ಡಾ. ಅಂಬೇಡ್ಕರ್ ಹಾಕಿಕೊಟ್ಟು ಮಾರ್ಗದರ್ಶನದಲ್ಲಿ ನಡೆದುಕೊಳ್ಳಿ: ಮಡ್ಡಿ

Follow the guidance of Dr. Ambedkar: Maddi

ಜಮಖಂಡಿ 15: ಡಾ,ಬಿ,ಆರ್,ಅಂಬೇಡ್ಕರ್ ಅವರು ದೇಶಕ್ಕೆ ಸಂವಿಧಾನವನ್ನು ನೀಡಿದ ಕಾರಣ ದೇಶದ ಜನತೆ ಸುಭ್ರತೆಯಿಂದ, ನೆಮ್ಮದಿಯಿಂದ ಜೀವನವನ್ನು ಸಾಗಿಸುತ್ತಿದ್ದಾರೆ. ಪ್ರತಿಯೊಬ್ಬರು ಅವರ ಹಾಕಿಕೊಟ್ಟ ಮಾರ್ಗದಲ್ಲಿ ಕಾನುನೂಗಳು ನಡೆಯುತ್ತಿವೆ. ಅವರು ಸಾಕಷ್ಟು ಕಷ್ಟಪಟ್ಟು ಸಂವಿಧಾನವನ್ನು ರಚನೆ ಮಾಡಿದ ಮಾಹಾನ ವ್ಯಕ್ತಿಯಾಗಿದ್ದಾರೆ. ಅವರ ಆದರ್ಶಗಳನ್ನು ನಾವೇಲ್ಲರೂ ರೂಡಿಸಿಕೊಳ್ಳಬೇಕು. ಅವರು ಹಾಕಿಕೊಟ್ಟು ಮಾರ್ಗದರ್ಶನದಲ್ಲಿ ನಡೆದುಕೊಳ್ಳಬೇಕೆಂದರು ನಗರದ ಪೋಲಿಸ್ ಇಲಾಖೆಯ ಸಿಪಿಐ ಮಲ್ಲಪ್ಪ ಮಡ್ಡಿ ಹೇಳಿದರು. 

ಅವರು ತಾಲೂಕಿನ ಆಲಗೂರ ಗ್ರಾಮದ ಆರ್,ಸಿ ಸೆಂಟೆರ್‌ನಲ್ಲಿ ಡಾ, ಬಿ,ಆರ್,ಅಂಬೇಡ್ಕರ ಅವರ 134ನೇ ಜಯಂತಿಯೋತ್ಸವ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು. 

ಇದೇ ಸಂದರ್ಭದಲ್ಲಿ ಹಿರಿಯ ಮುಖಂಡ ಸುಶೀಲಕುಮಾರ ಬೆಳಗಲಿ ಮಾತನಾಡಿದರು. ದಲಿತ ಮುಖಂಡ ರಾಜು ಮೇಲಿನಕೇರಿ, ವಕೀಲ ಬಿ,ಎನ್,ಗಸ್ತಿ ಶಹರ ಠಾಣೆಯ ಪಿಎಸ್‌ಐ ಅನೀಲ ಕುಂಬಾರ, ಗ್ರಾಮೀಣ ಠಾಣೆಯ ಪಿಎಸ್‌ಐ ಗಂಗಾಧರ ಪೂಜಾರಿ, ಅಪ್ಪು ಪೋತರಾಜ, ಶಶಿಕಾಂತ ತೇರದಾಳ, ರವಿ  

ದೊಡಮನಿ, ರಮೇಶ ಬಳೋಲಗಿಡದ, ಭರತೇಶ ಪಾನಕ್ಕನ್ನವರ, ರವಿ ಶಿಂಗೆ, ರಾಜಕುಮಾರ ಪಾಟೀಲ, ಕೇದಾರ​‍್ಪ ರಾವಳೋಜಿ ಸೇರಿದಂತೆ ಅನೇಕರು ಇದ್ದರು.