ಜಮ್ಮುವಿನ ಸಾಂಬಾದಲ್ಲಿ ಕಾರ್ ಗೆ ಟ್ರಕ್ಗೆ ಡಿಕ್ಕಿ: ಐದು ಮಂದಿ ಸಾವು

ಜಮ್ಮು, ಫೆ 20, ಜಮ್ಮು ಮತ್ತು ಕಾಶ್ಮೀರದ ಸಾಂಬಾ ಜಿಲ್ಲೆಯ ಘಗ್ವಾಲ್ ಪ್ರದೇಶದ ಜಮ್ಮು-ಪಠಾಣ್ಕೋಟ್ ರಾಷ್ಟ್ರೀಯ ಹೆದ್ದಾರಿಯಲ್ಲಿ ಗುರುವಾರ ಕಾರೊಂದು ಟ್ರಕ್ಗೆ ಡಿಕ್ಕಿ ಹೊಡೆದು ಒಂದೇ ಕುಟುಂಬದ ಐವರು ಮೃತಪಟ್ಟಿದ್ದಾರೆ.  ಅಪಘಾತಕ್ಕೀಡಾದ ವಾಹನಗಳು ಕಥುವಾದಿಂದ ಜಮ್ಮು ಕಡೆಗೆ ಹೋಗುತ್ತಿದ್ದಾಗ ಕಾರು, ಟ್ರಕ್ಗೆ ಡಿಕ್ಕಿ ಹೊಡೆದಿದೆ ಎಂದು ಪೊಲೀಸರು ತಿಳಿಸಿದ್ದಾರೆ.  ಕಾರಿನಲ್ಲಿ ಪ್ರಯಾಣಿಸುತ್ತಿದ್ದ ಒಂದೇ ಕುಟುಂಬದ ಐವರು ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.  ಮೃತರನ್ನು ನಾನಕ್ ನಗರದ ಡಿಜಿಯಾನಾ ಆಶ್ರಮ ನಿವಾಸಿಗಳಾದ  ಅರ್ಜುನ್ ಸಿಂಗ್ (85), ಶಬ್ ಜೀತ್ ಸಿಂಗ್(20), ಮಂಜೀತ್ ಸಿಂಗ್(55), ದರ್ಶನ್ ಸಿಂಗ್(80), ಮತ್ತು ದರ್ಶನ್ ಕೌರ್ (65) ಎಂದು ಗುರುತಿಸಲಾಗಿದೆ.