ಕ್ಯಾಲಿಫೋರ್ನಿಯಾ, ಏ 9,ಪ್ರಸ್ತುತ ಅಮೆರಿಕದಲ್ಲಿ ಸಿಲುಕಿರುವ ಭಾರತದ ಮಾಜಿ ಹಾಕಿ ಆಟಗಾರ ಅಶೋಕ್ ದಿವಾನ್, ಇಡೀ ಜಗತ್ತನ್ನು ಸ್ತಬ್ಧಗೊಳಿಸಿರುವ ಕೊರೊನಾ ವೈರಸ್ ಸಾಂಕ್ರಾಮಿಕ ರೋಗದ ಮಧ್ಯೆ ತಮಗೆ ಸಹಾಯ ಮಾಡುವಂತೆ ಭಾರತೀಯ ಅಧಿಕಾರಿಗಳನ್ನು ಕೋರಿದ್ದಾರೆ.1976ರ ಬೇಸುಗೆ ಒಲಿಂಪಿಕ್ಸ್ ನಲ್ಲಿ ಭಾರತವನ್ನು ಪ್ರತಿನಿಧಿಸಿದ್ದ ದಿವಾನ್, ಭಾರತೀಯ ಒಲಿಂಪಿಕ್ಸ್ ಅಧ್ಯಕ್ಷ ನಾರಿಂದರ್ ಬಾತ್ರಾ ಅವರಿಗೆ ಲಿಖಿತ ಪತ್ರ ಬರೆದಿದ್ದು, ತಮ್ಮ ನೆರವಿಗೆ ಧಾವಿಸುವಂತೆ ಯಾಚಿಸಿದ್ದಾರೆ.ಅಧಿಕ ರಕ್ತದೊತ್ತಡದಿಂದ ಬಳಲುತ್ತಿದ್ದ ಹಿನ್ನೆಲೆಯಲ್ಲಿ ಕ್ಯಾಲಿಫೋರ್ನಿಯಾದಲ್ಲಿ ಕಳೆದ ವಾರ ತುರ್ತು ಪರಿಸ್ಥಿತಿಯಲ್ಲಿ ಆಸ್ಪತ್ರೆಗೆ ಹಾಜರಾಗಬೇಕಿತ್ತು, ಕೊರೊನಾದಿಂದಾಗಿ ಇದೀಗ ಇಲ್ಲಿ ಸಿಲುಕಿದ್ದೇನೆ, ಎಂದು 65 ವರ್ಷದ ದಿವಾನ್ ಪತ್ರದಲ್ಲಿ ತಿಳಿಸಿದ್ದಾರೆ.ಏ.20 ರಂದು ತಾವು ಭಾರತಕ್ಕೆ ಹಿಂತಿರುಗಬೇಕಿತ್ತು ಎಂದು ದಿವಾನ್ ಹೇಳಿದ್ದಾರೆ. ಆದರೆ ಈಗಿನ ಪರಿಸ್ಥಿತಿಯಲ್ಲಿ ಅವರ ಪ್ರಯಾಣದ ದಿನಾಂಕ ಮುಂದೂಡಲಾಗಿದೆ. ಭಾರತ ಏಪ್ರಿಲ್ 14ರವರೆಗೆ ಲಾಕ್ ಡೌನ್ ಘೋಷಿಸಿದ್ದು, ಇದು ಮುಗಿಯವರೆಗೂ ಯಾವುದೇ ಕಾರಣಕ್ಕೂ ವಿಮಾನ ಹರಾಟಕ್ಕೆ ಅನುಮತಿ ನೀಡುವುದಿಲ್ಲ ಎಂದಿದೆ.