ಎಷ್ಟೇ ಲಾಭವಿದ್ದರೂ ಪಾಕಿಸ್ಥಾನಕ್ಕೆ ಮಾವೂ, ಲಿಂಬೆ, ದ್ರಾಕ್ಷಿ, ಟೊಮೆಟೊ ಮಾರಾಟ ಮಾಡುವುದಿಲ್ಲ, : ಸಂಗಮೇಶ ಸಗರ
ವಿಜಯಪುರ 17: ಚೀನಾದಂತಹ ಕುತಂತ್ರಿಗಳ ಬೆಂಬಲದಿಂದ ಪಾಪಿ ಪಾಕಿಸ್ತಾನ ಪದೇ ಪದೇ ಕೆಣಕಿ ಯುದ್ಧ ಮಾಡಲು ಪ್ರಯತ್ನಿಸುತಿದೆ, ಪಾಕಿಸ್ತಾನದ ಮಿಲ್ಟ್ರಿ ಹಾಗೂ ಉಗ್ರವಾದಿಗಳೊಂದಿಗೆ ಸೇರಿ ಈ ಕೃತ್ಯ ನಡೆಸುತ್ತಿರುವುದದಿದು ಹೊಸದೆನ್ನಲ್ಲಾ, ಪ್ರತಿ ಸಾರಿಯೂ ನಮ್ಮ ಹೆಮ್ಮೆಯ ಸೈನಿಕರು ಅವರೊಂದಿಗೆ ಹೊರಾಡಿ ಗೆದ್ದಿರುವುದು 1947ರಿಂದ ನಾವೂ ನೋಡುತ್ತಾ ಬಂದಿದ್ದೆವೆ, ಇದಕ್ಕೆ ಶಾಶ್ವತ ಪರಿಹಾರ ಸಿಗಬೇಕಾದರೆ ನಮ್ಮ ದೇಶದಿಂದ ಒಟ್ಟಾರೆಯಾಗಿ ಎಲ್ಲಾ ವ್ಯಾಪಾರ ವಹಿವಾಟುಗಳನ್ನು ಸಂಪೂರ್ಣವಾಗಿ ನಿಲ್ಲಿಸಬೇಕು ಅಂದಾಗ ಮಾತ್ರ ಅವರಿಗೆ ತಕ್ಕ ಪಾಠವಾಗುವುದು ಇದಕ್ಕಾಗಿ ವಿಜಯಪುರ ಜಿಲ್ಲೆಯ ಸಮಸ್ತ ರೈತ ಬಾಂಧವರು ನಮ್ಮಲ್ಲಿ ಬೆಳೆಯುವ ಎಲ್ಲಾ ಹಣ್ಣು, ತರಕಾರಿ, ಮಸಾಲಿ ಪದಾರ್ಥಗಳನ್ನು ಯಾವುದೇ ಕಾರಣಕ್ಕೂ ಪಾಕಿಸ್ತಾನಕ್ಕೆ ಹಾಗೂ ಅದಕ್ಕೆ ಬೆಂಬಲಿಸುತ್ತಿರುವ ಟರ್ಕಿ, ಚೀನಾ ಸೇರಿದಂತೆ ಇತರೆ ದೇಶಗಳಿಗೆ ನಮ್ಮಲ್ಲಿಯ ರೈತ ಉತ್ಪನ್ನಗಳನ್ನು ಮಾರಾಟ ಮಾಡದಿರಲು ನಿರ್ಧರಿಸಿದ್ದೇವೆ ಎಂದು ಕರ್ನಾಟಕ ರಾಜ್ಯ ರೈತ ಸಂಘ ಹಸಿರು ಸೇನೆಯ ಜಿಲ್ಲಾಧ್ಯಕ್ಷರಾದ ಸಂಗಮೇಶ ಸಗರ ಅವರು ಪತ್ರಿಕೆ ಮೂಲಕ ನೇರ ಎಚ್ಚರಿಕೆ ನೀಡಿದ್ದಾರೆ.
