂದರ್ಭದಲ್ಲಿ ಪ್ರೇರೇಪಿಸುವ ಮತ್ತು ಆತ್ಮವಿಶ್ವಾಸವನ್ನು ಹೆಚ್ಚಿಸಲು ನಾಲ್ಕು ಪ್ರೋತ್ಸಾಹ ದಾಯಕ ಮಾತುಗಳನ್ನು ಹೇಳಿದಾಗ ನಮ್ಮೊಂದಿಗೆ ಇರುವವರು ಏನನ್ನಾದರೂ ಸಾಧಿಸಬಹುದು ಎಂಬುದಕ್ಕೆ ತಲ್ಲೂರು ಸಂಪನ್ಮೂಲ ಕೇಂದ್ರದ ವ್ಯಾಪ್ತಿಯ ಶಿಕ್ಷಕರ ಕ್ರಿಕೆಟ್ ತಂಡ ಸಾಕ್ಷಿ". ಇದಕ್ಕೆ ತಂಡದ ಸಾಂಘಿಕ ಪ್ರಯತ್ನ ಹಾಗೂ ಕ್ಲಸ್ಟರ್ ಸಂಪನ್ಮೂಲ ವ್ಯಕ್ತಿ ಗುರು ದೇವಿ ಮಲಕನ್ನವರ ಅವರು ಇಂದು ಎಲ್ಲ ಟೀಂ ಗೆ ಪ್ರೋತ್ಸಾಹ ದಾಯಕ ಕಾಣಿಕೆ ನೀಡುತ್ತಿರುವ ಜೊತೆಗೆ ಅಪ್ನಾದೇಶ ಬಳಗದಿಂದ ರಾಜ್ಯ ಮಟ್ಟದ ಶಿಕ್ಷಕ ರತ್ನ ಹಾಗೂ ಸಾವಿತ್ರಿ ಬಾಯಿ ಪುಲೇ ಸಂಘಟನೆ ಕೊಡಮಾಡುವ ಉತ್ತಮ ಶಿಕ್ಷಕಿ ಪ್ರಶಸ್ತಿ ಗೌರವಕ್ಕೆ ಪಾತ್ರರಾದ ಗುರುಮಾತೆಯರನ್ನು. ಉತ್ತಮ ಶಾಲೆ ಗೌರವಕ್ಕೆ ಪಾತ್ರರಾಗಿರುವ ಜಾಲಿ ಕಟ್ಟಿ ಶಾಲೆಯವರನ್ನು ಸನ್ಮಾನ ಮಾಡುತ್ತಿರುವ ಕಾರ್ಯ ನಿಜಕ್ಕೂ ಶ್ಲಾಘನೀಯ "ಎಂದು ಸಮನ್ವಯ ಶಿಕ್ಷಣ ವಿಷಯ ಶಿಕ್ಷಕರಾದ ವೈ ಬಿ ಕಡಕೋಳ ತಿಳಿಸಿದರು.  

ಅವರು ಯರಗಟ್ಟಿ ತಾಲೂಕಿನ ತಲ್ಲೂರು ಗ್ರಾಮದ ಸಮೂಹ ಸಂಪನ್ಮೂಲ ಕೇಂದ್ರದಲ್ಲಿ ಇತ್ತೀಚೆಗೆ ಆಯೋಜಿಸಿದ್ದ ಕ್ಲಸ್ಟರ್ ಮಟ್ಟದ ಮುಖ್ಯೋಪಾಧ್ಯಾಯರ ಸಭೆ ವಿವಿಧ ಕ್ಷೇತ್ರಗಳಲ್ಲಿ ಸಾಧಕರ ಗೌರವ ಸಮಾರಂಭದ ಕಾರ್ಯ ಕ್ರಮದ ಮುಖ್ಯ ಅತಿಥಿಗಳಾಗಿ ಭಾಗವಹಿಸಿ ಮಾತನಾಡಿದರು.  

ಈ ಕಾರ್ಯಕ್ರಮದ ಅಧ್ಯಕ್ಷತೆಯನ್ನು ಕ್ಲಸ್ಟರ್ ಸಂಪನ್ಮೂಲ ವ್ಯಕ್ತಿ ಗುರು ದೇವಿ ಮಲಕನ್ನವರ ವಹಿಸಿದ್ದರು. ವೇದಿಕೆಯಲ್ಲಿ ಕ್ಲಸ್ಟರ್ ಮಟ್ಟದ ವಿವಿಧ ಶಾಲೆಗಳ ಮುಖ್ಯೋಪಾಧ್ಯಾಯರುಗಳಾದ  ಡಿ ಡಿ ಭೋವಿ. ಎಸ್ ಬಿ ಜಂಬಗಿ.ವಿ ಎಮ್ ಮರಡಿ.ಎಸ್ ಎಸ್ ಅಣ್ಣಿಗೇರಿ ರಾಜಶೇಖರ ದುಂಡನಕೊಪ್ಪ.ಎಚ್ ವಾಯ್ ಗೌಡರ.ಮೊದಲಾದವರು ವೇದಿಕೆಯಲ್ಲಿ ಉಪಸ್ಥಿತರಿದ್ದರು.  

