ಪರಿಸರ ಮಾಲಿನ್ಯ ಉಪನ್ಯಾಸ
ಯಮಕನಮರಡಿ 30: ಸ್ಥಳೀಯ ಸರಕಾರಿ ಪದವಿ ಪೂರ್ವ ಕಾಲೇಜು ಯಮಕನಮರಡಿಯ ಹಸಿರು ಪಡೆ (ಇಕೋ ಕ್ಲಬ್) ವತಿಯಿಂದ ವಿದ್ಯಾರ್ಥಿಗಳಿಗಾಗಿ ಪರಿಸರ ಮಾಲಿನ್ಯ ಕುರಿತು ವಿಶೇಷ ಕಾರ್ಯಕ್ರಮ ಹಮ್ಮಿಕೊಳ್ಳಲಾಯಿತು.
ವಿಶೇಷ ಅತಿಥಿ ಹಾಗೂ ಸಂಪನ್ಮೂಲ ವ್ಯಕ್ತಿಗಳಾಗಿ ಬಿ.ಬಿ. ಕೊಡ್ಲಿ ಸಮಾಜ ಶಾಸ್ತ್ರ ಉಪನ್ಯಾಸಕರು ಭಾಗವಹಿಸಿ ಪರಿಸರ ಮಾಲಿನ್ಯದ ಇತಿಹಾಸ ಪರಿಸರ ಮಾಲಿನ್ಯಕ್ಕೆ ಮುಂದುವರೆದ ದೇಶಗಳ ನಕಾರಾತ್ಮಕ ಕೊಡುಗೆಗಳು ಪರಿಸರ ಸಮ್ಮೇಳನಗಳು ಜೀವ ವೈವಿಧ್ಯತೆ ಕೈಗಾರೀಕರಣ ಹಾಗೂ ಪರಿಸರ ಸಂರಕ್ಷಣೆ ಹಾಗೂ ಜೀವ ಸಂಕುಲಗಳ ರಕ್ಷಣೆಯ ಜವಾಬ್ದಾರಿಯಲ್ಲಿ ವಿದ್ಯಾರ್ಥಿ ಹಾಗೂ ಸಮಾಜದ ಪಾತ್ರ ಕುರಿತು ಉಪನ್ಯಾಸ ನೀಡಿದರು.
ಎಸ್.ಆರ್ ತಬರಿ ಇವರು ಸ್ವಾಗತ ಹಾಗೂ ಪ್ರಾಸ್ತಾವಿಕವಾಗಿ ಮಾತನಾಡಿ ಪರಿಸರ ಮಾಲಿನ್ಯ ಅದರ ಪ್ರಕಾರಗಳು ಪರಿಸರ ಮಾಲಿನ್ಯಕ್ಕೆ ಕಾರಣಗಳು ಕುರಿತು ತಿಳಿಸಿದರು.
ಅಧ್ಯಕ್ಷತೆಯನ್ನು ಪ್ರಾಚಾರ್ಯ ಎಸ್.ಎ.ರಾಮನಕಟ್ಟಿ ವಹಿಸಿದ್ದರು. ರಸಾಯನಶಾಸ್ತ್ರ ಉಪನ್ಯಾಸಕ ಎ.ಎ.ಕಿವಂಡಾ ನಿರೂಪಿಸಿದರು. ಕಾಲೇಜಿನ ಬೋಧಕ ಸಿಬ್ಬಂದಿಗಳು ಹಾಗೂ ವಿಜ್ಞಾನ ವಿಭಾಗದ ವಿದ್ಯಾರ್ಥಿಗಳು ಭಾಗವಹಿಸಿದ್ದರು.