ಮಕ್ಕಳಿಗೆ ಉಚಿತ ಮಾಸ್ಕ್ ವಿತರಣೆ

ಹಾವೇರಿ: ಮೇ 14:  ಪ್ರಸಕ್ತ ಸಾಲಿನಲ್ಲಿ ಎಸ್.ಎಸ್.ಎಲ್.ಸಿ. ಪರೀಕ್ಷೆ ಬರೆಯುವ ಹಾವೇರಿ ತಾಲೂಕಿನ ವಿದ್ಯಾಥರ್ಿಗಳಿಗೆ 3,400 ಮಾಸ್ಕ್ಗಳನ್ನು  ಹಾಗೂ  ರಾಣೇಬೆನ್ನೂರ ತಾಲೂಕಿನ ವಿದ್ಯಾಥರ್ಿಗಳಿಗೆ 10 ಸಾವಿರ ಮಾಸ್ಕ್ಗಳನ್ನು ದಾನಿಗಳು ಉಚಿತವಾಗಿ ನೀಡಿದ್ದಾರೆ ಎಂದು  ಸಾರ್ವಜನಿಕ ಶಿಕ್ಷಣ ಇಲಾಖೆ ಉಪನಿದರ್ೆಶಕ ಅಂದಾನೆಪ್ಪ ವಡಗೇರಿ ಅವರು ತಿಳಿಸಿದ್ದಾರೆ.

ಹಾವೇರಿ ತಾಲೂಕಿನ ವಿದ್ಯಾಥರ್ಿಗಳಿಗೆ  ಸಾಯಿಶಕ್ತಿ ಡೆವಲಪರ್ಸ್ನ ರಾಜಶೇಖರ ಪಾಟೀಲ ಹಾಗೂ ಅವರ ಪತ್ನಿ ಶ್ರೀಮತಿ ಪಾರ್ವತಿ ಪಾಟೀಲ ಅವರು   ಹಾಗೂ ರಾಣೇಬೆನ್ನೂರು ತಾಲೂಕಿನ ವಿದ್ಯಾಥರ್ಿಗಳಿಗೆ  ಆರೇಮಲ್ಲಾಪೂರ ಸ್ವಾಮೀಜಿ ಅವರು ಮಾಸ್ಕ್ಗಳನ್ನು ಉಚಿತವಾಗಿ ನೀಡಿದ್ದಾರೆ. 

ಜಿಲ್ಲೆಯ  ಇತರ ತಾಲೂಕಿನ  ಎಸ್.ಎಸ್.ಎಲ್.ಸಿ.ಮಕ್ಕಳಿಗೂ ದಾನಿಗಳು ಮಾಸ್ಕ್ ಹಾಗೂ ಸ್ಯಾನಿಟೈಸರ್ ಒದಗಿಸಲು ಮುಂದೆ ಬಂದಲ್ಲಿ ಅವುಗಳನ್ನು ಮಕ್ಕಳಿಗೆ ವಿತರಿಸಲು ಕ್ರಮವಹಿಸಲಾಗುವುದು ಎಂದು ತಿಳಿಸಿದ್ದಾರೆ. ಈ ಸಂದರ್ಭದಲ್ಲಿ ಕ್ಷೇತ್ರ ಶಿಕ್ಷಣಾಧಿಕಾರಿ ಎಂ.ಎಚ್.ಪಾಟೀಲ ಹಾಗೂ ಮುಖ್ಯ ಶಿಕ್ಷಕ ಎಸ್.ಜಿ.ಕೋಟಿ ಉಪಸ್ಥಿತರಿದ್ದರು