ಈ ಸಂದರ್ಭದಲ್ಲಿ ಅಪ್ನಾದೇಶ್ ಫೌಂಡೇಶನ್ ವತಿಯಿಂದ ರಾಜ್ಯ ಮಟ್ಟದ ಶಿಕ್ಷಕ ರತ್ನ ಪ್ರಶಸ್ತಿ ಗೌರವಕ್ಕೆ ಪಾತ್ರರಾದ ಗುರು ಮಾತೆ ಎಸ್ ಎಮ್ ನೈನಾರ.ಸ ಕಿ ಪ್ರಾ ಶಾಲೆ ಜಾಕ್ ವೆಲ್‌.ಹಾಗೂ ಸಾವಿತ್ರಿಬಾಯಿ ಫುಲೆ ಉತ್ತಮ ಶಿಕ್ಷಕಿ ಪ್ರಶಸ್ತಿಗೆ ಪಾತ್ರರಾದ ಗುರುಮಾತೆ  ಮಂಜುಳಾ ಸಸಾಲಟ್ಟಿ.ಮತ್ತು 

ಉತ್ತಮ ಪರಿಸರ ಶಾಲೆ ಪ್ರಶಸ್ತಿಗೆ ಪಾತ್ರರಾದ ಜಾಲಿಕಟ್ಟಿ ಶಾಲೆಯ  ಮುಖ್ಯ ಶಿಕ್ಷಕ ಎಚ್ ವಾಯ್ ಮಾದರ.ಇವರುಗಳನ್ನು ಸನ್ಮಾನಿಸಿ ಗೌರವಿಸಲಾಯಿತು. 

ಇದೇ ಸಂದರ್ಭದಲ್ಲಿ ಯರಗಟ್ಟಿ ಪ್ರಿಮಿಯರ್ ಲೀಗ್ ಕ್ರಿಕೆಟ್ ಸ್ಪರ್ಧೆಯಲ್ಲಿ ವಿಜೇತ ತಲ್ಲೂರ ಕ್ಲಸ್ಟರ್ ನ ಕ್ರಿಡಾಪಟುಗಳಿಗೆ ಬಹುಮಾನ ವಿತರಣೆ ಜರುಗಿಸಲಾಯಿತು. 

ಈ ಕಾರ್ಯಕ್ರಮವನ್ನು ಉದ್ದೇಶಿಸಿ ಅಧ್ಯಕ್ಷತೆ ವಹಿಸಿದ್ದ ತಲ್ಲೂರು ಕ್ಲಸ್ಟರ್ ಸಂಪನ್ಮೂಲ ವ್ಯಕ್ತಿ ಗುರುದೇವಿ ಮಲಕನ್ನವರ ಮಾತನಾಡಿ "ಪರೀಕ್ಷಾ ಫಲಿತಾಂಶ ಭರ್ತಿ ಮಾಡುವ ಪ್ರಕ್ರಿಯೆ ಮುಂಬರುವ ದಿನಗಳಲ್ಲಿ ಕ್ಲಸ್ಟರ್ ಹಂತದಲ್ಲಿ ಕೈಗೊಳ್ಳುವ ಶಾಲೆಯ ಚಟುವಟಿಕೆಗಳನ್ನು ಕುರಿತು ಪ್ರಾಸ್ತಾವಿಕವಾಗಿ ಮಾತನಾಡಿದರು.  

ಶಿಕ್ಷಕರ ಸಂಘದ ಪ್ರತಿನಿಧಿಗಳಾದ ಎಚ್ ವೈ ಗೌಡರ ಮಾತನಾಡಿ ಸಂಘಟನೆ ಮೂಲಕ ಕೈಗೊಂಡ ಶಿಕ್ಷಕರ  ಬಗ್ಗೆ ಕಾಳಜಿ ತಿಳಿಸುವ ಜೊತೆಗೆ ಕ್ರಿಕೆಟ್ ತಂಡದ ಗೆಲುವಿನ ರೋಚಕ ಕ್ಷಣಗಳ ಕುರಿತು ವಿವರಿಸಿದರು. 

ಕಾರ್ಯ ಕ್ರಮ ನಿರೂಪಣೆಯನ್ನು  ಎಸ್ ಎಫ್ ಮುರಗಣ್ಣವರ.ಮಾಡುವ ಜೊತೆಗೆ ಕಾರ್ಯ ಕ್ರಮದ ಕೊನೆಗೆ ವಂದಿಸಿದರು