ಲೋಕದರ್ಶನವರದಿ
ರಾಣೇಬೆನ್ನೂರು09: ಮನುಜನು ಸತ್ತಾಗ ಮಣ್ಣಲ್ಲಿ ಮಣ್ಣಾಗುವ ಆತನ ಕಣ್ಣುಗಳನ್ನು ಇನ್ನೊಬ್ಬ ಅಂಧರಿಗೆ ದಾನ ಮಾಡಿದರೆ ನಮ್ಮ ಕಣ್ಣುಗಳು ಹಾಗೆಯೇ ಜೀವಂತವಾಗಿ ಉಳಿಯಲಿವೆ, ಆ ಕಣ್ಣುಗಳಿಂದ ಅಂಧರು ನೋಡುವ ಭಾಗ್ಯ ಲಭಿಸುತ್ತದೆ. ಕೊನೆಗೆ ದಾನಿಯ ಹೆಸರು ಅಜರಾಮರವಾಗಿಯೇ ಉಳಿಯುತ್ತದೆ ಎಂದು ಲಯನ್ಸ್ ಅಧ್ಯಕ್ಷ ಬಸವರಾಜ ಬಡಿಗೇರ ಹೇಳಿದರು.
ಇಲ್ಲಿನ ಮೆಡ್ಲೇರಿ ರಸ್ತೆಯ ಲಯನ್ಸ್ ಶಾಲೆಯಲ್ಲಿ ಲಯನ್ಸ್, ಲಯನೆಸ್ ಮತ್ತು ಲಿಯೋ ಕ್ಲಬ್, ಶ್ರೀ ಕಂಚಿ ಕಾಮಕೋಟಿ ಮೆಡಿಕಲ್ ಟ್ರಸ್ಟ್ ಶಂಕರ ಕಣ್ಣಿನ ಆಸ್ಪತ್ರೆ, ಸ್ವಾಭಿಮಾನಿ ಕನರ್ಾಟಕ ರಕ್ಷಣಾ ವೇದಿಕೆಗಳ ಆಶ್ರಯದಲ್ಲಿಏರ್ಪಡಿಸಿದ್ದ ಉಚಿತ ನೇತ್ರ ತಪಾಸಣೆ ಮತ್ತು ಕಣ್ಣಿನ ಪೊರೆ ಶಸ್ತ್ರಚಿಕಿತ್ಸಾ ಶಿಬಿರ ಉದ್ಘಾಟಿಸಿ ಮಾತನಾಡಿದರು.
ನೇತ್ರದಾನ ಮಹಾ ದಾನ ಅನ್ನುವ ಹಾಗೆ ಮನುಷ್ಯನಿಗೆ ಕಣ್ಣುಗಳು ಮಹತ್ವದಾಗಿದ್ದು, ತಾವೆಲ್ಲರೂ ಕಣ್ಣುಗಳನ್ನು ಸುರಕ್ಷಿತವಾಗಿ ಇಟ್ಟುಕೊಳ್ಳಬೇಕು. ಜೊತೆಗೆ ಮರಣ ಹೊಂದುವ ಕಾಲಕ್ಕೆ ಇಲ್ಲವೇ ಆಕಸ್ಮಿಕವಾಗಿ ಸಾವನ್ನಪ್ಪಿದರೆ ಅಂತಹ ವ್ಯಕ್ತಿಯ ಕಣ್ಣುಗಳನ್ನು ಇತರರಿಗೆ ದಾನ ಮಾಡಿ ಮಾನವೀಯತೆ ಮೆರೆಯಬೇಕು ಎಂದರು.
ನಗರಸಭಾ ಮಾಜಿ ಅಧ್ಯಕ್ಷ ಬಿ.ಎನ್ ಪಾಟೀಲ, ಅಶೋಕ ಹೊಟ್ಟಿಗೌಡ್ರ, ಡಾ. ಸೌರಭ, ಡಾ. ಸಣ್ಣಮನಿ, ನಿತ್ಯಾನಂದ ಕುಂದಾಪುರ, ಬಸವರಾಜ ಗುರಿಕಾರ, ಡಾ. ಶರಣರಾಜ ಚೌದರಿ, ಡಾ| ಅನುರಾದ ಕುಲಕಣರ್ಿ, ಉಮಾದೇವಿ ಮುದಗಲ್ಮಠ, ಆರ್.ವಿ ಸುರಗೊಂಡ, ಎಂ.ಹೆಚ್ ಪಾಟೀಲ ಮತ್ತಿತರರು ಇದ್ದರು.
ಈ ಶಿಬಿರದಲ್ಲಿ 350 ಕ್ಕೂ ಹೆಚ್ಚು ಶಿಬಿರಾಥರ್ಿಗಳು ನೇತ್ರ ತಪಾಸಣೆ ಮಾಡಿಸಿಕೊಂಡರು. ಅವರಲ್ಲಿ 110 ಶಿಬಿರಾಥರ್ಿಗಳನ್ನು ಶಂಕರ ಕಣ್ಣಿನ ಆಸ್ಪತ್ರೆ ಶಿವಮೊಗ್ಗಕ್ಕೆ ಶಸ್ತ್ರಚಿಕಿತ್ಸೆಗೆ ಕಳಿಸಿಕೊಡಲಾಯಿತು