ನಮ್ಮಲ್ಲಿಯ ಬಿಸಿಲಿನ ವರದಾನದಿಂದ ಇಲ್ಲಿ ಬೆಳೆಯುವ ಲಿಂಬೆ, ದ್ರಾಕ್ಷಿ, ದಾಳಿಂಬೆ, ಮಾವೂ, ಟೊಮ್ಯಾಟೊ ಅತೀ ಹೆಚ್ಚಿನ ಸಿಹಿ ಹಾಗೂ ರಸವನ್ನು ಹೊಂದುವುದು ಮಾತ್ರವಲ್ಲದೇ ಹೊರದೇಶಕ್ಕೆ ರು್ತಮಾಡಲು ಬೇಕಾಗುವ ಎಲ್ಲಾ ಗುಣಮಟ್ಟವನ್ನು ಹೊಂದಿವೆ, ನಮ್ಮ ಸೈನಿಕರ ಕುಟುಂಬಕ್ಕು ಕಳಿಸುತ್ತೆವೆ, ಅವಶ್ಯಕತೆ ಬಿದ್ದರೆ ಬೇರೆಕಡೆಗೆ ಕಳಿಸುತ್ತೆವೆ ಈ ದೇಶಕ್ಕೆ ಮಾರಕವಾಗಿರುವ ಪಾಕಿಸ್ತಾನಕ್ಕೆ ಯಾವುದೇ ಕಾರಣಕ್ಕೂ ಮಾರಟ ಮಾಡುವುದಿಲ್ಲ, ನಾವೂ ಹೋರಾಟಕ್ಕೆ ಸಿದ್ದರಿದ್ದೆವೆ, ನಮ್ಮ ದೇಶ ನಮ್ಮ ಹೆಮ್ಮೆ, ಜೈ ಜವಾನ ಜೈಕಿಸಾನ, ಎಂದು ಕೇವಲ ಬಾಯಿಯಲ್ಲಿ ಹೇಳಿದರೆ ಸಾಲದು ಕೃತಿಯಲ್ಲು ಬರಬೇಕು, ಈ ದೇಶದ ರೈತರೆಲ್ಲರೂ ಭಾರತೀಯ ಸೈನಿಕರೊಂದಿಗೆ ಇದ್ದೆವೆ ಎನ್ನುವ ಸಂಧೇಶ ಸಾರುತ್ತೆವೆ ಎಂದರು.
ಕುಂಟು ನೆಪ ಹೇಳಿ ದ್ರೋಹಿ ಪಾಕಿಸ್ತಾನ ಮೇಲಿಂದ ಯುದ್ಧ ಮಾಡುವುದು ಶಾಶ್ವತವಾಗಿ ನಿಲ್ಲಬೇಕು ಜಿಲ್ಲೆಯ ರೈತರು ವಿಶ್ವಗುರು ಭಾರತಪರ ಇದ್ದೆವೆ ಎಂದು ಹೆಮ್ಮೆಯಿಂಧ ಹೇಳಿಕೊಂಡು ಯಾವುದೇ ಕಾರಣಕ್ಕೂ ಎಷ್ಟೇ ಲಾಭವಾದರೂ ಪಾಕಿಸ್ತಾನಕ್ಕೆ ನಮ್ಮ ರೈತರು ಬೆಳೆಯುವ ಸಾಮಗ್ರಿಗಳನ್ನು ಕಳಿಸುವುದಿಲ್ಲ, ನಮ್ಮಿಂದ ಖರಿಧಿಸುವ ದಳ್ಳಾಳಿಗಳು ಕೂಡಾ ಅಲ್ಲಿಗೆ ಕಳಿಸಬಾರದು ಎಂದು ಜಿಲ್ಲಾ ಸಂಚಾಲಕರಾದ ವೀರಣ್ಣ ಸಜ್ಜನ ಎಚ್ಚರಿಕೆ ನೀಡಿದರು.
ಈ ವೇಳೆ ಜಿಲ್ಲಾ ಕಾರ್ಯಾಧ್ಯಕ್ಷರಾದ ಪ್ರಕಾಶ ತೇಲಿ, ಜಿಲ್ಲಾ ಸಂಚಾಲಕರಾದ ಮಹಾಂತೇಶ ಮಮದಾಪುರ, ರೈತ ಮುಖಂಡರಾದ ಮಲ್ಲಿಕಾರ್ಜುನ ಗೋಡೆಕಾರ, ಶ್ರಿಶೈಲ ಬೂಸಾರಿ, ಅಶೋಕ ಕೋಲಕಾರ, ರಮೇಶ ಮಮದಾಪುರ, ರವಿ ವಾಘ್ಮೋರೆ, ಸುರೇಶ ಜಮಖಂಡಿ, ಸದಾಶಿವ ಕಂಬಾರ, ಶಿವಾನಂದ ಅಕ್ಕಿಹುಗ್ಗಿ, ರಾಜು ಬೂಸಾರಿ ಸಏರಿದಂತೆ ಇನ್ನಿತರ ರೈತರು ಉಪಸ್ಥಿತರಿದ್ದರು