ಜಮಖಂಡಿ ಶುಗರ್ಸ್‌ಗೆ ಬೀಗ ಹಾಕಿ ರೈತರ ಪ್ರತಿಭಟನೆ

Farmers protest by locking down Jamkhandi Sugars

ಜಮಖಂಡಿ  19: ರೈತರ ಕಬ್ಬಿನ ಬಿಲ್ ನೀಡುವಂತೆ ವಿಜಯಪೂರ ಜಿಲ್ಲೆಯ ದೇವರಗೆಣ್ಣೂರ, ಕುಮಠೆ, ದೇವಾಪೂರ, ಲಿಂಗದಳ್ಳಿ, ತಾಜಪೂರ, ಮಂಗಳೂರ, ಕಗ್ಗೊಡ, ಮಮದಾಪೂರ ಸೇರಿದಂತೆ ವಿವಿಧ ಗ್ರಾಮದ ರೈತರು ಜಮಖಂಡಿ ಶುಗರ್ಸ್‌ಗೆ ಸಿಬ್ಬಂದಿಯನ್ನು ಹೊರಹಾಕಿ ಬೀಗ ಹಾಕಿ ಪ್ರತಿಭಟನೆ ನಡೆಸಿರುವ ಘಟನೆ ನಡೆದಿದೆ. 

ರೈತ ಮುಖಂಡ ಪುಟ್ಟು ಗಡದನ್ನವರ ಮಾತನಾಡಿ, ನಾವು ಐದು ತಿಂಗಳ ಹಿಂದೆ ಕಬ್ಬು ಕಳಿಸಿದ್ದೆವೆ, ಹಲವಾರು ಬಾರಿ ಅಲೆದಾಡಿದರು ರೈತರಿಗೆ ಕಬ್ಬಿನ ಬಿಲ್ ನೀಡುತ್ತಿಲ್ಲ, ಸಾಲ ಮಾಡಿಕೊಂಡು ರೈತರು ಪರದಾಡುತ್ತಿದ್ದಾರೆ ಕೂಡಲೇ ಬಿಲ್ ಪಾವತಿ ಮಾಡಬೇಕು ಎಂದು ಒತ್ತಾಯಿಸಿದರು. 

ರೈತರು ಕಬ್ಬು ಕಳಿಸಿದ 15 ದಿನಗಳಲ್ಲಿ ಬಿಲ್ ನೀಡಬೇಕು, ಆದರೆ ಐದು ತಿಂಗಳು ಕಳೆದರು ಇನ್ನೂ ಬಿಲ್ ನೀಡಿಲ್ಲ, ಅಧಿಕಾರಿಗಳು ಕೂಡಲೇ ಸಮಸ್ಯೆ ಪರಿಹರಿಸಬೇಕು ಇಲ್ಲದಿದ್ದರೆ ಜಿಲ್ಲಾಧಿಕಾರಿಗಳ ಕಾರ್ಯಾಲಯದ ಮುಂದೆ ಪ್ರತಿಭಟನೆ ಮಾಡಬೇಕಾಗುತ್ತದೆಂದು ಎಚ್ಚರಿಕೆಯನ್ನು ನೀಡಿದರು. 

ಬಸವರಾಜ ಹರನಟ್ಟಿ ಮಾತನಾಡಿ, ಎರಡು ಗಂಟೆಗಳ ಕಾಲ ಪ್ರತಿಭಟನೆ ನಡೆಸಿದರು ಯಾವುದೇ ಅಧಿಕಾರಿಗಳು ಹಾಗೂ ಸಕ್ಕರೆ ಕಾರ್ಖಾನೆಯ ಮಾಲಿಕರು ಬರಲಿಲ್ಲ, ಆದ್ದರಿಂದ ಎಲ್ಲ ರೈತರು ಮರಳಿ ಬಂದಿದ್ದೆವೆ, ಎರಡು ದಿನದಲ್ಲಿ ಬಿಲ್ ಪಾವತಿಸದಿದ್ದರೆ ಜಮಖಂಡಿ-ವಿಜಯಪೂರ ರಾಜ್ಯ ಹೆದ್ದಾರಿ ಬಂದ ಮಾಡಿ ಪ್ರತಿಭಟಣೆ ಮಾಡಲಾಗುವದು ಎಂದರು. 

ರಮೇಶ ಗಡದನ್ನವರ, ರಾಘು ಗುರಡ್ಡಿ, ಬಸವರಾಜ ಸುತಗುಂಡಿ, ಪಡೆಪ್ಪ ಕೊಡೆಕಲ್, ಅನಿಲ ಯಡಹಳ್ಳಿ, ಮಾಳು ಸಿದ್ದಾಪೂರ, ಸುರೇಶ ಬಾಡಗಿ ಸೇರಿದಂತೆ ಹಲವಾರು ರೈತರು ಇದ್ದರು.